Advertisement
ಚಾಮರಾಜ ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದರೆ, ಕನ್ನ ಡದ ಚಿತ್ರ ಗೀತೆಗಳು ಹಿನ್ನೆ ಲೆಯಲ್ಲಿ ತೇಲಿ ಬಂದಂತೆ ಅನ್ನಿಸಿ, ಮನಸ್ಸು-ಶರೀ ರವು ಒಟ್ಟೊ ಟ್ಟಿ ಗೆ ತಂಪಾಗುತ್ತದೆ. ಆ ಸಂಗೀತದ ಸೊಗಡು ಬಂದಿದ್ದು ಎಲ್ಲಿಂದ ಎಂದು ತಿರುಗಿ ನೋಡಿದರೆ,ಅಲ್ಲೇನು ಯಾರೂ ರೇಡಿ ಯೋದ ಹಾಡನ್ನಾಗಲೀ, ಟಿವಿಯ ಶೋ ವ ನ್ನಾಗಲಿ,ಪ್ಲೇ ಮಾಡುತ್ತಿರುವುದಿಲ್ಲ. ಹಾದಿಯ ಪಥಿಕರೆಲ್ಲರ ಪಕ್ಕದಲ್ಲೂ ಡಾ.ರಾಜ್ ಕುಮಾರ್,ಪಿ.ಬಿ.ಶ್ರೀನಿವಾಸ್, ಜೇಸು ದಾಸ್,ಎಸ್.ಜಾನಕಿ,ಪಿ.ಸುಶೀಲಾ,ಎಸ್ಪಿಬಿ,ವಾಣಿ ಜಯರಾಂ ಅವರು ನಿಂತಂತೆ ಅನ್ನಿಸುತ್ತದೆ. ಇಲ್ಲಿ ಈ ಗಾನ ದಿಗ್ಗಜರೆಲ್ಲರೂ,ಹಸಿರು ಮರಗಳಾಗಿ, ಪಥಿಕರಿಗೆ ತಂಗಾಳಿ ಸೋಕಿಸುತ್ತಿರುತ್ತಾರೆ.
Related Articles
ಮನೆ ಕಟ್ಟಲು, ವಾಹನ ಕೊಳ್ಳಲು ಸಾಲ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಸಾರ್ವಜನಿಕ ಕೆಲಸಕ್ಕಾಗಿ, ಊರು ತುಂಬಾ ಗಿಡಗಳನ್ನು ನೆಟ್ಟು ಬೆಳೆಸಲು ಸಾಲ ತೆಗೆದುಕೊಂಡವರು ವೆಂಕ ಟೇಶ್. ತಮ್ಮ ಸಂಪಾದನೆಯಿಂದ ಇಷ್ಟು ಗಿಡಗಳನ್ನು ನೆಡಲು ಸಾಧ್ಯವಿಲ್ಲವೆಂದು ತಿಳಿ ದಾಗ, ಗಿಡಗಳ ಆರೈಕೆಗೆಂದೇ, ಚಾಮರಾಜನಗರದ ಕಾರ್ಪೊರೇಷನ್ ಬ್ಯಾಂಕಿನಿಂದ 10 ಲಕ್ಷ ರೂ. ಸಾಲ ಪಡೆದಿದ್ದಾರೆ, ಈ ಪುಣ್ಯಾತ್ಮ! ಬೆಂಗಳೂರು, ಮೈಸೂರು, ಚಾಮರಾಜನಗರ ನರ್ಸರಿಗಳಿಂದ ಗಿಡಗಳನ್ನು ತಂದಿದ್ದಾರೆ. ಇದಕ್ಕೆ ತಗುಲಿದ್ದು, ಬರೋಬ್ಬರಿ 14 ಲಕ್ಷ ರೂ.!
Advertisement
ಗಿಡ ನೆಟ್ಟರೆ ಸಾಕೇ..?ಕೇವಲ ಗಿಡ ನೆಡುವುದಷ್ಟೇ ಅಲ್ಲ… ನೆಟ್ಟ ಗಿಡ ಬಲಿಷ್ಠ ವಾಗಿ ಬೆಳೆಯುವವರೆಗೂ ನೀರು ಹಾಕಿ ಪೋಷಿಸುವ, ಟ್ರೀ ಗಾರ್ಡ್ ಹಾಕಿ ರಕ್ಷಿಸುವ, ಗಿಡಕ್ಕೆ ಅಗತ್ಯ ಗೊಬ್ಬರ ಹಾಕುವ ಕೆಲಸವನ್ನು ವೆಂಕಟೇಶ್ ತೋಟದ ಮಾಲಿಯಂತೆ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಟ್ಯಾಂಕರ್‌ನಿಂದ ನೀರು ತರಿಸಿ, ವಾರಕ್ಕೊಮ್ಮೆ ಅಥವಾ ಎರಡು ಬಾರಿ ನೀರು ಪೂರೈ ಸು ತ್ತಾರೆ. ನೆಟ್ಟ ನಂತರ ಮಧ್ಯದಲ್ಲಿ ಒಣಗಿ ಹೋದರೆ, ಅಂಥ ಜಾಗದಲ್ಲಿ ಮತ್ತೆ ಗಿಡ ನೆಡು ವು ದನ್ನು ಮರೆಯುವುದಿಲ್ಲ. ಗಿಡ ನೆಟ್ಟು ಪೋಷಿಸುವ ಕೆಲಸ ಅಷ್ಟು ಸುಲಭದ್ದಲ್ಲ. ಉದ್ಯಾನವನದಲ್ಲೋ, ಊರಾಚೆ ಒಂದು ತೋಪಿನಂಥ ಜಾಗದಲ್ಲೋ ಗಿಡಗಳನ್ನು ನೆಟ್ಟು ಪೋಷಿಸಬಹುದು. ಆದರೆ, ಪಟ್ಟಣ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಟ್ಟರೆ, ಕೆಲವು ಅಂಗಡಿಗಳವರು ತಮ್ಮ ಅಂಗಡಿ ಕಾಣುವುದಿಲ್ಲವೆಂದು ಗಿಡಗಳನ್ನು ಕಿತ್ತು ಹಾಕುತ್ತಾರೆ. ಮೇಕೆ ಕುರಿಗಳು ಅದನ್ನು ತಿನ್ನಲೂಬಹುದು. ಹೀಗೆಲ್ಲ ಅಡೆತಡೆಗಳು ಆದಾ ಗ, ತಾಳ್ಮೆ ಕಳೆದುಕೊಳ್ಳದೆ, ಪೋಷಿಸುವುದೂ ಇವರಿಗೆ ಕರಗತ. ವೈವಿಧ್ಯಮ ಹಸಿರು ಜಗತ್ತು
ವಿವಿಧ ಜಾತಿಯ ಗಿಡಗಳನ್ನು ಎಲ್ಲೆಲ್ಲಿಂದಲೋ ತಂದು ನೆಟ್ಟಿದ್ದಾರೆ, ವೆಂಕ ಟೇ ಶ್. ಮಹಾಗನಿ, ಹೊಂಗೆ, ನೇರಳೆ, ಕಾಡು ಬಾದಾಮಿ, ಬೇವು, ಹೆಬ್ಬೇವು, ಬುಗುರಿ ಗಿಡ, ಆಕಾಶ ಮಲ್ಲಿಗೆ, ಗಸಗಸೆ ಮಾತ್ರವಲ್ಲದೆ, ನಮಗೆ ಹೆಸರೇ ಗೊತ್ತಿಲ್ಲದ ಅನೇಕ ಜಾತಿಯ ಗಿಡಗಳನ್ನು ನೆಟ್ಟಿದ್ದಾರೆ. ಗಾಳಿ ಮಳೆಗೆ ಮುರಿದು ಬೀಳಬಹುದಾದ ಪ್ರಭೇದಗಳನ್ನು ಬಿಟ್ಟು, ಕಾಂಡ ಭದ್ರ ಇರುವ ಸಸ್ಯ ಪ್ರಭೇದವನ್ನೇ ಆಯ್ದುಕೊಂಡಿರುವುದು ವಿಶೇಷ. ಚಾಮರಾಜನಗರದಲ್ಲಿ 100 ಅಡಿಯ ಬಿ. ರಾಚಯ್ಯ ಜೋಡಿರಸ್ತೆಯಿದ್ದು, ಇಲ್ಲಿದ್ದ ಎಲ್ಲ ಮರಗಳನ್ನೂ ಅಗಲೀಕರಣಕ್ಕಾಗಿ ಕಡಿಯಲಾಗಿತ್ತು. ಈಗ ಅಲ್ಲಿ ಹೂ ಬಿಡುವ ಗಿಡಗಳನ್ನು ವೆಂಕಟೇಶ್ ನೆಡುತ್ತಿದ್ದಾರೆ. ಸಣ್ಣ ಗಿಡಗಳನ್ನು ನೆಟ್ಟರೆ ಬೆಳೆಯುವುದು ನಿಧಾನವೆಂದು ಯೋಚಿಸಿ, ಈಗಾಗಲೇ 6-8 ಅಡಿ ಎತ್ತರ ಬೆಳೆದಿರುವ ಗಿಡಗಳನ್ನು ಬೆಂಗಳೂರಿನಿಂದ ತಲಾ 1 ಸಾವಿರ ರೂ. ಕೊಟ್ಟು ತಂದಿದ್ದಾರೆ! ಇವುಗಳಿಗೆ ಮೊದಲ ಹಂತಕ್ಕೆ 2 ಲಕ್ಷ ರೂ. ವೆಚ್ಚವಾಗಿದೆ. ಪಕ್ಷಿಗಳಿಗೆ ಹಣ್ಣು ದೊರಕಲಿ ಎಂಬ ಉದ್ದೇಶದಿಂದ ಜಂಬು ನೇರಳೆ, ಗಸೆಗಸೆ, ಕಾಡು ಬಾದಾಮಿ ಸೇರಿ ಹಣ್ಣು ಬಿಡುವ ಗಿಡಗಳನ್ನು ನೆಟ್ಟು, ಅವು ಗಳ ಹಸಿವು ನೀಗಿ ಸುವ ಪ್ರಯತ್ನವನ್ನೂ ಮಾಡಿ ದ್ದಾ ರೆ. ಇಲ್ಲಿನ “ಸಂಪಿಗೆ ರಸ್ತೆ’ಯಲ್ಲಿ, ಕೇವಲ ಸಂಪಿಗೆ ಗಿಡಗಳನ್ನೇ ನೆಟ್ಟು, ಇಡೀ ಹಾದಿ ಗಮ್ಮೆ ನ್ನುವ ದಿನ ಗ ಳಿ ಗಾಗಿ ಎದುರು ನೋಡು ತ್ತಿ ದ್ದಾ ರೆ.
“ಹಣ-ಆಸ್ತಿ ಮಾಡಿದರೆ,ಅದು ನನ್ನ ಸಂಸಾರಕ್ಕಷ್ಟೇ ಪ್ರಯೋಜನ. ಅದರ ಬದಲು,ಊರ ಜನರಿಗೆ ನೆರಳು ನೀಡಿದರೆ ಅದೇ ಮಾನ ವೀ ಯ ಸಂಪತ್ತು. ನಾನು ನೆಟ್ಟ ಗಿಡಗಳು ಹತ್ತಾರು ವರ್ಷದಲ್ಲಿ ದೊಡ್ಡ ಮರಗಳಾದಾಗ, ಅದರ ನೆರಳಿನಲ್ಲಿ ಕುಳಿತ ಜನರನ್ನು ನೋಡಿ, ಈ ಬದುಕು ಸಾರ್ಥ ಕವಾಯಿತು ಎಂದು ತೃಪ್ತಿ ಪಡುತ್ತೇನೆ’ಎನ್ನುತ್ತಾರೆ, ವೆಂಕಟೇಶ್.ಅಂದಹಾಗೆ,ಇವರ ಜನುಮ ದಿನವೂ ಜೂನ್ 5ರ ವಿಶ್ವಪರಿಸರ ದಿನದಂದೇ! ಖರ್ಚು ಎಷ್ಟಾಗುತ್ತೆ?
7-8 ಅಡಿ ಬೆಳೆದಿರುವ ದೊಡ್ಡ ಗಿಡಕ್ಕೆ 1000 ರೂ.! ಸಣ್ಣ ಗಿಡಗಳಿಗೆ 200-300 ರೂ. ತಗುಲುತ್ತದೆ. ಇದನ್ನು ನೆಡಲು 6 ಮಂದಿ ಕೂಲಿಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಇವರಿಗೆ ಗಿಡ ನೆಡುವ ತರಬೇತಿಯನ್ನೂ ಕೊಟ್ಟಿದ್ದಾರೆ. ಇವರಿಗೆ ದಿನಕ್ಕೆ 600 ರೂ. ಕೂಲಿ ನೀಡಬೇಕು. ಇದಲ್ಲದೇ ಗೂಡ್ಸ್ ಆಟೋಗೆ ದಿನಕ್ಕೆ 1200 ರಿಂದ 1500 ರೂ. ವರೆಗೆ ಬಾಡಿಗೆ ನೀಡಬೇಕು. ಗಿಡ ನೆಡುವ ಸಂದರ್ಭದಲ್ಲಿ ದಿನಕ್ಕೆ 5 ಸಾವಿರ ರೂ. ಖರ್ಚಾಗುತ್ತದೆ. ಇಷ್ಟು ಹಣವನ್ನು ವೆಂಕಟೇಶ್ ಅವರೇ ಭರಿಸುತ್ತಾರೆ. ಆಭರಣ ಅಡವಿಟ್ಟ ಪತ್ನಿ!
ಪತಿಯ ಈ ಕೆಲಸಕ್ಕೆ ಪತ್ನಿ ನೆರವೂ ದೊಡ್ಡದು. ಯಾವುದೋ ಸಂದರ್ಭದಲ್ಲಿ, ಗಿಡಗಳನ್ನು ನೆಡಲು ಒಂದು ಲಕ್ಷ ರೂ. ಅಗ ತ್ಯ ವಿತ್ತು. “ಆಗ ತನ್ನ ಆಭರಣಗಳನ್ನು ಗಿರವಿ ಇಟ್ಟು ನನಗೆ 1 ಲಕ್ಷ ರೂ.ಗಳನ್ನು ನನ್ನ ಪತ್ನಿ ಜಯಲಕ್ಷ್ಮಿ ನೀಡಿದಳು’ ಎನ್ನು ವಾಗಲೂ ವೆಂಕಟೇಶ್ ಸಣ್ಣಗೆ ನಗು ತ್ತಲೇ ಇದ್ದ ರು. ಚಿತ್ರ- ಲೇಖನ: ಬನಶಂಕರ ಆರಾಧ್ಯ