Advertisement

ಇಂದು ಅರಂತೋಡು ಕೇಂದ್ರದ ಸಂತ್ರಸ್ತರು ಸಂಪಾಜೆಗೆ ಸ್ಥಳಾಂತರ

01:14 PM Aug 27, 2018 | Team Udayavani |

ಸುಳ್ಯ: ಸಂಪಾಜೆ, ಕಲ್ಲುಗುಂಡಿ ಹಾಗೂ ಅರಂತೋಡು ಪರಿಹಾರ ಕೇಂದ್ರಗಳಲ್ಲಿ ಒಟ್ಟು 76 ಕುಟುಂಬಗಳು ಇನ್ನೂ ಉಳಿದು ಕೊಂಡಿದ್ದು , ಅರಂತೋಡು ತೆಕ್ಕಿಲ್‌ ಖಾಸಗಿ ಸಭಾಭವನದಲ್ಲಿ ಇರುವ 16 ಕುಟುಂಬಗಳನ್ನು ಆ. 27ರಂದು ಸಂಪಾಜೆ ಕೇಂದ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

Advertisement

ಅರಂತೋಡಿನಲ್ಲಿ 16, ಸಂಪಾಜೆ ಯಲ್ಲಿ 24 ಹಾಗೂ ಕಲ್ಲುಗುಂಡಿಯಲ್ಲಿ 36 ಕುಟುಂಬಗಳು ಇವೆ. ತೆಕ್ಕಿಲ್‌ ಸಭಾಭವನದಲ್ಲಿ ಆ. 17 ರಿಂದ ಸಂತ್ರಸ್ತರಿಗೆ ಉಚಿತ ವಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿ ವಿವಾಹ ಮೊದಲಾದ ಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ ಸಂತ್ರಸ್ತರನ್ನು ಸ್ಥಳಾಂ ತರಿಸಲು ನಿರ್ಧರಿಸಲಾ ಗಿದೆ. ಅನಂತರ ಸಂಪಾಜೆ ಹಾಗೂ ಕಲ್ಲುಗುಂಡಿ ಕೇಂದ್ರಗಳು ಮಾತ್ರ ಕಾರ್ಯಚರಿಸಲಿವೆ.

ಸಂತ್ರಸ್ತರ ಪರಿಹಾರ ಕೇಂದ್ರ ಗಳಲ್ಲಿ ಪ್ರತಿದಿನ ಸುಳ್ಯ ಆರೋಗ್ಯ ಕೇಂದ್ರ ಮತ್ತು ಕೆವಿಜಿ ಮೆಡಿಕಲ್‌ ಕಾಲೇಜು ವತಿ ಯಿಂದ ಸಂತ್ರಸ್ತರ  ಆರೋಗ್ಯ ತಪಾ ಸಣೆ ನಡೆಯುತ್ತಿದೆ. ಕೆಲವು ಸಂತ್ರಸ್ತರಿಗೆ ಬಿಎಸ್‌ಎನ್‌ಎಲ್‌ ವತಿ
ಯಿಂದ ಉಚಿತ ಸಿಮ್‌ ಸೌಲಭ್ಯವನ್ನು ಒದಗಿಸಲಾಗಿದೆ. ಅಗತ್ಯ ವಸ್ತುಗಳನ್ನು ದಾನಿಗಳು ನೆರವಿನ ರೂಪ ದಲ್ಲಿ ಈಗಲೂ ನೀಡುತ್ತಿದ್ದಾರೆ. ಮಳೆ ಕಡಿಮೆಯಾಗಿದೆ.

ರವಿವಾರ ಸುಳ್ಯ-ಕರಿಕೆ-ಭಾಗಮಂಡಲ ಮಾರ್ಗವಾಗಿ ಮಡಿಕೇರಿಗೆ ತೆರಳಿದ ಮಿನಿಬಸ್‌ ಭಾಗಮಂಡಲ ಬಳಿ ಹಾಳಾಗಿದೆ. ಬೆಳಗ್ಗೆ ಸುಳ್ಯದಿಂದ 11.15ಕ್ಕೆ ಹೊರಟ ಬಸ್‌ ಇದಾಗಿದೆ. ಬಳಿಕ ಖಾಸಗಿ ಬಸ್‌ ಮೂಲಕ ಪ್ರಯಾಣಿಕರನ್ನು ಮಡಿಕೇರಿಗೆ ಕಳುಹಿಸಿಕೊಡಲಾಯಿತು. 30ರಿಂದ 35 ಪ್ರಯಾಣಿಕರ ಸಾಮರ್ಥ್ಯವಿರುವ ಬಸ್‌ನಲ್ಲಿ 70ಕ್ಕೂ ಅಧಿಕ ಪ್ರಯಾಣಿಕರನ್ನು ಹೇರಿಕೊಂಡು ಹೋಗಬೇಕಾದ ಪ್ರಮೇಯ ಸೃಷ್ಟಿಯಾಗಿದೆ. ಹಾಗಾಗಿ ಇನ್ನಷ್ಟು ಹೆಚ್ಚಿನ ಮಿನಿ ಬಸ್‌ ಒದಗಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.

ಕಾರ್ಯಾಚರಣೆ ಮುಂದುವರಿಕೆ
ಜೋಡುಪಾಲ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ದುರಸ್ತಿ ಹಾಗೂ ಕಿಂಡಿ ಅಣೆಕಟ್ಟು, ಸೇತುವೆ ಬಳಿ ಮರ ತೆರವು ಕಾರ್ಯಾಚರಣೆ ಮುಂದುವರಿದಿದೆ. ಗೃಹರಕ್ಷಕ ದಳ, ಅಗ್ನಿಶಾಮಕ ದಳ ಹಾಗೂ ಊರವರು ಸಹಭಾಗಿತ್ವ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next