Advertisement

ಸಂಗೀತಾದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 9 ಬಿಡುಗಡೆ

12:38 PM Aug 27, 2018 | |

ಬೆಂಗಳೂರು: ಸ್ಯಾಮ್‌ಸಂಗ್‌ ಇಂಡಿಯಾ ತನ್ನ ಅತ್ಯಾಧುನಿಕ ಗ್ಯಾಲಕ್ಸಿ ನೋಟ್‌ 9 ಸ್ಮಾರ್ಟ್‌ಫೋನ್‌ ಅನ್ನು ಸಂಗೀತಾ ಮೊಬೈಲ್ಸ್‌ ಸಹಯೋಗದಲ್ಲಿ ಬಿಡುಗಡೆ ಮಾಡಿದೆ. ಕೋರಮಂಗಲದ ಫೋರಂ ಮಾಲ್‌ನ ಸಂಗೀತಾ ಮಳಿಗೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ನೂತನ ಫೋನನ್ನು ಅನಾವರಣಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಸಂಗೀತಾ ಮೊಬೈಲ್ಸ್‌ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ ಚಂದ್ರ ಅವರು ಮಾತನಾಡಿ, ಸಂಗೀತಾ ಮೊಬೈಲ್ಸ್‌ ಸದಾ ಗ್ರಾಹಕರನ್ನು ತೃಪ್ತಿಪಡಿಸುವ ತತ್ವದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದಕ್ಕಾಗಿ ಗ್ರಾಹಕರ ವಿಶ್ವಾಸ ಗಳಿಸುವುದು ಬಹಳ ಮುಖ್ಯವಾಗಿದೆ. ರೀಟೇಲ್‌ ಮಾರಾಟ ಕ್ಷೇತ್ರದಲ್ಲಿ ಸಂಗೀತಾ ಅತ್ಯಂತ ಜನಪ್ರಿಯವಾಗಿದ್ದು, ಇಂದು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 9 ಪರಿಚಯಿಸುವ ಮೂಲಕ ಗ್ರಾಹಕರಿಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ ನೀಡುವಲ್ಲಿ ಮತ್ತೂಂದು ಹೆಜ್ಜೆ ಇರಿಸಿದೆ ಎಂದರು.

ಗ್ಯಾಲಕ್ಸಿ ನೋಟ್‌ 9 ವಿಶೇಷತೆ: ಗ್ಯಾಲಕ್ಸಿ ನೋಟ್‌ 9 ಹಿಂದಿನ ಗ್ಯಾಲಕ್ಸಿ ಪರಂಪರೆಯಲ್ಲಿ ಹೊರಬಂದಿದೆ. ಹೊಸ ಎಸ್‌ ಪೆನ್‌ನೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆ ನೀಡುವ ಗ್ಯಾಲಕ್ಸಿ ನೋಟ್‌9ನ ರಿಮೋಟ್‌ ಕಂಟ್ರೋಲ್‌ ಮೂಲಕ ಸುಲಭವಾಗಿ ಸೆಲ್ಫಿ ತೆಗೆದುಕೊಳ್ಳಬಹುದು. ಅತ್ಯಂತ ಜಾಣ್ಮೆಯ ಕ್ಯಾಮರಾ ಇದರಲ್ಲಿದ್ದು, ಆಲ್‌-ನ್ಯೂ ಪಿಸಿ ಅನುಭವವನ್ನು ಸ್ಯಾಮ್‌ಸಂಗ್‌ ಡೆಕ್ಸ್‌ ಮತ್ತು ಎಚ್‌ಡಿಎಂಐ ಕೇಬಲ್‌ನೊಂದಿಗೆ ಪಡೆಯಬಹುದು.

ನೋಟ್‌ 9 ಶಕ್ತಿಯುತ ಡಿವೈಸ್‌ ಆಗಿದ್ದು, ಲ್ಯಾಪ್‌ಟಾಪ್‌ನ ಶಕ್ತಿ, ಮೀಡಿಯಾ ಸ್ಟ್ರೀಮಿಂಗ್‌ ಡಿವೈಸ್‌, ಪವರ್‌ ಬ್ಯಾಂಕ್‌, ಎಕ್ಸ್‌ಟರ್ನಲ್‌ ಹಾರ್ಡ್‌ ಡ್ರೆçವ್‌, ಗೇಮಿಂಗ್‌ ಕನ್ಸೋಲ್‌, ಡಿಎಸ್‌ಎಲ್‌ಆರ್‌ ಕ್ಯಾಮರಾ ಮತ್ತು ಸೆಲ್ಫಿ ಸ್ಟಿಕ್‌ ಹೊಂದಿದೆ. 128 ಜಿಬಿ ಮತ್ತು 512 ಜಿಬಿಗೆ ಕ್ರಮವಾಗಿ 67,000 ರೂ. ಮತ್ತು 84,900 ರೂ. ಬೆಲೆ ಇದೆ. ಮಿಡ್‌ನೈಟ್‌ ಬ್ಲಾಕ್‌, ಮೆಟಾಲಿಕ್‌ ಕಾಪರ್‌ ಮತ್ತು ಓಷನ್‌ ಬ್ಲೂ ವಿಶಿಷ್ಟ ಬಣ್ಣಗಳಲ್ಲಿ ಲಭ್ಯ ಎಂದು ಅವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next