Advertisement

ಶಹಾಬಾದ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ

04:20 PM Mar 07, 2017 | Team Udayavani |

ಶಹಾಬಾದ: ನಗರವನ್ನು ಹಿಂದಿನ ಸರಕಾರ ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಿದೆ. ಆದ್ದರಿಂದ ಕೂಡಲೇ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಕಚೇರಿ ಪ್ರಾರಂಭಿಸಿ ತಾಲೂಕು ಕೇಂದ್ರವನ್ನಾಗಿ ರಚಿಸಬೇಕು ಎಂದು ಆಗ್ರಹಿಸಿ ಶಹಾಬಾದ ನಾಗರಿಕ ಹೋರಾಟ ಸಮಿತಿ ವತಿಯಿಂದ ನಗರದ ನೆಹರು ವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು. 

Advertisement

ಹೋರಾಟ ಸಮಿತಿ ನೇತೃತ್ವದಲ್ಲಿನಗರದ ಪ್ರಮುಖ ಬೀದಿಗಳಲ್ಲಿ ಬೃಹತ್‌ ಮೆರವಣಿಗೆ ನಡೆಸಲಾಯಿತು. ಬಳಿಕ ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಗರಿಕ ಹೋರಾಟ ಸಮಿತಿ ಕಾರ್ಯದರ್ಶಿಗಳಾದ ಲೋಹಿತ ಕಟ್ಟಿ ಹಾಗೂ ಶರಣು ವಸ್ತ್ರದ, ಹಿಂದಿನಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ತಮ್ಮ ಅಧಿಕಾರದ ಅವಧಿಯಲ್ಲಿ 43 ಹೊಸ ತಾಲೂಕು ಘೋಷಿಸಿದ್ದರು. 

ಅದರಲ್ಲಿ ಶಹಾಬಾದ ನಗರ ಕೂಡ ಒಂದಾಗಿದೆ. ನಂತರ ಅಧಿಕಾರಕ್ಕೆಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಗರದಲ್ಲಿ ತಾಲೂಕ ಕಚೇರಿ ಪ್ರಾರಂಭಿಸಲಿಲ್ಲ. ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾಗಿದೆ. ನಗರಸಭೆ ಹೊಂದಿದೆ. ನಗರದಲ್ಲಿ ಪೊಲೀಸ್‌ ಠಾಣೆ, ಡಿವೈಎಸ್‌ಪಿ ಕಚೇರಿ, ರೇಲ್ವೆ ನಿಲ್ದಾಣ, ಅಂಚೆ ಕಚೇರಿ, ಉಪತಹಶೀಲ್ದಾರ ಕಚೇರಿ, ಉಪಖಜಾನೆ ಕಚೇರಿ, ಎರಡು ಕೈಗಾರಿಕೆ,

ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ, ಆಸ್ಪತ್ರೆ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳು ಸೇರಿದಂತೆ ಇತರ ಸೌಲಭ್ಯಗಳು ಇವೆ.ಶಹಾಬಾದ ನಗರ ತಾಲೂಕಾಗಲು ಎಲ್ಲ ಅರ್ಹತೆ ಹೊಂದಿದೆ. ಸರ್ಕಾರ ಶಹಾಬಾದ ನಗರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ, ಕಚೇರಿಗಳನ್ನು ಅತಿ ಶೀಘ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. 

ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಮಹ್ಮದ್‌ ಅಲಿ ಜಮಾದಾರ, ಕಾರ್ಯದರ್ಶಿ ಕೃಷ್ಣಪ್ಪ ಕರಣಿಕ, ರಾಮಕುಮಾರ, ಬಸವರಾಜ ಮಯೂರ, ಸದಾನಂದ ಕುಂಬಾರ, ನಿಂಗಣ್ಣ ಹುಳಗೋಳಕರ್‌, ರಮೇಶ ಭಟ್ಟ, ಜಗನ್ನಾಥ ಎಸ್‌.ಎಚ್‌., ನಿಂಗಣ್ಣ ಜಂಬಗಿ, ಗುಂಡಮ್ಮ ಮಡಿವಾಳ, ಶೇಖ  ಬಾಬು ಉಸ್ಮಾನ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next