Advertisement

ಸ್ಮಾರ್ಟ್‌ ಐಡಿಯಾಗಳ ಮಾದರಿ ಪಥ

06:42 PM Jul 02, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಸುಮಾರು 700 ಮೀಟರ್‌ ಉದ್ದದ ರಸ್ತೆ ಹಲವು ವಿಶೇಷತೆಗಳನ್ನು ಹೊಂದಿದೆ. ಭವಿಷ್ಯದಲ್ಲಿ ರಸ್ತೆ ಅಗೆಯುವುದಕ್ಕೆ ಅವಕಾಶ ನೀಡದೆ ವಿವಿಧ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಮರಗಳ ರಕ್ಷಣೆ, ಸೈಕಲ್‌ ಮಾರ್ಗಕ್ಕೂ ಅವಕಾಶದ ಮೂಲಕ ನಿಜಕ್ಕೂ ಸ್ಮಾರ್ಟ್‌ ರಸ್ತೆಯಾಗಿ ಗೋಚರಿಸುತ್ತಿದೆ. ಗೋಕುಲ ರಸ್ತೆ ಅಕ್ಷಯ ಪಾರ್ಕ್‌ನಿಂದ ಮಂಜುನಾಥ ನಗರ ಮೈದಾನದವರೆಗೆ ಸ್ಮಾರ್ಟ್‌ ಸಿಟಿ ಪ್ಯಾಕೇಜ್‌ 6 ಅಡಿಯಲ್ಲಿ ನಿರ್ಮಿಸುತ್ತಿರುವ ರಸ್ತೆ ಇದು. ಕಳೆದ ಕೆಲವು ದಿನಗಳಿಂದ ನಗರದ ಬಹುತೇಕ ಕಡೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹಲವಾರು ಕಾಮಗಾರಿಗಳು ಜಾರಿಯಲ್ಲಿದ್ದು, ಅದರಲ್ಲಿ ಈ ಯೋಜನೆಯೂ ಒಂದಾಗಿದೆ. ಎಲ್ಲ ರಸ್ತೆಗಳಂತೆ ಈ ರಸ್ತೆಯ ಎರಡು ಬದಿ ಚರಂಡಿ, ಪಕ್ಕದಲ್ಲಿ ಫುಟ್‌ಪಾತ್‌, ಭೂಮಿ ಕೆಳಭಾಗದಲ್ಲಿ ಕೇಬಲ್‌ಗ‌ಳ ಅಳವಡಿಕೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಶಾಸಕ ಅರವಿಂದ ಬೆಲ್ಲದ ಅವರ ವಿಶೇಷ ಕಾಳಜಿಯಿಂದ ಈ ರಸ್ತೆಗೆ ಹೊಸ ರೂಪ ಸಿಕ್ಕಂತಾಗಿದೆ.

ಟೆಂಡರ್‌ಶ್ಯೂರ್‌ ರಸ್ತೆ ಮಾದರಿಯಲ್ಲೇ ಅಭಿವೃದ್ಧಿ ಪಡಿಸಲಾಗುತ್ತಿದೆ. ಸುಮಾರು 700 ಮೀಟರ್‌ ರಸ್ತೆ ಇದಾಗಿದ್ದು, 18-19 ಮೀಟರ್‌ ಅಗಲ ಹೊಂದಿದೆ. ರಸ್ತೆಯ ಅಕ್ಕಪಕ್ಕದಲ್ಲಿ ವಿದ್ಯುತ್‌ ಕಂಬಗಳನ್ನು ಹಾಕುವುದು ಹಾಗೂ ಫೇವರ್ ಅಳವಡಿಕೆ ಸೇರಿದಂತೆ ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next