Advertisement

ಸರಣಿ ಸೋಲಿನಿಂದ ತೀವ್ರ ನೋವಾಗಿದೆ: ಜಯಸೂರ್ಯ

10:14 AM Aug 16, 2017 | |

ಕೊಲಂಬೊ: ಭಾರತದ ವಿರುದ್ಧ ತವರಿನಲ್ಲೇ ಅನುಭವಿಸಿದ 3-0 ವೈಟ್‌ವಾಶ್‌ ಸೋಲಿನಿಂದ ತೀವ್ರ ನೋವಾಗಿದೆ ಎಂಬುದಾಗಿ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ, ಹಾಲಿ ಆಯ್ಕೆ ಸಮಿತಿ ಅಧ್ಯಕ್ಷ ಸನತ್‌ ಜಯಸೂರ್ಯ ಪ್ರತಿಕ್ರಿಯಿಸಿದ್ದಾರೆ. 

Advertisement

“ನನಗೆ ಈ ಸೋಲಿನಿಂದ ತೀವ್ರ ನೋವಾಗಿದೆ. ತವರಿನಲ್ಲಿ ಸರಣಿ ಸೋಲುವುದನ್ನು ಯಾವತ್ತೂ ಅರಗಿಸಿಕೊಳ್ಳಲಾಗುವುದಿಲ್ಲ. ಅದರಲ್ಲೂ ಈ ರೀತಿಯಾಗಿ ಹೀನಾಯವಾಗಿ ಸೋಲುವುದನ್ನು ಸಹಿಸಿಕೊಲ್ಲುವುದು ಬಜಳ ಕಷ್ಟ. ನಾವು ತವರಿನಲ್ಲಿ ಭಾರತದ ವಿರುದ್ಧ ಯಾವತ್ತೂ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದೇವೆ. 2015ರಲ್ಲಿ ಸರಣಿ ಸೋತರೂ ಮೊದಲ ಪಂದ್ಯವನ್ನು ಗೆದ್ದ ಸಾಧನೆ ನಮ್ಮದಾಗಿತ್ತು. ಆದರೆ ಈ ಸಲದ ಸೋಲು ಅತ್ಯಂತ ಆಘಾತಕಾರಿ. ಇದಕ್ಕೇನು ಕಾರಣ ಎಂಬುದನ್ನು ಆಟಗಾರರು, ತರಬೇತುದಾರರೆಲ್ಲರೂ ಕೂಡಿ ಆತ್ಮಾವಲೋಕನ ಮಾಡಬೇಕಿದೆ. ಸಮಸ್ಯೆಗಳಿಗೆಲ್ಲ ಶೀಘ್ರವೇ ಸೂಕ್ತ ಪರಿಹಾರ ಒದಗಿಸಬೇಕಿದೆ…’ ಎಂದು ಗತ ಕಾಲದ ಬಿಗ್‌ ಹಿಟ್ಟರ್‌ ಜಯಸೂರ್ಯ ಅಭಿಪ್ರಾಯಪಟ್ಟರು.

“ಶ್ರೀಲಂಕಾದ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಅಂತರವಿದೆ. ಇವೆರಡರ ನಡುವೆ ಹೆಚ್ಚಿನ ಅಭ್ಯಾಸ ಹಾಗೂ ತರಬೇತಿಯ ಸೇತುವೆಯನ್ನು ನಿರ್ಮಿಸಿ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಸುದೀರ್ಘಾವಧಿಯ ಪರಿಹಾರನ್ನು ಕಂಡುಕೊಳ್ಳ ಬೇಕಿದೆ. ಕ್ಲಬ್‌ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ನಡುವೆ ಭಾರೀ ಅಂತರವಿದೆ. ಶ್ರೇಷ್ಠ ಮಟ್ಟದ ತರಬೇತಿ ಹಾಗೂ ತರಬೇತುದಾರರಿಂದ ಯುವ ಆಟಗಾರರನ್ನು ತಾಳ್ಮೆಯಿಂದ ಪಳಗಿಸುವ ಕೆಲಸ ಆಗಬೇಕಿದೆ’ ಎಂದು ಜಯಸೂರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next