Advertisement

ಟ್ವಿಟರ್-ಇನ್ಸ್ಟಾದಲ್ಲಿ ‘ಸಮಂತಾ ಅಕ್ಕಿನೇನಿ’ ಹೆಸರು ಮಾಯ: ಹೀಗೇಕೆ ಮಾಡಿದ್ರು ಸ್ಯಾಮ್ ?  

05:04 PM Jul 31, 2021 | Team Udayavani |

ಹೈದರಾಬಾದ್ : ಟಾಲಿವುಡ್ ನಟಿ ಹಾಗೂ ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಬೇರೆ ವಿಚಾರಕ್ಕಾಗಿ ಇದೀಗ ಸುದ್ದಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನು ತೆಗೆದಿದ್ದಾರೆ.

Advertisement

2010 ರಲ್ಲಿ ತೆರೆಕಂಡ ‘ಯೇ ಮಾಯ ಚೇಸಾವೆ’ ಚಿತ್ರದ ಮೂಲಕ ಸಮಂತಾ ಚಿತ್ರರಂಗಕ್ಕೆ ಕಾಲಿಟ್ಟ ಶ್ಯಾಮ್, ಅದೇ ಚಿತ್ರದ ನಾಯಕ ನಾಗ ಚೈತನ್ಯ ಜೊತೆ ಪ್ರೀತಿಯಲ್ಲಿ ಬಿದ್ದರು. ಈ ಜೋಡಿ 2017 ರಲ್ಲಿ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯರನ್ನು ಮದುವೆಯಾದ ಬಳಿಕ ತಮ್ಮ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಿಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ‘ಸಮಂತಾ ಅಕ್ಕಿನೇನಿ’ ಅಂತಲೇ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದರು. ಈಗ ನೋಡಿದರೆ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ‘ಸಮಂತಾ’ ಹಾಗೂ ‘ಅಕ್ಕಿನೇನಿ’ ಎರಡೂ ಹೆಸರುಗಳನ್ನು ತೆಗೆದು ಬರೀ ‘S’ ಅನ್ನು ಮಾತ್ರ ಸಮಂತಾ ಉಳಿಸಿಕೊಂಡಿದ್ದಾರೆ.  ಏಕಾಏಕಿ ಸೋಷಿಯಲ್ ಮೀಡಿಯಾದಲ್ಲಿ ನಟಿ ಸಮಂತಾ ತಮ್ಮ ಹೆಸರು ಹಾಗೂ ಸರ್‌ನೇಮ್‌ಅನ್ನು ತೆಗೆದಿದ್ದು ಯಾಕೆ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇನ್ನು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಸಮಂತಾ ನೀಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ಮೂಲಕ ಒಟಿಟಿ ವೇದಿಕೆಗೂ ಕಾಲಿಟ್ಟರು. ಸದ್ಯ ‘ಶಾಕುಂತಲಂ’ ಸೇರಿದಂತೆ ಎರಡ್ಮೂರು ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next