Advertisement

ಉಪ್ಪು ಒಪ್ಪು

12:30 AM Mar 20, 2019 | |

ಅಡುಗೆ ಮನೆಯಲ್ಲಿ ಯಾವ ಪದಾರ್ಥ ಖಾಲಿಯಾದರೂ, ಉಪ್ಪು ಮಾತ್ರ ಇದ್ದೇ ಇರುತ್ತದೆ. ಉಪ್ಪಿನ ಉಪಯೋಗ ಕೇವಲ ಅಡುಗೆಗೆ ಸೀಮಿತವಾಗಿಲ್ಲ. ಮನೆಯ ಸ್ವಚ್ಛತೆಯಲ್ಲೂ ಉಪ್ಪನ್ನು ಬಳಸಬಹುದು ಅಂತ ನಿಮಗ್ಗೊತ್ತಾ?

Advertisement

– ಚೈನಾವೇರ್‌/ ಪಿಂಗಾಣಿ ಪಾತ್ರೆಯನ್ನು ಉಪ್ಪು ಹಾಕಿ ಒರೆಸಿದರೆ, ಅದರ ಮೇಲಿನ ಅಡುಗೆ ಕಲೆ ಹೋಗುತ್ತದೆ. 
– ಬೆಳ್ಳಿ ಪಾತ್ರೆಗಳನ್ನು ಉಪ್ಪು ಹಾಕಿ ಉಜ್ಜಿದರೆ ಥಳಥಳ ಹೊಳೆಯುತ್ತವೆ
– ಬಾಣಲೆ ಸೀದು ಹೋದಾಗ, ಉಪ್ಪು ಹಾಗೂ ವಿನಿಗರ್‌ಅನ್ನು ಸಮಪ್ರಮಾಣದಲ್ಲಿ ಸೇರಿಸಿ ಬಿಸಿ ನೀರಿನಲ್ಲಿ ತೊಳೆದರೆ ಕಲೆ ಮಾಯ
– ಈರುಳ್ಳಿ, ಬೆಳ್ಳುಳ್ಳಿ ಹೆಚ್ಚುವಾಗ ಕೈ ವಾಸನೆ ಆಗಿದ್ದರೆ ಉಪ್ಪು ನೀರಿನಲ್ಲಿ ಕೈ ತೊಳೆಯಿರಿ 
– ಬಟ್ಟೆ ಮೇಲೆ ರಕ್ತದ ಕಲೆ ಆಗಿದ್ದರೆ ಉಪ್ಪಿನ ದ್ರಾವಣದಿಂದ ಒರೆಸಿ 
– ಹೊದ್ದು ಕೊಳ್ಳುವ ಕಂಬಳಿ ಮೇಲೆ ಉಪ್ಪು ಸಿಂಪಡಿಸಿದರೆ ಕ್ರಿಮಿ-ಕೀಟಗಳು ನಾಶವಾಗುತ್ತವೆ 
– ಹೊಸ ಸೀರೆ, ಬಟ್ಟೆಗಳನ್ನು ಮೊದಲನೆಯ ಬಾರಿ ನೀರಿಗೆ ಹಾಕುವಾಗ ಉಪ್ಪು ಹಾಗೂ ಒಂದು ಚಮಚ ಸೀಮೆ ಎಣ್ಣೆ ಹಾಕಿದರೆ ಬಣ್ಣ ಹೋಗುವುದಿಲ್ಲ
– ಬಟ್ಟೆಯ ಮೇಲಿನ ಬೆವರಿನ ಕಲೆ ಹೋಗಿಸಲು ಬಟ್ಟೆಯನ್ನು ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ನೆನೆಸಿಡಿ 
– ತಾಮ್ರ ಹಾಗೂ ಹಿತ್ತಾಳೆ ಪಾತ್ರೆ ತೊಳೆಯುವಾಗ ಉಪ್ಪಿನ ಜೊತೆ ಹುಣಸೆಹಣ್ಣು ಸೇರಿಸಿ
– ಅಡುಗೆಮನೆಯಲ್ಲಿ ಇರುವೆಗಳ ಕಾಟ ಹೆಚ್ಚಿದ್ದರೆ, ಇರುವೆಗೂಡಿಗೆ ಉಪ್ಪು ಸಿಂಪಡಿಸಿ 

ಹೀರಾ ರಮಾನಂದ್‌

Advertisement

Udayavani is now on Telegram. Click here to join our channel and stay updated with the latest news.

Next