Advertisement
ವಿದ್ಯುತ್ ನೌಕರರು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಬುಧವಾರವೇ ಇಂಧನ ಸಚಿವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮತ್ತು ಎಲ್ಲ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳ ನೌಕರರ ವೇತನವನ್ನು ಶೇ. 20ರಷ್ಟು ಹೆಚ್ಚಿಸಲು ಕೆಪಿಟಿಸಿಎಲ್‌ಗೆ ಲಿಖಿತವಾಗಿ ಸೂಚನೆ ನೀಡಿದ್ದರು. ಆದರೆ ಬರೀ ಟಿಪ್ಪಣಿರೂಪದಲ್ಲಿ ನೀಡಿದ ಈ ಲಿಖೀತ ಹೇಳಿಕೆಯನ್ನು ಒಪ್ಪದ ನೌಕರರು, ಸರಕಾರದ ಅಧಿಕೃತ ಆದೇಶವಾಗುವ ವರೆಗೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟುಹಿಡಿದರಾದರೂ ಬಳಿಕ ಹಿಂದೆ ಸರಿದರು.
Related Articles
Advertisement
ಸಾರಿಗೆ ನೌಕರರ ಮುಷ್ಕರ;ಮುಂದುವರಿದ ಮಾತುಕತೆ
ಇನ್ನು ಮತ್ತೂಂದೆಡೆ ತಡರಾತ್ರಿ ವರೆಗೂ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಕೂಟದ ಪದಾಧಿಕಾರಿಗಳ ಸಭೆ ನಡೆಯಿತು. ಶೇ. 25ರಷ್ಟು ವೇತನ ಪರಿಷ್ಕರಣೆಗೆ ಸಂಘಟನೆಗಳು ಪಟ್ಟುಹಿಡಿದರೆ, ನಿಗಮಗಳು ಶೇ. 10ರಷ್ಟು ಮಾಡಲು ಒಪ್ಪಿದರು. ಸುಮಾರು ನಾಲ್ಕು ತಾಸುಗಳು ನಡೆದ ಸಭೆಯಲ್ಲಿ ಹಲವು ರೀತಿ ಮನವೊಲಿಕೆ ಯತ್ನಗಳು ನಡೆದವು. ಕೊನೆಗೆ ಪಟ್ಟುಸಡಿಲಿಸಿದ ನಿಗಮಗಳ ಅಧಿಕಾರಿಗಳು ಶೇ. 14ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹೇಳಿದರು. ಆಗ ಶೇ. 20ರಷ್ಟಾದರೂ ನೀಡಲೇ ಬೇಕು ಎಂದು ಸಂಘಟನೆಗಳು ಆಗ್ರಹಿಸಿದರು. ಕೊನೆಗೆ ಗುರುವಾರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಅಧಿ ಕಾರಿಗಳು ಹೇಳಿದರು. ಹೀಗಾಗಿ ಯಾವುದೇ ನಿರ್ಣಯಕ್ಕೆ ಬಾರದೆ ಸಭೆ ಬರ್ಖಾಸ್ತುಗೊಂಡಿತು. ಅನಂತರ “ಉದಯವಾಣಿ’ಯೊಂದಿಗೆ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ವಕ್ತಾರ ಅನಂತ ಸುಬ್ಬರಾವ್, “ಸರಕಾರಿ ನೌಕರರಿಗೆ ಶೇ. 17ರಷ್ಟು ಮಧ್ಯಂತರ ಪರಿಹಾರ ನೀಡಲಾಗಿದೆ. ವಿದ್ಯುತ್ ನೌಕರರಿಗೆ ಶೇ. 20ರಷ್ಟು ಪರಿಷ್ಕರಿಸ ಲಾಗಿದೆ. ಸಾರಿಗೆ ನೌಕರರ ವಿಚಾರ ದಲ್ಲಿ ಯಾಕೆ ಈ ಚೌಕಾಸಿ ಗೊತ್ತಾಗುತ್ತಿಲ್ಲ. ಈ ಕ್ಷಣದವರೆಗೂ ಮಾತುಕತೆ ಮುಂದು ವರಿದಿದೆ. ಮುಷ್ಕರದ ವಿಚಾರದಲ್ಲೂ ಯಾವುದೇ ಬದ ಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂ ಧಿಸಿದಂತೆ ನೌಕರರ ಫೆಡರೇಶನ್‌ಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಈ ಬಗ್ಗೆ ನೌಕರರನ್ನು ಕರೆದು ಮಾತನಾಡಿದ್ದೇನೆ. ಮುಖ್ಯಮಂತ್ರಿಗಳ ಜತೆಗೆ ಕೂಡ ಚರ್ಚಿಸಿದ್ದೇನೆ.
– ಬಿ. ಶ್ರೀರಾಮುಲು, ಸಾರಿಗೆ ಸಚಿವ