ಹೈದರಾಬಾದ್: ಡಿಂಪಲ್ ಚೆಲುವೆ ಸಾಯಿಪಲ್ಲವಿ (Sai Pallavi)ಅವರ ಅಭಿನಯವನ್ನು ಮೆಚ್ಚದವರು ಕಡಿಮೆ. ʼಪ್ರೇಮಂʼನಲ್ಲಿ ಕಣ್ಸನ್ನೆಯಿಂದಲೇ ಸಿನಿಮಂದಿಯ ಮನಗೆದ್ದ ಸಾಯಿಪಲ್ಲವಿ ಇಂದು ಬಹುಭಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.
ಕಳೆದ ಕೆಲ ಸಮಯದಿಂದ ಸಾಯಿಪಲ್ಲವಿ ಅವರ ವೈಯಕ್ತಿಕ ಜೀವನದ ಬಗ್ಗೆ ನಾನಾ ಗಾಸಿಪ್ ಗಳು ಹರಿದಾಡಿದೆ. ಕೆಲ ಸಮಯದಿಂದ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿನ ಫೋಟೋ ವೈರಲ್ ಆಗಿ, ಸಾಯಿಪಲ್ಲವಿ ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಡೇಟಿಂಗ್ ಹಾಗೂ ರಿಲೇಷನ್ ವಿಚಾರದಲ್ಲಿ ಮತ್ತೊಮ್ಮೆ ಸಾಯಿಪಲ್ಲವಿ ಸುದ್ದಿಯಾಗಿದ್ದಾರೆ. ಪ್ರತಿಸಲಿಯೂ ಈ ರೀತಿಯ ವದಂತಿಗಳಿಗೆ ಸಾಯಿಪಲ್ಲವಿ ನಯವಾಗಿಯೇ ಇಲ್ಲವೆನ್ನುತ್ತಲೇ ಬಂದಿದ್ದಾರೆ.
ಇದೀಗ ಅವರ ರಿಲೇಷನ್ ಶಿಪ್ ಬಗ್ಗೆ ಮತ್ತೊಂದು ವಿಚಾರ ಹಬ್ಬಿದೆ. ಸಾಯಿಪಲ್ಲವಿ ವಿವಾಹಿತ ಪುರುಷನೊಬ್ಬನ ಜೊತೆ ಡೇಟ್ ಮಾಡುತ್ತಿದ್ದಾರೆ. ಆ ವ್ಯಕ್ತಿಗೆ ಎರಡು ಮಕ್ಕಳಿದ್ದಾರೆ ಎನ್ನುವ ಸುದ್ದಿಯನ್ನು ʼ ಸಿನಿಜೋಶ್ʼ ವರದಿ ಮಾಡಿದೆ.
ಈ ಸುದ್ದಿ ಸಾಯಿಪಲ್ಲವಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದು ಸಾಧ್ಯವೇ ಇಲ್ಲವೆಂದು ಅವರ ಅಭಿಮಾನಿಗಳು ವಾದಿಸುತ್ತಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬೀಳದೇ ಇರುವುದರಿಂದ ಈ ವಿಚಾರ ಸಿನಿರಂಗದ ಅಭಿಮಾನಿಗಳ ವಲಯದಲ್ಲಿ ಚರ್ಚಾ ವಿಚಾರವಾಗಿ ಮಾರ್ಪಟ್ಟಿದೆ.
ಸದ್ಯ ಸಾಯಿಪಲ್ಲವಿ ನಾಗಚೈತನ್ಯ ಅವರ ʼ ತಾಂಡೇಲ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಿವಕಾರ್ತಿಕೇಯನ್ ಅವರ ʼಅಮರನ್ʼ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.