Advertisement
ಅಯೋಧ್ಯೆಯಲ್ಲಿ ಸ್ಪರ್ಧಿಸದ್ದು ಒಳ್ಳೆಯದಾಯ್ತು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವೇಳೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಸ್ಥಳೀಯರ ಅಂಗಡಿಗಳು, ಮನೆಗಳನ್ನು ಕೆಡವಬೇಕಾಯಿತು. ಹೀಗಾಗಿ ಸ್ಥಳೀಯರು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅವರು ಅಯೋಧ್ಯೆಯಲ್ಲಿ ಸ್ಪರ್ಧಿಸದೇ ಇದ್ದಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಅವರಿಗೆ ತೀವ್ರ ವಿರೋಧ ಎದುರಾಗುತ್ತಿತ್ತು ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
Related Articles
Advertisement
ಪ್ರಿಯಾಂಕಾ ಎಫೆಕ್ಟ್:ಭಾನುವಾರ ಮಹಿಳಾ ನಾಯಕಿಯರೊಂದಿಗೆ ಪ್ರಚಾರ ಆರಂಭಿಸಿರುವ ಬಿಜೆಪಿಯ ಕಾಲೆಳೆದಿರುವ ಕಾಂಗ್ರೆಸ್, “ಇದೆಲ್ಲ ಪ್ರಿಯಾಂಕಾ ಎಫೆಕ್ಟ್’ ಎಂದು ಹೇಳಿದೆ. ಅಲ್ಲದೇ, ರಾಜ್ಯ ಸರಕಾರದ ಮುಖ ಉಳಿಸಿಕೊಳ್ಳುವ ತಂತ್ರ ಎಂದೂ ಮೂದಲಿಸಿದೆ. ಇದೇ ವೇಳೆ, ಸೋಮವಾರ ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್‌ಗಾಂಧಿ, ಪ್ರಿಯಾಂಕಾ ವಾದ್ರಾ, ಗುಲಾಂ ನಬಿ ಆಜಾದ್, ಸಚಿನ್ ಪೈಲಟ್ ಮತ್ತಿತರರು ಸ್ಟಾರ್ ಪ್ರಚಾರಕರಾಗಿ ಮಿಂಚಲಿದ್ದಾರೆ. ಪ್ರಧಾನಿ ಮೋದಿ ಮೆಚ್ಚುಗೆ: ಉತ್ತರಪ್ರದೇಶದ ಸಂಸ್ಥಾಪನಾ ದಿನವಾದ ಸೋಮವಾರ ರಾಜ್ಯದ ಜನತೆಗೆ ಶುಭ ಕೋರಿರುವ ಪ್ರಧಾನಿ ಮೋದಿ, “ಕಳೆದ 5 ವರ್ಷಗಳಲ್ಲಿ ಉ.ಪ್ರದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಮೈಲುಗಲ್ಲು ಸಾಧಿಸಿದೆ. ಈ ಬಹು ಆಯಾಮದ ಅಭಿವೃದ್ಧಿಯು ನವಭಾರತದಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.