Advertisement
ಈಗಿನ ಜೀವನ ಶೈಲಿಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಊಟಕ್ಕೆ ಕೂರುವುದು ಒಂದು ಆಶ್ಚರ್ಯವೇ ಸರಿ. ಕೊವಿಡ್ ಲಾಕ್ ಡೌನ್ ಈ ಕೆಲಸವನ್ನು ಸಾಧ್ಯ ಮಾಡಿದೆ.
Related Articles
Advertisement
ಕೆಲವು ಅಧ್ಯಯನಗಳ ಪ್ರಕಾರ ಕೆಳಗೆ ಕೂತು ಊಟಮಾಡುವವರು ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದಲ್ಲಿ ಅವರ ಆಯಸ್ಸು ವೃದ್ಧಿಸುತ್ತದೆ. ಮೊಣಕೈ ಹಾಗು ಕಾಲುಗಳಿಗೆ ವ್ಯಾಯಾಮ ದೊರೆಯುತ್ತದೆ, ಇದರಿಂದ ಸಂಧಿವಾತ ಹಾಗು ಓಸ್ಟಿಯೋ ಪೋರೆಸಿಸ್ ಕಾಯಿಲೆಗಳನ್ನು ತಡೆಯಬಹುದು. ಬರಿಗೈಯಲ್ಲಿ ಊಟ ಮಾಡುವಾಗ ನಮ್ಮ ಐದು ಬೆರಳುಗಳು ಸೇರಿ ಒಂದು ಮುದ್ರೆ ರಚನೆಗೊಳ್ಳು ತ್ತದೆ ಇದು ಪಂಚೇಂದ್ರಿಯಗಳನ್ನು ಪ್ರೇರೇಪಿಸಿ ಮೆದುಳಿಗೆ ಸಂದೇಶ ರವಾನಿಸುತ್ತದೆ, ಆಗ ಜೀರ್ಣ ಕ್ರಿಯೆಗೆ ಬೇಕಾದ ಜೀರ್ಣರಸಗಳು ಸಹಜವಾಗಿ ಬಿಡುಗಡೆಗೊಳ್ಳುತ್ತದೆ. ಕೈಯಲ್ಲಿ ತಿನ್ನುವಾಗ ಆಹಾರದ ಬಿಸಿ ಹಾಗೂ ಮೃದುತ್ವ ನಮ್ಮ ಗಮನಕ್ಕೆ ಬರುತ್ತದೆ.
ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಕೈ ಬೆರಳುಗಳು ಪಂಚ ತತ್ವಗಳಿಂದ ಕೂಡಿದೆ. ಹೆಬ್ಬೆರಳು – ಅಗ್ನಿ,ತೋರುಬೆರಳು – ವಾಯು, ಮಧ್ಯ ಬೆರಳು – ಆಕಾಶ, ಉಂಗುರ ಬೆರಳು – ಭೂಮಿ,ಕಿರು ಬೆರಳು – ನೀರು. ಊಟ ಮಾಡುವಾಗ ಬಾಗಿ ಏಳುವ ಪರಿ ಆಹಾರವನ್ನು ಸುಲಭವಾಗಿ ಜಠರಕ್ಕೆ ಜಾರಲು ಸಹಕರಿಸುತ್ತದೆ
ವೃದ್ಧರು, ಅಶಕ್ತರಿಗೆ ಡೈನಿಂಗ್ ಟೇಬಲ್ ಅತ್ಯವಶ್ಯಕ. ಯಾವ ಪದ್ದತಿಯನ್ನು ನಾವು ಅನುಸರಿಸುವುದಿಲ್ಲವೋ ಅದು ಕಾಲಕ್ರಮೇಣ ಕ್ಷೀಣಿಸುವುದರಲ್ಲಿ ಅನುಮಾನವಿಲ್ಲ . ಮಕ್ಕಳಲ್ಲಿ ಇದು ಅಸಾಧ್ಯವಾದಲ್ಲಿ ಮುಂದಿನ ಪೀಳಿಗೆಗೆ ಕಾಲು
ಮಡಿಸಲೂ ಅಶಕ್ತರಾಗುವ ಸ್ಥಿತಿ ಬರುವಲ್ಲಿ ಸಂದೇಹವಿಲ್ಲ.ಇಷ್ಟೆಲ್ಲಾ ತಿಳಿದ ಮೇಲೆ ಇನ್ನು ಮುಂದೆ ಸಾಧ್ಯವಾದಾಗಲೆಲ್ಲಾ ನೆಲದ ಮೇಲೆ ಕುಳಿತು ಆಹಾರ ಸೇವಿಸೊಣ.
-ಶ್ರೀರಕ್ಷಾ ಶಂಕರ್
ಎಸ್.ಡಿ.ಎಂ ಕಾಲೇಜು, ಉಜಿರೆ.
ಇದನ್ನೂ ಓದಿ : ಎಲ್ ಐ ಸಿಯ ಈ ಪಾಲಿಸಿಯ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ