Advertisement

ಪಿ.ನಾಗರಾಜುಗೆ ಸಹಕಾರ ರತ್ನಪ್ರಶಸ್ತಿ

06:44 PM Nov 12, 2020 | Suhan S |

ರಾಮನಗರ: ಪ್ರತಿ ಲೀಟರ್‌ ಹಾಲಿಗೆ ಪ್ರೋತ್ಸಾಹ ಧನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಇದನ್ನು ಪರಿಚಿಯಿಸಿದ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಅವರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಸಹಕಾರ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

Advertisement

ಸಹಕಾರ ಚಳವಳಿಯ ಬೆಳವಣಿಗೆ ಮತ್ತುಅವರು ಸಲ್ಲಿಸಿರುವ ಸೇವೆ ಗರುತಿಸಿ ಇದೆ ನ.14ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿನಡೆಯುವ 67ನೇ ಅಖೀಲ ಭಾರತ ಸಹಕಾರ ಸಪ್ತಾಹದಸಂದರ್ಭದಲ್ಲಿ ಸಿಎಂಬಿ.ಎಸ್‌.ಯಡಿಯೂರಪ್ಪ ಇವರಿಗೆ ಪ್ರಶಸ್ತಿ ನೀಡಿ ಗೌರಸಲಿದ್ದಾರೆ.

ಕಿರು ಪರಿಚಯ: ಪಿ.ನಾಗರಾಜು ರಾಮನಗರ ತಾಲೂಕಿನ ಕಸಬಾ ಹೋಬಳಿ ಮಾಯಗಾನಹಳ್ಳಿ ಗ್ರಾಮದ ಚಿಕ್ಕ ತಾಯಮ್ಮ ಪುಟ್ಟಸ್ವಾಮಯ್ಯನವರ ಪುತ್ರ. ಪ್ರೊ.ನಂಜುಂಡಸ್ವಾಮಿಯವರ ನೇತೃತ್ವದ ರೈತ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾರ್ವಜನಿಕ ಬದುಕು ಪ್ರಾರಂಭಿಸಿದವರು. 1999ರಲ್ಲಿ ಮಾಯಗಾನಹಳ್ಳಿಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. 2001-2006ರವರೆಗೆ ಬೆಂಗಳೂರು ಹಾಲು ಒಕ್ಕೂಟದಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2009-14ರವರೆಗೆ ಕೆಎಂಎಫ್ ಮಂಡಳಿ ನಿರ್ದೇಶಕರು. 2014-2019 ರವರೆಗೆ ಕೆಎಂಎಫ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಪಂಚಾಯ್ತಿ ಚುನಾಯಿತ ಸದಸ್ಯರಾಗಿಯೂ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ.

ಕೆ.ಎಂ.ಎಫ್ ಅಧ್ಯಕ್ಷರಾಗಿದ್ದ ವೇಳೆ ಹೈನೋದ್ಯಮಕ್ಕೆ ಪೂರಕವಾದ ಹೊಸ ಕಾರ್ಯಕ್ರಮಗ ಳನ್ನು ಅನುಷ್ಠಾನಗೊಳಿಸಿದ್ದಾರೆ. ಹೈನುಗಾರರಿಗೆ ಲಾಭದಾಯಕವಾಗುವಂತೆ ರಾಸುಗಳು ಕೇವಲ ಹೆಣ್ಣು ಕರುಗಳಿಗೆ ಜನ್ಮ ನೀಡುವಂತೆ ಲಿಂಗ ನಿರ್ಧಾರಿತಾ ವೀರ್ಯ ನಳಿಕೆಗಳನ್ನು ಅಳವಡಿ ಸುವ ಯೋಜನೆಯನ್ನು ಪಶು ವಿಜ್ಞಾನಿಗಳು ಸಹ ಶ್ಲಾ ಸಿ ದ್ದಾರೆ. ಕೃಷಿ ಕ್ಷೇತ್ರ ರೈತರ ಕೈ ಹಿಡಿಯದಿದ್ದಾಗ, ಹೈನೋದ್ಯಮದ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಪಿ.ನಾಗರಾಜು ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಮೂಲಕ ರೈತರ ಹೃದಯ ತಲುಪಿದ್ದಾರೆ. ಹಾಲು ಉತ್ಪಾದಕರ ಸಂಘಗಳ ಸದಸ್ಯರು ಮತ್ತು ಮಕ್ಕಳಿಗೆ ಪ್ರೋತ್ಸಾಹಕ ಕಾರ್ಯ ಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next