Advertisement

Samantha Ruth Prabhu: ಮಾಧ್ಯಮಗಳಿಂದ ಮುಖ ಮುಚ್ಚಿಕೊಂಡು ನಡೆದ ನಟಿ ಸಮಂತಾ; ಯಾಕೆ?

12:29 PM Jul 09, 2023 | Team Udayavani |

ಮುಂಬಯಿ: ಬಹುಭಾಷಾ ನಟಿ ಸಮಂತಾ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಬಣ್ಣದ ಲೋಕದಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಅವರು ಇತ್ತೀಚೆಗೆ ಸಿನಿಮಾರಂಗದಿಂದ ಸಣ್ಣ ಬ್ರೇಕ್‌ ಪಡೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಚರ್ಚೆಯಲ್ಲಿದೆ.

Advertisement

ʼಮಯೋಸೈಟಿಸ್‌ʼ ಕಾಯಿಲೆಯಿಂದ ಬಳಲುತ್ತಿದ್ದರೂ ಚಿತ್ರರಂಗದಲ್ಲಿ ಸಕ್ರೀಯವಾಗಿರುವ ಅವರು ಸದ್ಯ ʼಖುಷಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ನಟನೆಯ ʼ ಶಾಕುಂತಲಂʼ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಹೇಳಿಕೊಳ್ಳುವಷ್ಟು ಸದ್ದು ಮಾಡಿಲ್ಲ. ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ನಟಿಯ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಮಾಧ್ಯಮಗಳತ್ತ ನೋಡಿ ಸ್ಟೈಲಿಸ್ಟ್‌ ಆಗಿ ಸ್ಮೈಲ್‌ ಕೊಡುವ ನಟಿ ಸಮಂತಾ ಈ ಬಾರಿ ಮುಖ ಮುಚ್ಚಿಕೊಂಡು ಮಾಧ್ಯಮಗಳ ಮುಂದೆ ನಡೆದುಕೊಂಡು ಹೋಗಿದ್ದಾರೆ. ಜುಲೈ. 8 ರ ಮುಂಜಾನೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರು ಮುಖಕ್ಕೆ ಮಾಸ್ಕ್‌ ಧರಿಸಿಕೊಂಡು ಬಂದಿದ್ದಾರೆ. ಟೀ-ಶರ್ಟ್, ಬೂಟ್‌ಕಟ್ ಡೆನಿಮ್ ಜಿನ್ಸ್‌ ಜೊತೆ ವೈಟ್‌ ಕ್ಯಾಪ್ ಧರಿಸಿರುವ ಅವರು ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್‌ ಹಾಕಿದ್ದಾರೆ.

ಪಾಪರಾಜಿಗಳು ಫೋಟೋ ಕ್ಲಿಕ್ಕಿಸಲು ಮುಂದಾದರೂ ಅವರು ಪೋಸ್‌ ಕೊಡದೆ ಸೀದಾ ನಡೆದುಕೊಂಡು ಹೋಗಿದ್ದಾರೆ. ಸಮಂತಾರ ಈ ಲೇಟೆಸ್ಸ್‌ ಫೋಟೋ ವೈರಲ್‌ ಆಗಿದೆ. ನಟಿ ಯಾವ ಕಾರಣಕ್ಕಾಗಿ ಮಾಸ್ಕ್ ಹಾಕಿಕೊಂಡು ಬಂದಿದ್ದಾರೆ ಎನ್ನುವುದರ ಬಗ್ಗೆ ಇದುವರೆಗೂ ತಿಳಿದುಬಂದಿಲ್ಲ.

ವಿಜಯ್‌ ದೇವರಕೊಂಡಾ ಅವರೊಂದಿಗೆ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಅವರು, ʼ ಸಿಟಾಡೆಲ್ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಬಳಿಕ  ಅಮೇಜಾನ್‌ ಪ್ರೈಮ್‌ ನಲ್ಲಿ ಬರಲಿರುವ ʼಸಿಟಾಡೆಲ್ʼ ಸ್ಪೈ ಥ್ರಿಲ್ಲರ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ನಂತರ ರಾಜ್ ಮತ್ತು ಡಿಕೆ ಅವರ ಪ್ರಾಜೆಕ್ಟ್‌ನಲ್ಲಿ ಸಮಂತಾ ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ಕೈಜೋಡಿಸುತ್ತಿದ್ದಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next