Advertisement

ಸ್ಯಾಮ್‌ ಸಂಗ್‌ ಗ್ಯಾಲಕ್ಸಿ ಎ8 ಸ್ಟಾರ್ 

03:25 PM Aug 24, 2018 | |

ಸ್ಯಾಮ್‌ ಸಂಗ್‌ ಗ್ಯಾಲಕ್ಸಿ ಎ8 ಸ್ಟಾರ್‌ ಜೂನ್‌ 18ರಂದು ಮಾರುಕಟ್ಟೆಗೆ ಬಂದಿದ್ದು, ಆ. 21ರಂದು ಅಂದರೆ ಮಂಗಳವಾರವಷ್ಟೇ ಭಾರತದ ಮಾರುಕಟ್ಟೆಗೆ ಎಂಟ್ರಿ ಪಡೆದಿದೆ. ವಿಶಿಷ್ಟ ಫೀಚರ್‌ ಗಳಿಂದ ಎಲ್ಲರ ಗಮನ ಸೆಳೆಯುತ್ತಿರುವ ಈ ಸ್ಮಾರ್ಟ್‌ ಫೋನ್‌ ಸಾಕಷ್ಟು ಬೇಡಿಕೆಯನ್ನೂ ಹೊಂದಿದೆ.

Advertisement

ಸ್ಯಾಮ್‌ ಸಂಗ್‌ ಗ್ಯಾಲಕ್ಸಿ ಎ8 ಸ್ಟಾರ್‌ ಸ್ಮಾರ್ಟ್‌ ಫೋನ್‌ 6.28 ಇಂಚು ಟಚ್‌ ಸ್ಕ್ರೀನ್‌ ಡಿಸ್‌ಪ್ಲೇ ಹೊಂದಿದೆ. ಇದರ ರೆಸಲ್ಯೂಷನ್‌ 1880 x 2220 ಫಿಕ್ಸಲ್‌ ಆಗಿದೆ. ಇದು ಓಕ್ಟೋ ಕೋರ್‌ ಪ್ರೊಸೆ ಸರ್‌ ಆಗಿದ್ದು, 4 ಜಿಬಿ ರ್ಯಾಮ್‌ ಅನ್ನು ಒಳ ಗೊಂಡಿದೆ. ಇಂಟರ್ನಲ್‌ ಸೋರೇಜ್‌ ಸಾಮರ್ಥ್ಯ 64 ಜಿಬಿ ಇದ್ದು, 256 ಜಿಬಿ ವರೆಗೆ ಇದನ್ನು ವಿಸ್ತರಿಸಬಹುದಾಗಿದೆ. 16 ಮೆಗಾಪಿಕ್ಸೆಲ್‌ ರಿಯರ್‌ ಕೆಮರಾವು ಎಲ್‌ಇಡಿ ರಿಯರ್‌ ಫ್ಲ್ಯಾಶ್‌ ಜತೆಗೆ 24 ಮೆಗಾ ಫಿಕ್ಸಲ್‌ ಫ್ರೆಂಟ್‌ ಶೂಟ್‌ ಸೆಲ್ಫಿ ಕೆಮ ರಾ ವನ್ನು ಹೊಂದಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ8 ಸ್ಟಾರ್‌ 3,700 ಎಂಎಎಚ್‌ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್‌ 162.40 x 77.00 x 7. 50 ಎತ್ತರ, ಅಗಲ ಮತ್ತು ಥಿಕ್‌ನೆಸ್‌ ಹೊಂದಿದೆ. ಇದರ ಭಾರ 188 ಗ್ರಾಂ. 

ಡ್ನೂಯೆಲ್‌ ಸಿಮ್‌ ಅನ್ನು ಇದರಲ್ಲಿ ಅಳವಡಿಸಬಹುದಾಗಿದ್ದು, ಜಿಎಸ್‌ಎಂ, ಸಿಡಿಎಂಎ, ಜಿಎಸ್‌ಎಂ ಆಪ್ಶನ್‌ಗಳಿಂದ ಲಭ್ಯವಿದೆ. ಕಪ್ಪು, ಬಿಳಿ ಬಣ್ಣದ ಆಯ್ಕೆ ಇದರಲ್ಲಿದ್ದು, ವೈಫೈ, ಜಿಪಿಎಸ್‌, ಬ್ಲೂ ಟೂತ್‌ ಗಳಿಂದ ಸಂಪರ್ಕ ಸಾಧಿಸಬಹುದಾಗಿದೆ. ಫಿಂಗರ್ ಪ್ರಿಂಟ್‌, ಪ್ರಾಕ್ಸಿ ಮಿಟಿ, ಆ್ಯಕ್ಸೆ ಲೆರೋ ಮೀಟರ್‌, ಆ್ಯಂಬಿಟ್‌ ಲೈಟ್‌ ಸೆನ್ಸರ್‌ ಇದರಲ್ಲಿದ್ದು, ಅತ್ಯಾಧುನಿಕ ಫೀಚರ್‌ಗಳಿಂದ ಗ್ರಾಹಕರ ಮನ ಗೆಲ್ಲುವಂತಿದೆ. ಆ್ಯಂಡ್ರಾಯ್ಡ 8 ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಲಭ್ಯವಿರುವ ಈ ಫೋನ್‌ ನಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಅಳವಡಿಸಬಹುದಾಗಿದೆ. ಒಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿರುವ ಈ ಫೋನ್‌ನಲ್ಲಿ ಸ್ನ್ಯಾಪ್‌ ಡ್ರ್ಯಾಗನ್‌ 660 ಅನ್ನೂ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next