Advertisement

ಸಂಕಷ್ಟದಲ್ಲಿ ಲಂಕಾ: ನೆರವು ನೀಡಿದ ಭಾರತ ”ದೊಡ್ಡಣ್ಣ”ಎಂದ ಜಯಸೂರ್ಯ

11:31 AM Apr 07, 2022 | Team Udayavani |

ಕೊಲಂಬೋ : ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತೀವ್ರ ಆರ್ಥಿಕ ಸಂಕಷ್ಟದ ವೇಳೆ ನೆರವು ನೀಡಿದ ಭಾರತವನ್ನು ನಮ್ಮ ದೇಶದ ”ದೊಡ್ಡಣ್ಣ” ಎಂದು ಕರೆದಿದ್ದಾರೆ.

Advertisement

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂದರ್ಶನದಲ್ಲಿ , ಜಯಸೂರ್ಯ ಅವರು, ”ಜನರು ಈ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ದುರದೃಷ್ಟಕರ. ಅವರು ಹೀಗೆ ಬದುಕಲು ಸಾಧ್ಯವಿಲ್ಲ ಎಂದು ಪ್ರತಿಭಟನೆ ಆರಂಭಿಸಿದ್ದಾರೆ. ಗ್ಯಾಸ್ ಕೊರತೆ ಉಂಟಾಗಿದ್ದು, ಗಂಟೆಗಟ್ಟಲೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ” ಎಂದು  ಲಂಕಾ ಪರಿಸ್ಥಿತಿಯ ಕುರಿತು ವಿವರಿಸಿದ್ದಾರೆ.

”ಶ್ರೀಲಂಕಾ ಸರ್ಕಾರಕ್ಕೆ ತಾವು ಬಳಲುತ್ತಿರುವುದನ್ನು ತೋರಿಸಲು ಜನರು ಹೊರಗೆ ಬರಲು ಮತ್ತು ಪ್ರತಿಭಟಿಸಲು ಪ್ರಾರಂಭಿಸಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಸರಿಯಾಗಿ ಗಮನಹರಿಸದಿದ್ದರೆ ಅನಾಹುತವಾಗುತ್ತದೆ. ಇದರ ಜವಾಬ್ದಾರಿಯು ಪ್ರಸ್ತುತ ಸರ್ಕಾರಕ್ಕೆ ಹೋಗುತ್ತದೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

”ನಮ್ಮ ದೇಶದ ನೆರೆಯ ಮತ್ತು ದೊಡ್ಡಣ್ಣನಾಗಿ, ಭಾರತ ಯಾವಾಗಲೂ ನಮಗೆ ಸಹಾಯ ಮಾಡಿದೆ. ನಾವು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಆಭಾರಿಯಾಗಿದ್ದೇವೆ. ಸದ್ಯದ ಸನ್ನಿವೇಶದಿಂದ ನಮಗೆ ಬದುಕುವುದು ಸುಲಭವಲ್ಲ. ಭಾರತ ಮತ್ತು ಇತರ ದೇಶಗಳ ಸಹಾಯದಿಂದ ಇದರಿಂದ ಹೊರಬರಲು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next