Advertisement
ಅವರು ಗುರುವಾರ ಬೋಂದೆಲ್‌ನ ಸಂತ ಲಾರೆನ್ಸ್ ಚರ್ಚ್ ಹಾಗೂ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಸಂತ ಲಾರೆನ್ಸರು ತಮ್ಮ ಬದುಕಿನ ಉದ್ದಕ್ಕೂ ಹಾಗೂ ಮರಣಾನಂತರವೂ ಯೇಸುಕ್ರಿಸ್ತರಿಗೆ ಸಾಕ್ಷಿಯಾದರು. ಬಡವರ ಸೇವೆಯ ವಿಚಾರದಲ್ಲಿ ತನ್ನ ಜೀವವನ್ನು ಅರ್ಪಿಸಿ ತ್ಯಾಗ ಮನೋ ಭಾವವವನ್ನು ಜಗತ್ತಿಗೇ ತೋರಿಸಿದ್ದಾರೆ.
ಹಬ್ಬದ ವಿಶೇಷ ಬಲಿಪೂಜೆಯಲ್ಲಿ ಬಜೊjàಡಿಯ ಕ್ರೈಸ್ತ ಕುಟುಂಬ ಸಲಹಾ ಸೇವಾ ಕೇಂದ್ರದ ನಿರ್ದೇಶಕ ಫಾ| ಅನಿಲ್ ಅಲ್ಫೆ†ಡ್ ಡಿ’ಸೋಜಾ ಅವರು ಪ್ರವಚನ ನೀಡಿದರು. ಸಂತ ಲಾರೆನ್ಸರು ತಮ್ಮ ಕಷ್ಟ ನಷ್ಟಗಳಲ್ಲಿ ಅಚಲ ವಿಶ್ವಾಸದ ಮೂಲಕ ದೇವರ ಪ್ರೀತಿಗೆ ಪಾತ್ರರಾದವರು. ಅವರ ಆದರ್ಶಗಳನ್ನು ಕ್ರೈಸ್ತರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಂತ ಲಾರೆನ್ಸರಿಗೆ ಸಮರ್ಪಿಸಿದ ಬೋಂದೆಲ್‌ನ ಪುಣ್ಯಕ್ಷೇತ್ರ ಅನೇಕ ಪವಾಡಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಬೋಂದೆಲ್ ಚರ್ಚಿನ ಧರ್ಮಗುರು ವಂ| ಆ್ಯಂಡ್ರು ಡಿ’ಸೋಜಾ ಸೇರಿದಂತೆ ಬೋಂದೆಲ್ ವಲಯದ ವಿವಿಧ ಚರ್ಚ್‌ಗಳ 35ಕ್ಕೂ ಅಧಿಕ ಧರ್ಮಗುರುಗಳು ವಿಶೇಷ ಬಲಿಪೂಜೆಯಲ್ಲಿ ಭಾಗಿಗಳಾದರು. 3,000ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಬಲಿಪೂಜೆ ಬಳಿಕ ವಂ| ಆ್ಯಂಡ್ರು ಡಿ’ಸೋಜಾ ಅವರು ವಾರ್ಷಿಕ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಫೋರ್ ವಿಂಡ್ಸ್ ಸಂಸ್ಥೆಯ ನಿರ್ದೇಶಕ ಇ. ಫೆರ್ನಾಂಡಿಸ್ ಸಹಿತ ವಿಶೇಷ ಸಹಕಾರ ನೀಡಿದವರನ್ನು ಸ್ಮರಿಸಿದರು.
Related Articles
Advertisement