Advertisement
ಯಾದಗಿರಿಯಿಂದ ಆಗಮಿಸಿದ ಮೊಬೈಲ್ ಸ್ವಾಬ್ ತಂಡ ಕ್ವಾರಂಟೈನ್ ನಲ್ಲಿರುವವರ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ವೈರಸ್ ಪರೀಕ್ಷೆಗಾಗಿ ಪ್ರಯೋಗಲಾಯಕ್ಕೆ ಕಳಿಹಿಸಿಕೊಟ್ಟಿದೆ. ಫಲಿತಾಂಶದ ವರದಿ ಅಧಿಕಾರಿಗಳ ಕೈ ಸೇರಲು ಇನ್ನು 3 ದಿನ ಬೇಕಾಗುತ್ತದೆ. ಆದರೆ ಫಲಿತಾಂಶದ ವರದಿಯೂ ಹೇಗೆ ಬರುತ್ತದೆ ಎಂಬ ಭಯ ಕ್ವಾರಂಟೈನ್‌ನಲ್ಲಿರುವ ಪ್ರತಿಯೊಬ್ಬ ವಲಸಿಗರನ್ನು ಕಾಡುತ್ತಿದೆ. ಇಲ್ಲಿಯವರೆಗೂ ಮೂರು ಕೇಂದ್ರಗಳಲ್ಲಿ ಒಂದು ಕೇಸ್ ಕೂಡ ಪಾಸಿಟಿವ್ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಫಲಿತಾಂಶ ಪಾಸಿಟಿವ್ ಬಂದರೆ ಇಲ್ಲಿನ ಸ್ಥಿತಿ ಗತಿ ಹೇಗಿರುತ್ತದೆ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕೇಂದ್ರಗಳಲ್ಲಿ ಜಿಲ್ಲಾಡಳಿತದ ಆದೇಶ ಗಾಳಿಗೆ ತೂರಿ ಸುರಕ್ಷಿತ ಅಂತರ ಮರೆತು ಸಾಮಾನ್ಯವಾಗಿ ಎಲ್ಲರೂ ಸಾಮೂಹಿಕವಾಗಿ ಇರುವುದರಿಂದ ತೆಲೆನೋವಾಗಿ ಪರಿಣಮಿಸಿದೆ.
Advertisement
331 ವಲಸೆ ಕಾರ್ಮಿಕರ ಗಂಟಲು ದ್ರವ ಸಂಗ್ರಹ
12:47 PM May 28, 2020 | Naveen |
Advertisement
Udayavani is now on Telegram. Click here to join our channel and stay updated with the latest news.