Advertisement
ನಗ್ಲಾಪುರದಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಪ್ಪು ಮಾಡಿದವರಿಗೆ ಕಾನೂನು ಶಿಕ್ಷೆ ನೀಡುತ್ತದೆ. ಅದನ್ನು ಲೆಕ್ಕಿಸದೆ ಯಾವ ವ್ಯಕ್ತಿ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಅಂತವರನ್ನು ಪೊಲೀಸ್ ಇಲಾಖೆ ಕಾನೂನು ಮೂಲಕ ಎಚ್ಚರಿಸುತ್ತದೆ. ಗ್ರಾಮ ಒಂದು ಕುಟುಂಬ ಇದ್ದಂತೆ. ಅದರಲ್ಲಿ ಒಂದು ಸಮಾಜ ಮತ್ತೂಂದು ಸಮಾಜವನ್ನು ಸಹೋದರರಂತೆ ಕಾಣಬೇಕು. ಆದರೆ ಒಬ್ಬರಿಗೊಬ್ಬರು ವೈರಿಗಳಂತೆ ಕಾಣುವುದು ಉತ್ತಮ ಬೆಳವಣಿಗೆಯಲ್ಲ. ಗ್ರಾಮದಲ್ಲಿ ನಡೆದ ಘಟನೆಯಲ್ಲಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದೇವೆ. ಗ್ರಾಮದಲ್ಲಿ ಪರಸ್ಪರರು ಪ್ರೀತಿ ವಿಶ್ವಾಸ ಮತ್ತು ಸಹಕಾರ, ಶಾಂತಿಯಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ನಾವು ಪ್ರಯತ್ನ ಮಾಡೋಣ. ಇದಕ್ಕಾಗಿ ನಮ್ಮ ಪೊಲೀಸ್ ಇಲಾಖೆ ದಿನದ 24 ತಾಸು ನಿಮಗೆ ಸೇವೆ ನೀಡುತ್ತದೆ. ನಾಗರಿಕರ ರಕ್ಷಣೆ ನಮ್ಮ ಜವಬ್ದಾರಿಯಾಗಿದೆ. ಇದಕ್ಕೆ ತೊಂದರೆಯಾದಾಗ ಕಾನೂನು ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ಯಾವುದೆ ಸಮುದಾಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳಬೇಕು. ಇದನ್ನು ಮೀರಿ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Advertisement
ಸಹೋದರತೆಯಿಂದ ಜೀವಿಸಿ: ಸೋನವಣೆ
03:48 PM Mar 02, 2020 | |