ಗುಂಡ್ಲುಪೇಟೆ: ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಂಘದ ರಜತ ಮಹೋತ್ಸವ ಸಮಾರಂಭ ಮಂಗಳವಾರ ನಡೆಯಿತು. ಇದೇ ವೇಳೆ ಸಂಘದ ಆಡಳಿತ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ, ಸಂಸ್ಥಾಪಕ ನಿರ್ದೇಶಕ ಬಿ.ಎಂ. ಮುನಿರಾಜು ಮಾತನಾಡಿ, 25 ವರ್ಷಗಳ ಕಾಲ ಯಾವುದೇ ಹಗರಣಗಳಿಲ್ಲದೆ, ಕಪ್ಪುಚುಕ್ಕೆಯಿಲ್ಲದೇ ಒಂದು ಸಹಕಾರರಿ ಸಂಘ ನಡೆಯುವುದು ಸವಾಲಿನ ಸಂಗತಿ.
1989ರಲ್ಲಿ ಎಚ್.ಎಸ್.ಮಹದೇವಪ್ರಸಾದ್ ಶಾಸಕರಲ್ಲದಿದ್ದರೂ ಗುಂಡ್ಲುಪೇಟೆಯಲ್ಲಿ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಉದಯವಾಗಲು ಅವರ ಶ್ರಮವೇ ಕಾರಣವಾಗಿತ್ತು ಮತ್ತು ಈ ಸಂಘ ಅವರ ಕನಸಿನ ಕೂಸಾಗಿತ್ತು ಎಂದು ಸ್ಮರಿಸಿದರು.
ತಾಪಂ ಅಧ್ಯಕ್ಷ ಕೆ.ಎಸ್.ಜಗದೀಶಮೂರ್ತಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕೆಎಂಎಫ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶಪ್ರಸಾದ್, ಸಂಘದ ಅಧ್ಯಕ್ಷ ನೀಲಕಂಠಪ್ಪ ಹೊರೆಯಾಲ, ಸಂಘದ ಉಪಾಧ್ಯಕ್ಷೆ ಸರೋಜಮ್ಮ, ಸಂಘದ ಮಾಜಿ ಅಧ್ಯಕ್ಷರಾದ ವೈ. ಎನ್.ರಾಜಶೇಖರ್, ಎಚ್.ಎಂ.ನಾಗರಾಜಪ್ಪ,
ಎಚ್.ಎಸ್.ನಂಜುಂಡಸ್ವಾಮಿ, ಸದಾಶಿವಪ್ಪ, ಎಚ್.ಎಂ.ಮಹದೇವಪ್ಪ, ಸಂಘದ ಉಪಾಧ್ಯಕ್ಷೆ ಸರೋಜಮ್ಮ, ಜಿಪಂ ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಕೆ.ಬೊಮ್ಮಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್ ಇದ್ದರು.