ಬೆಂಗಳೂರು ಜನಪರ ಚಳುವಳಿಗಳಿಗೆ ಜೀವನಾಡಿ ಯಾಗಿದ್ದ ಸಾಹಿತಿ ಲಕ್ಷ್ಮಣ್ ಅವರ ಆತ್ಮಕತೆ “ಸಂಬೋಳಿ’ಯ ಕೆಲವು ಅಧ್ಯಾಯಗಳನ್ನು ಪಠ್ಯ ಪುಸ್ತಕಕ್ಕೆ ಅಳವಡಿಕೆ ಮಾಡಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ನಿಯೋಗಿ ಪ್ರಕಾಶ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಲಕ್ಷ್ಮಣ್ ಅವರ ಆತ್ಮಕಥೆಯ ಇಂಗ್ಲಿಷ್ ಆವೃತ್ತಿ “ಸಂಬೋಳಿ’ ಮತ್ತು “ಜನತೆಯ ಸಂಗಾತಿ ಲಕ್ಷ್ಮಣ್‌ಜಿ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು,”ಸಂಬೋಳಿ’ ಆತ್ಮಕಥೆಯಲ್ಲಿನ “ಅಮರ ಪೇಮ’ಅಧ್ಯಾಯವು ಆಕ್ಸ್‌ಫರ್ಡ್‌ನಲ್ಲಿ ಪಠ್ಯವಾಗಿದೆ. ಅದೇ ರೀತಿ ನಮ್ಮಲ್ಲೂ ಈ ಕೃತಿಯ ಕೆಲವು ಅಧ್ಯಾಯಗಳು ಪಠ್ಯವಾಗಬೇಕು ಎಂದು ಹೇಳಿದರು.
ಅನುವಾದಿತ “ಸಂಬೋಳಿ’ಕೃತಿಯು ದಲಿತ ಸಂಸ್ಕೃತಿಯ ಅಸ್ಮಿತೆಯಾ ಭಾಗವಾಗಿದೆ.ಅನುವಾದಕರು ಮೂಲ ಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಅನುವಾದಿಸಿದ್ದು,ಕನ್ನಡದ ಹಲವು ಪದಗಳನ್ನು ಇದರಲ್ಲಿ ಹಾಗೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಈ ಕೃತಿಯ ಇಂಗ್ಲಿಷ್ ಓದುಗರಿಗೂ ಕನ್ನಡದ ಪದಗಳು ಅರಿವಿಗೆ ಬರಲಿವೆ ಎಂದು ತಿಳಿಸಿದರು.
ನಿಯೋಗಿ ಪ್ರಕಾಶನದ ನಿರ್ಮಲ್ ಕಾಂತಿ ಭಟ್ಟಾಚಾರ್ಯ ಮಾತನಾಡಿ, ಕನ್ನಡದ ಕೃತಿಯ ಮೂಲ ಆಶಯಗಳಿಗೆ ಯಾವುದೇ ರೀತಿಯ ಚ್ಯುತಿಯಾಗದ ಹಾಗೇ ಪ್ರೊ.ಸುಶೀಲಾ ಪುನೀತಾ ಅವರು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ. ಹೀಗಾಗಿಯೇ, ಈ ಕೃತಿಯನ್ನು ಓದುವಾಗ ಮೂಲ ಭಾಷೆಯಲ್ಲಿ ಓದಿದಷ್ಟೇ ಹಿತಕರವಾಗುತ್ತದೆ.ಅತ್ಯುತ್ತಮ ರೀತಿಯಲ್ಲಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾ ಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತ ನಾಯಕ್, ಅನು ವಾದಕಿ ಪ್ರೊ. ಸುಶೀಲಾ ಪುನಿತಾ, ನಾವೇ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಪಾರ್ವತೀಶ ಬಿಳಿದಾಳೆ, ಸಮಾಜ ವಿಜ್ಞಾನಿ ಡಾ. ಮತ್ತಿತರರು ಉಪಸ್ಥಿತರಿದ್ದರು.