Advertisement

ಸಾಯಿಬಾಬಾ ಸಮಾಧಿ ಉತ್ಸವ ಸಮಾರೋಪ 

05:21 PM Oct 21, 2018 | |

ಹುಬ್ಬಳ್ಳಿ: ಜಗತ್ತಿನ 40ಕ್ಕೂ ಹೆಚ್ಚು ದೇಶಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರಗಳಿರುವುದು ಬಾಬಾನಲ್ಲಿರುವ ಭಕ್ತಿಯನ್ನು ತೋರುತ್ತದೆ ಎಂದು ಶಿರಡಿ ಶ್ರೀ ಸಾಯಿಬಾಬಾ ವಿಶ್ವಸ್ಥ ವ್ಯವಸ್ಥಾ ಮಂಡಳಿ ಸದಸ್ಯ ಬಿಪಿನ್‌ದಾದಾ ಕೋಳೆ ಹೇಳಿದರು.

Advertisement

ಕೋರ್ಟ್‌ ವೃತ್ತದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆದ 100ನೇ ಶ್ರೀ ಶಿರಡಿ ಸಮಾಧಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿರಡಿ ಸಾಯಿಬಾಬಾ ಅವರ ಚಮತ್ಕಾರ ಎಂತದ್ದು ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಷಯ. ಮುಸ್ಲಿಂ ರಾಷ್ಟ್ರಗಳಲ್ಲೂ ಸಾಯಿಬಾಬಾ ಅವರ ಮಂದಿರಗಳಿವೆ ಎಂದು ಹೆಮ್ಮೆಯಿಂದ ಹೇಳಬಹುದು. ಸಬ್‌ ಕಾ ಮಾಲಿಕ್‌ ಏಕ್‌ ಹೇ ಎನ್ನುವ ಬಾಬಾ ಅನುಯಾಯಿಗಳು, ಭಕ್ತರು ಅಪಾರ. ಅವರು ಬಾಬಾನಿಗೆ ಸಲ್ಲಿಸುವ ಸೇವೆಯೂ ಅಪಾರವಾಗಿದೆ ಎಂದರು.

ಕಳೆದ 10 ದಿನಗಳಲ್ಲಿ ದೇಶದಲ್ಲಿರುವ ಸಾಯಿಬಾಬಾ ಮಂದಿರಗಳಲ್ಲಿ ಲಕ್ಷಾಂತರ ಜನರು ಅವರ ಪಾದುಕೆ ದರ್ಶನ ಮಾಡುವ ಮೂಲಕ ಪುನೀತರಾಗಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಂದಿರದ ಅಧ್ಯಕ್ಷ ಅಪ್ಪಾಸಾಹೇಬ ಚವ್ಹಾಣ ಮಾತನಾಡಿ, ಶ್ರೀ ಶಿರಡಿ ಸಾಯಿಬಾಬಾ ಅವರ 100ನೇ ಸಮಾಧಿ ಉತ್ಸವ ನಿಮಿತ್ತ ಮಂದಿರದಲ್ಲಿ 9 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮ, ಸತತ 24 ಗಂಟೆಗಳ ಕಾಲ ಭಜನೆ, ಪ್ರವಚನ ಮೊದಲಾದ ಕಾರ್ಯಕ್ರಮ ನಡೆಸಲಾಯಿತು ಎಂದು ಹೇಳಿದರು.

ಶ್ರೀ ಪ್ರದೀಪ ಗುರೂಜಿ, ಡಾ| ಚಂದ್ರಕಾಂತ ಮಡಗಾಂವಕರ ಮಾತನಾಡಿದರು. ಸದಾನಂದ ನಿರಂಜನ, ನರಸಿಂಗಸಾ ರತನ್‌, ಉಪಾಧ್ಯಕ್ಷ ಮಹಾದೇವ ಮಾಶ್ಯಾಳ, ಖಜಾಂಚಿ ಡಾ| ಟಿ.ಎಸ್‌. ಮೋಹನಕುಮಾರ, ನಿರ್ದೇಶಕರಾದ ಬಸವರಾಜ ಅಂಬಲಿ, ಅನಿಲಕುಮಾರ ಮಿಸ್ಕಿನ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next