Advertisement

ಅದೃಷ್ಟ ಹೀಗಿರ್ಬೇಕು; ಬಂಪರ್ ಲಾಟರಿ-ರಾತ್ರೋರಾತ್ರಿ 6 ಮಂದಿ ಸೇಲ್ಸ್ ಮೆನ್ ಕೋಟ್ಯಧೀಶ್ವರರು!

09:58 AM Sep 21, 2019 | Nagendra Trasi |

ತಿರುವನಂತಪುರಂ:ಕಾಲ ಕೂಡಿ ಬಂದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಈ ವರದಿಯೇ ಸಾಕ್ಷಿ..ಹೌದು ಕೇರಳ ಲಾಟರಿ ಇಲಾಖೆ ಗುರುವಾರ ನಡೆಸಿದ ಬಂಪರ್ ಬಹುಮಾನ ಘೋಷಣೆಯಲ್ಲಿ ಆರು ಮಂದಿ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧೀಶರಾಗಿದ್ದಾರೆ ಎಂಬುದೇ ಹೆಚ್ಚು ಅಚ್ಚರಿಯ ವಿಷಯವಾಗಿದೆ.

Advertisement

ಕೇರಳ ಲಾಟರಿ ಡಿಪಾರ್ಟ್ ಮೆಂಟ್ ಗುರುವಾರ ತಿರು ಓಣಂ ಬಂಪರ್ ಬಹುಮಾನ ಘೋಷಿಸಿತ್ತು. ಇದರಲ್ಲಿ ಮೊದಲ ಬಹುಮಾನದ ಮೊತ್ತ 12 ಕೋಟಿ ರೂಪಾಯಿ. ಈ ಮೆಗಾ ಬಹುಮಾನ ಟಿಕೆಟ್ ನಂ.ಟಿಎಂ 160869ಕ್ಕೆ ಅದೃಷ್ಟ ಒಲಿದಿತ್ತು.

12 ಕೋಟಿ ಬಹುಮಾನ ಮೊತ್ತ ಘೋಷಣೆಯಾದ ನಂತರ ಸುದ್ದಿ ಹರಿದಾಡುವ ಮೂಲಕ ಕೊನೆಗೂ ವಿಜೇತ ವ್ಯಕ್ತಿ ಯಾರು ಎಂಬುದು ಬಯಲಾಗಿತ್ತು. ಈ ಟಿಕೆಟ್ ಅನ್ನು ಒಟ್ಟು ಆರು ಮಂದಿ ಹಣ ಹಂಚಿಕೊಂಡು ಖರೀದಿಸಿದ್ದರು.

ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿ ಪ್ರದೇಶದ ಚುನ್ ಗಾಥ್ ಜ್ಯುವೆಲ್ಲರಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್, ರಾಮ್ ಜಿಮ್, ರೋನಿ, ವಿವೇಕ್, ಸಾಬಿನ್ ಹಾಗೂ ರಾತೀಶ್ ಕೋಟಿ ಬಹುಮಾನ ಗೆದ್ದ ಸಂಭ್ರಮದಲ್ಲಿದ್ದಾರೆ.

ಅದೃಷ್ಟ ಖುಲಾಯಿಸಿದ್ದು ಹೇಗೆ?

Advertisement

ಈ ಆರು ಮಂದಿ ಒಟ್ಟು ಸೇರಿ ಕಳೆದ ರಾತ್ರಿ ಸ್ಥಳೀಯ ಲಾಟರಿ ಟಿಕೆಟ್ ಏಜೆಂಟ್ ಹತ್ತಿರ ಎರಡು ಟಿಕೆಟ್ ಖರೀದಿಸಿದ್ದರು. ಕುತೂಹಲದಿಂದ ಇದ್ದ ಇವರು ಗುರುವಾರ ಲಾಟರಿಗೆ ಬಹುಮಾನ ಬಂದಿದೆಯೇ ಎಂಬ ಕುತೂಹಲಕ್ಕಾಗಿ ಫಲಿತಾಂಶ ನೋಡಲು ನಿರ್ಧರಿಸಿದ್ದರು.

ಅಬ್ಬಾ..ನಮಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ..ನಾವು ಕೋಟ್ಯಧೀಶರಾಗಿಬಿಟ್ಟಿದ್ದೇವೆ! ನಾವು ಆರು ಮಂದಿ ಒಟ್ಟು ಸೇರಿ ಟಿಕೆಟ್ ಖರೀದಿಸಿದ್ದೇವು. ಇದೀಗ ನಾವು ಆರು ಮಂದಿ ಬಂದ ಹಣದಲ್ಲಿ ಸಮಾನವಾಗಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ನಮಗೆ ತಲಾ ಒಂದೊಂದು ಕೋಟಿ ರೂಪಾಯಿ ಬಹುಮಾನ ಸಿಗುತ್ತದೆ. ಮೊದಲ ಬಹುಮಾನ ವಿಜೇತರಿಗೆ ಎಲ್ಲಾ ತೆರಿಗೆ ಕಡಿತಗೊಂಡು ಒಟ್ಟು 7.5 ಕೋಟಿ ರೂಪಾಯಿ ಮೊತ್ತ ಸಿಗಲಿದೆ. ನಮಗೆ ತುಂಬಾ ಸಾಲಗಳಿದ್ದು, ಅದನ್ನು ತೀರಿಸುತ್ತೇವೆ. ಅಲ್ಲದೇ ಅದರಲ್ಲಿ ಸ್ವಲ್ಪ ಭಾಗವನ್ನು ಚಾರಿಟಿ ಕೆಲಸಕ್ಕೆ ವಿನಿಯೋಗಿಸುವುದಾಗಿ ಲಾಟರಿ ವಿಜೇತರು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಶ್ರೀಮುರುಗ ಲಾಟರಿ ಏಜೆನ್ಸಿ ಹಾಗೂ ಸಬ್ ಏಜೆಂಟ್ ಸಿದ್ದಿಖಿ ಟಿಕೆಟ್ ಮಾರಾಟ ಮಾಡಿದ್ದು, ಇವರು ಸುಮಾರು ಒಂದು ಕೋಟಿ ರೂಪಾಯಿಗಿಂತ ಅಧಿಕ ಕಮಿಷನ್ ಪಡೆಯಲಿದ್ದಾರೆ. ಕೇರಳ ಸರಕಾರಕ್ಕೆ ಲಾಟರಿ ಭಾರೀ ಆದಾಯ ತರುವ ಮೂಲವಾಗಿದೆ. ಕೇರಳದಲ್ಲಿ ದಿನಂಪ್ರತಿ ಹಾಗೂ ವಾರದಲ್ಲಿ ಲಾಟಿರಿ ಬಹುಮಾನ ಡ್ರಾ ಮಾಡಲಾಗುತ್ತದೆ. ಅದರಲ್ಲಿಯೂ ಓಣಂ, ಕ್ರಿಸ್ಮಸ್ ಹಾಗೂ ಹಬ್ಬದ ಸಂದರ್ಭದಲ್ಲಿ ಮೆಗಾ ಬಂಪರ್ ಬಹುಮಾನ ಆಫರ್ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next