ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ಚೊಚ್ಚಲ ಚಿತ್ರ “ಸಲಗ’ ಇದೇ ಏಪ್ರಿಲ್ ಮೂರನೇ ವಾರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಕಳೆದ ಮೂರ್‍ನಾಲ್ಕು ತಿಂಗಳುಗಳಿಂದ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರವನ್ನು ಪ್ರೇಕ್ಷಕರಿಗೆ ಸಲುಪಿಸುವ ಕೊನೆ ಹಂತದ ಕಸರತ್ತು ನಡೆಸುತ್ತಿದೆ.
ಸದ್ಯ “ಸಲಗ’ ಚಿತ್ರದ ಪ್ರಚಾರ ಭಾಗವಾಗಿ ಬಿಡುಗಡೆಯಾಗಿರುವ “ಸಲಗ’ ಪ್ರಮೋಶನ್ ಸಾಂಗ್ ಸ್ಯಾಂಡಲ್‌ವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅದರಲ್ಲೂ ದುನಿಯಾ ವಿಜಯ್ ಅಭಿಮಾನಿಗಳ ಬಾಯಲ್ಲಿ ಗುನುಗುತ್ತಿದೆ.
ಇದನ್ನೂ ಓದಿ:“ಕನ್ನಡತಿ’ ಹೀರೋ ಈಗ ಬಹದ್ದೂರ್ ಗಂಡು
ಈ ಬಗ್ಗೆ ಮಾತನಾಡುವ “ಸಲಗ’ ನಿರ್ಮಾಪಕ ಕೆ.ಪಿ.ಶ್ರೀಕಾಂತ್, “ಮೊದಲ ಬಾರಿಗೆ ಸಿದ್ಧಿ ಜನಾಂಗದ ಗಾಯಕರು ಈ ಹಾಡನ್ನು ನಮ್ಮ ಸಿನಿಮಾದಲ್ಲಿ ಹಾಡಿದ್ದಾರೆ. ಆರಂಭದಲ್ಲಿ ಬ್ಯಾಗ್ರೌಂಡ್ ಮ್ಯೂಸಿಕ್‌ಗೆ ಈ ಹಾಡಲು ಬಳಸಿಕೊಳ್ಳಲು ಯೋಚಿಸಿದ್ದೇವು. ಆದ್ರೆ ನಂತರ ಈ ಹಾಡು ನಮ್ಮ ನಿರೀಕ್ಷೆಗೂ ಮೀರಿ ಅದ್ಭುತವಾಗಿ ಬಂದಿದ್ದರಿಂದ, ಅದನ್ನೇ ಸಿನಿಮಾದ ಪ್ರಮೋಶನ್ ಸಾಂಗ್ ಆಗಿ ಬಳಸಿಕೊಳ್ಳಲು ನಿರ್ಧರಿಸಿದೆವು. ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್, ಶರಾಟನ್ ಹೋಟೆಲ್‌ನಲ್ಲಿ ಈ ಸಾಂಗ್ ಶೂಟಿಂಗ್ ಮಾಡಿದ್ದೇವೆ. ಈ ಹಾಡಿನಲ್ಲಿ ದುನಿಯಾ ವಿಜಯ್, ಸಿದ್ಧಿ ಕಲಾವಿದರು ಮತ್ತು ಬೆಂಗಳೂರಿನ ಡ್ಯಾನ್ಸರ್ ಕಾಣಸಿಕೊಂಡಿದ್ದಾರೆ. ಮುರಳಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಸಿನಿಮಾದಲ್ಲೂ ಈ ಸಾಂಗ್ ಹೈಲೈಟ್ ಆಗಲಿದೆ. ಈಗಾಗಲೇ ಈ ಸಾಂಗ್ ಸಾಕಷ್ಟು ವೈರಲ್ ಆಗಿದೆ. ದುನಿಯಾ ವಿಜಿ ಫ್ಯಾನ್ಸ್, ಆಡಿಯನ್ಸ್ ಎಲ್ಲರೂ ಸಾಂಗ್ ಕೇಳಿ ಖುಷಿಪಡುತ್ತಿದ್ದಾರೆ’ ಎನ್ನುತ್ತಾರೆ.
ಈಗಾಗಲೇ ಸಲಗ ಕಪ್ ಟೂರ್ನಮೆಂಟ್ ಮೂಲಕ ಜನರನ್ನು ತಲುಪುತ್ತಿದೆ. ಮಾಲೂರು, ಶಿವಮೊಗ್ಗ, ಚಿತ್ರದುರ್ಗದಲ್ಲಿ ಸಲಗ ಕಪ್ ಪಂದ್ಯಾವಳಿ ನಡೆದಿದ್ದು ಏಪ್ರಿಲ್ 4 ರಂದು ಹುಬ್ಬಳ್ಳಿ ಹಾಗೂ ಏಪ್ರಿಲ್ 14ರಂದು ಮೈಸೂರಿನಲ್ಲಿ ನಡೆಯಲಿದೆ. ಇದರ ಜೊತೆಗೆ ಚಿತ್ರದ ಪ್ರೀ ರಿಲೀಸ್ ಇವೆಂಟ್ ಏಪ್ರಿಲ್ 10ರಂದು ಹೊಸಪೇಟೆಯಲ್ಲಿ ನಡೆಯಲಿದೆ.