Advertisement
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಕಾನೂನು ಸಹಿತ ವಿವಿಧ ನೆರವು ಒದಗಿಸುವ ಸಖೀ ಕೇಂದ್ರವು 2019ರ ಜ. 26ರಿಂದ ಸರಕಾರಿ ಲೇಡಿಗೋಶನ್ ಸರಕಾರಿ ಆಸ್ಪತ್ರೆಯ ಕಟ್ಟಡದಲ್ಲಿ ಆರಂಭ ಗೊಂಡಿತ್ತು. ಇದೀಗ ಲೇಡಿ ಗೋಶನ್ ಆಸ್ಪತ್ರೆಯ ಆವರಣದಲ್ಲೇ ಇರುವ ನೂತನ ಎಂಸಿಎಚ್ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಪ್ರತ್ಯೇಕವಾಗಿ ಸೇವೆ ಒದಗಿಸಲು ಸಿದ್ಧಗೊಳ್ಳುತ್ತಿದೆ.
ಹೊಸ ಕಟ್ಟಡದಲ್ಲಿ ವಿಶಾಲ ಸ್ಥಳಾವಕಾಶವಿರುವುದರಿಂದ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಾಧ್ಯ ವಾಗಲಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಶಿಕ್ಷಣ, ವೀಡಿಯೋ ಕಾನ್ಫರೆನ್ಸ್ ಮೊದಲಾದವುಗಳಿಗೆ ಅಗತ್ಯ ಸೌಕರ್ಯ ಒದಗಿಸಿಕೊಡಲು ಯೋಜನೆ ಹಾಕಿಕೊಳ್ಳ ಲಾಗಿದೆ. ಜಿಲ್ಲಾಡಳಿತ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಕೆಎಂಸಿ ವೈದ್ಯರನ್ನೊಳಗೊಂಡ ಸಮನ್ವಯ ಸಮಿತಿಯ ಸಲಹೆಗಳೊಂದಿಗೆ ಕೆಲಸಗಳು ನಡೆಯುತ್ತಿವೆ ಎಂದು ಸರಕಾರಿ ಲೇಡಿಗೋಶನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ದುರ್ಗಾಪ್ರಸಾದ್ ಅವರು ತಿಳಿಸಿದ್ದಾರೆ.
Related Articles
Advertisement