ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ ಎಸ್ ಪೆನ್ ಸ್ಟ್ರೆಲಸ್ ಬ್ಲೂಟೂತ್ ಬೆಂಬಲದೊಂದಿಗೆ ಬರಲಿದೆ. ಇದು ವಿವಿಧ
ಕಾರ್ಯಗಳನ್ನು ರೀಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸಲಿದೆ. ಇನ್ನು ಗ್ಯಾಲಕ್ಸಿ ಟ್ಯಾಬ್ ಎಸ್ 4 ತೆಳ್ಳಗೆ ಇದ್ದು ಯಾವುದೇ ಹೋಮ್ ಬಟನ್ ಆಯ್ಕೆ ಇರುವುದಿಲ್ಲ. ಇನ್ನು ಪೆನ್ ಗ್ಯಾಲಕ್ಸಿ ನೋಟ್ 9 ಡಬಲ್ ಬ್ಲೂಟೂತ್ ಕಂಟ್ರೋಲರ್ ಹೊಂದಿದ್ದು ಇದರಿಂದ ಸಂಗೀತವನ್ನು ನಿಯಂತ್ರಿಸುವುದು ಮತ್ತು ಚಿತ್ರಗಳನ್ನು ಸೆರೆಹಿಡಿಯುವ ಕೆಲಸಗಳು ಇನ್ನು ಸುಲಭವಾಗಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 4 ನ ಚಿತ್ರಗಳು ಈಗಾಗಲೇ ಆನ್‌ಲೈನ್ ಗಳಲ್ಲಿ ಹರಡಿದ್ದು, ಈ ಟ್ಯಾಬ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಯಾಮ್ಸಂಗ್‌ನ ಗ್ಯಾಲಕ್ಸಿ ಎಸ್ ಪೆನ್ ಟೀಸರ್ ಮಾಹಿತಿ ತುಣುಕುಗಳಿಂದ ಸಾಕಷ್ಟು ವಿಶ್ವಾಸಾರ್ಹತೆ ಹುಟ್ಟುಮಾಡಿದೆ.
ಜನಪ್ರಿಯ ಟಿಪ್ಸ್ಟರ್ ಐಸ್ ಯೂನಿವರ್ಸ್ ವೈಬೋ ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿರುವಂತೆ ಪ್ರಮುಖ ಅಪ್ ಗ್ರೇಡ್ ಸ್ಯಾಮ್ಸಂಗ್ ಹೊಸ ರಿಮೋಟ್ ವೈಶಿಷ್ಟ್ಯಗಳ ಸೇರ್ಪಡೆಯಾಗಿದೆ. ಇದರಲ್ಲಿ ಬ್ಲೂಟೂತ್ ಕಂಟ್ರೋಲರ್ ಆಪ್ಷನ್‌ನಿಂದ ಸಂಗೀತ ಪ್ಲೇಬ್ಯಾಕ್ ನಿಯಂತ್ರಣಗಳು ಮತ್ತು ದೂರದಿಂದ ಫೋಟೋ ಕ್ಯಾಪ್ಚರ್ ಅನ್ನು ನಿಯಂತ್ರಿಸುವ ಸಾಮರ್ಥ್ಯ ಲಭಿಸಲಿದೆ.
ಟ್ಯಾಬ್ ಎಸ್ 4ನ ಬಗ್ಗೆ ಸಾಕಷ್ಟು ವದಂತಿಗಳಿದ್ದು, ಕೆಲ ವಿಶೇಷಕ ತಾಣಗಳ ಪ್ರಕಾರ ಇದರಲ್ಲಿ ಸ್ಯಾಮ್ಸಂಗ್ ಲಾಂಛನವನ್ನು ಹಿಂಭಾಗಕ್ಕೆ ಸ್ಥಳಾಂತರಿಸಲಾಗಿದೆ. ಮುಂಭಾಗದಲ್ಲಿ ಐರಿಸ್ ಸ್ಕ್ಯಾನರ್‌ಗೆ ಆದ್ಯತೆ ನೀಡಲಾಗಿದೆ. ಇನ್ನು ಇದು 10.5-ಇಂಚಿನ 2560×1600 ಪಿಕ್ಸೆಲ್ ಸ್ಕ್ರೀನ್ ಮತ್ತು 2.3GHz ಆಕ್ಟಾ-ಕೋರ್ ಕ್ವಾಲ್ಕಾಮ್ ಪ್ರೊಸೆಸರ್ ಅಡ್ರಿನೋ 540 (GPU) ಜಿಪಿಯು, 4 GB RAM ಮತ್ತು 64 ಎಆ ಆಂತರಿಕ ಸ್ಟೋರೇಜ್ ಇರಲಿದೆ. 12 ಮೆಗಾಪಿಕ್ಸೆಲ್ ಹಿಂಬದಿ ಕೆಮರಾ, 7 ಮೆಗಾಪಿಕ್ಸೆಲ್ ಸೆಲ್ಫ್ ಕೆಮರಾ ಸೇರಿವೆ. ಆಂಡ್ರಾಯ್ಡ 8.0 ಓರಿಯೊ ವೈ-ಫೈ, ಜಿಪಿಎಸ್, ಮತ್ತು ಬ್ಲೂಟೂತ್ ನಂತಹ ಸಂಪರ್ಕ ಆಯ್ಕೆಗಳು ಇರಲಿವೆ.