ಲಕ್ನೋ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ “ಸಾಮ್ರಾಟ್ ಪ್ರಥ್ವಿರಾಜ್” ಸಿನಿಮಾದ ವಿಶೇಷ ಪ್ರದರ್ಶನವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ (ಜೂನ್ 02) ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ವೀಕ್ಷಿಸಿದ್ದು, ರಾಜ್ಯದಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದು ಯೋಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ರಾಜ್ಯಸಭೆ ಮೂರನೇ ಅಭ್ಯರ್ಥಿಯೂ ಗೆಲ್ಲುತ್ತಾರೆ, ಕಾದು ನೋಡಿ : ಸಿ.ಟಿ.ರವಿ
ಲಕ್ನೋದ ಲೋಕ್ ಭವನ್ ನಲ್ಲಿ ಸಾಮ್ರಾಟ್ ಪ್ರಥ್ವಿರಾಜ್ ಚಿತ್ರದ ವಿಶೇಷ ಪ್ರದರ್ಶನ ನಡೆದಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್, ನಟಿ ಮಾನುಷಿ ಚಿಲ್ಲರ್ ಮತ್ತು ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಉಪಸ್ಥಿತರಿದ್ದರು.
ಉತ್ತರಪ್ರದೇಶದಲ್ಲಿ ಸಾಮ್ರಾಟ್ ಪ್ರಥ್ವಿರಾಜ್ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ಘೋಷಿಸಿರುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಚಿತ್ರದ ಬಗ್ಗೆ ಶ್ಲಾಘಿಸಿರುವ ಯೋಗಿ ಅವರು, ಈ ಸಿನಿಮಾ ಯೋಗ್ಯವಾಗಿದೆ. ನಮ್ಮ ಇತಿಹಾಸ ಸಾರುವ ಈ ಚಿತ್ರವನ್ನು ಕುಟುಂಬ ಸಹಿತವಾಗಿ ವೀಕ್ಷಿಸಬೇಕೆಂದು ಯೋಗಿ ಈ ಸಂದರ್ಭದಲ್ಲಿ ಹೇಳಿದರು.
ಶುಕ್ರವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕಾನ್ಪುರ್ ದೆಹಾತ್ ಗೆ ಭೇಟಿಯ ಸಿದ್ಧತೆಯ ಪರಿಶೀಲನೆಗಾಗಿ ತೆರಳಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರು ಸಿನಿಮಾ ವೀಕ್ಷಣೆಗೆ ತಡವಾಗಿ ಆಗಮಿಸಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಾರಿಗೆ ಸಚಿವ ದಯಾ ಶಂಕರ್ ಸಿಂಗ್, ಜೆಪಿಎಸ್ ರಾಸ್ತೋರೆ, ಎ.ಕೆ.ಶರ್ಮಾ, ನಂದ ಗೋಪಾಲ್ ಗುಪ್ತಾ ಮತ್ತು ಇತರ ಸಚಿವರು, ಶಾಸಕರು ಸಾಮ್ರಾಟ್ ಪ್ರಥ್ವಿರಾಜ್ ಸಿನಿಮಾವನ್ನು ವೀಕ್ಷಿಸಿದ್ದರು.