Advertisement

ನದಿದಂಡೆ ಕಾಮಗಾರಿಗೆ ಇಂದು ಶಾಸಕರಿಂದ ಶಿಲಾನ್ಯಾಸ

10:37 AM May 19, 2022 | Team Udayavani |

ಹೆಮ್ಮಾಡಿ: ಜಾಲಾಡಿ, ಹೊಸ್ಕಳಿ ಭಾಗದ ರೈತರು ಕಳೆದ 3-4 ವರ್ಷಗಳಿಂದ ಅನುಭವಿಸುತ್ತಿದ್ದ ಉಪ್ಪು ನೀರಿನ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಇಲ್ಲಿ 1 ಕೋ.ರೂ. ವೆಚ್ಚದ ನದಿದಂಡೆ ನಿರ್ಮಾಣ ಕಾಮಗಾರಿಗೆ ಮೇ 19ರಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

Advertisement

ಹೆಮ್ಮಾಡಿ ಹಾಗೂ ಕಟ್‌ಬೆಲ್ತೂರು ಗ್ರಾ.ಪಂ. ವ್ಯಾಪ್ತಿಯ ಜಾಲಾಡಿ, ಹೊಸ್ಕಳಿ ಭಾಗದ ನೂರಾರು ಎಕರೆ ಗದ್ದೆ ಪ್ರದೇಶಕ್ಕೆ ಪರಿಸರದ ನೂರಾರು ಎಕರೆ ಗದ್ದೆ ಪ್ರದೇಶಗಳಿಗೆ ಕಳೆದ 3-4 ವರ್ಷಗಳಿಂದ ಉಪ್ಪು ನೀರು ನುಗ್ಗಿ, ಕೃಷಿ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಬಹುತೇಕ ಮಂದಿ ಹಿಂಗಾರು ಹಂಗಾಮಿನಲ್ಲಿ ಗದ್ದೆ ಯನ್ನು ಹಡಿಲು ಬಿಡುವಂತಾಗಿತ್ತು. ಬೇಸಗೆಯಲ್ಲಿ ಇಲ್ಲಿನ ಬಹುತೇಕ ಬಾವಿ ನೀರು ಉಪ್ಪಾಗಿತ್ತು. ರಾಜಾಡಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಈ ಭಾಗದಲ್ಲಿ ಈ ಸಮಸ್ಯೆ ಉದ್ಭವವಾಗಿತ್ತು.

255 ಮೀ. ಉದ್ದ

ಜಾಲಾಡಿ – ಹೊಸ್ಕಳಿಯ ಈ ನದಿದಂಡೆಯು 255 ಮೀ. ಉದ್ದವಿದ್ದು, 9 ಅಡಿ ಎತ್ತರವಿರಲಿದೆ. ಇದರಲ್ಲಿ ಉಪ್ಪು ನೀರು ಬರದಂತೆ ತಡೆಯಲು ಅಲ್ಲಲ್ಲಿ 7-8 ಕಡೆಗಳಲ್ಲಿ ಗೇಟು ನಿರ್ಮಿಸುವ ವ್ಯವಸ್ಥೆಯನ್ನು ಮಾಡಲಿದ್ದೇವೆ. ಇದರಿಂದ ಉಪ್ಪು ನೀರು ಬರದಂತೆ ತಡೆಯಲು ಸಹಕಾರಿಯಾಗಲಿದೆ. ಇನ್ನು ಇಲ್ಲಿ ಕಿಂಡಿ ಅಣೆಕಟ್ಟು ಬೇಡಿಕೆಯಿದ್ದು, ಅದರ ಪ್ರಸ್ತಾವನೆಯನ್ನು ಈಗಾಗಲೇ ಇಲಾಖೆಗೆ ಕಳುಹಿಸಲಾಗಿದ್ದು, ಪಶ್ಚಿಮ ವಾಹಿನಿ ಯೋಜನೆಯಡಿ ಮಂಜೂರಾಗಬಹುದು ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1 ಕೋ.ರೂ. ಮಂಜೂರು

Advertisement

ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಇಲ್ಲಿಗೆ ಕಿಂಡಿ ಅಣೆಕಟ್ಟು ಹಾಗೂ ನದಿದಂಡೆ ನಿರ್ಮಾಣ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಈ ಭಾಗದ ಜನರು ಶಾಸಕರಿಗೆ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿಯವರು, ಸಣ್ಣ ನೀರಾವರಿ ಇಲಾಖೆಯಡಿ ನದಿದಂಡೆ ನಿರ್ಮಾಣ ಕಾಮಗಾರಿಗೆ 1 ಕೋ.ರೂ. ಅನುದಾನವನ್ನು ಮಂಜೂರು ಮಾಡಿಸಿದ್ದು, ಈ ಭಾಗದ ರೈತರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next