Advertisement
ದೇಶದ 9 ರೈಲ್ವೇ ನಿಲ್ದಾಣಗಳಿಗೆ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ. ನೈಋತ್ಯ ರೈಲ್ವೇ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ಮುಖ್ಯ ನಿಲ್ದಾಣ ಗ್ರಾಹಕರಿಗೆ ಆರೋಗ್ಯಕರ ಜೀವನ ಕ್ಕಾಗಿ ಉತ್ತಮ ಆಹಾರ ಎನ್ನುವ ಧ್ಯೇಯ ವಾಕ್ಯದಡಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆ.
ರೈಲ್ವೇ ನಿಲ್ದಾಣವು “ಇಟ್ ರೈಟ್ ರೈಲ್ವೇ’ ಸ್ಟೇಶನ್ ಅಡಿ ನೋಂದಾಯಿಸಿದೆ. ಈ ವೇಳೆ ರೈಲ್ವೇ ಸಚಿವಾಲಯ ಸಂಸ್ಥೆಯೊಂದರ ಮೂಲಕ ನಡೆಸಲಾದ ಆಡಿಟ್‌ನಲ್ಲಿ ಗುಣಮಟ್ಟದ ಆಹಾರ ತಯಾರಿಕಾ ಮಾನದಂಡವನ್ನು ಸ್ಟಾಲ್‌ಗಳಲ್ಲಿ ಅಳವಡಿಸಿಕೊಂಡಿದ್ದರಿಂದ ಪ್ರಮಾಣ ಪತ್ರ ಲಭಿಸಿದೆ ಎಂದು ನೈರುತ್ಯ ರೈಲ್ವೇ ವಲಯ ಡಿವಿಜನಲ್ ಮ್ಯಾನೇಜರ್ ಕುಸುಮ ಹರಿಪ್ರಸಾದ್ ಹೇಳಿದ್ದಾರೆ.