Advertisement

ಶೇಣಿ ರಂಗ ಚಕ್ರವರ್ತಿ: ಎನ್‌.ಎಂ. ಹೆಗ್ಡೆ

03:20 AM Jul 10, 2017 | Team Udayavani |

ಬೆಳ್ಮಣ್‌: ಯಕ್ಷಗಾನ ಅಚ್ಚ ಕನ್ನಡ, ಸ್ವತ್ಛ ಕನ್ನಡ, ಶುದ್ಧ ವ್ಯಾಕರಣವುಳ್ಳ ಸಮೃದ್ಧಿಯ ಭಾಷೆಯಾಗಿದೆ. ಯಕ್ಷಗಾನ ಕ್ಷೇತ್ರದ ದಂತಕತೆ ತನ್ನ ವಾಕ್‌ ವೈಭವದಿಂದ ರಂಗಚಕ್ರವರ್ತಿ ಸ್ಥಾನವನ್ನು ಅಲಂಕರಿಸಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣೆಯು ಪ್ರಶಂಸನೀಯ ಹಾಗೂ ಆದ್ಯ ಕರ್ತವ್ಯವೆಂದು ಯಕ್ಷಗಾನ ಪೋಷಕ, ಬೆಳ್ಮಣ್‌ ಕಾವೇರಿ ಬಿಲ್ಡರ್ನ ಎನ್‌.ಎಂ. ಹೆಗ್ಡೆ ಹೇಳಿದರು.

Advertisement

ಅವರು ರವಿವಾರ ಬೋಳ ವಂಜಾರಕಟ್ಟೆ ಶಾಲೆಯಲ್ಲಿ ಶ್ರೇಣಿ ಗೋಪಾಲಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ (ರಿ.) ಸುರತ್ಕಲ್‌ ಇವರ ವತಿಯಿಂದ ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಇವರ ಆಶ್ರಯದಲ್ಲಿ  ಶೇಣಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶೇಣಿ ಸಂಸ್ಮರಣಾ ಭಾಷಣ ಮಾಡಿದರು.

ಶಾಲೆಯ  ಸಂಚಾಲಕ ಅಕ್ಷಯ ಅಡ್ಯಂತಾಯ ಆಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಜೀವನ ಮೌಲ್ಯಗಳು ಸಿಗಬೇಕಾದರೆ ರಾಮಾಯಾಣ ಮಹಾಭಾರತ ಕಥೆಗಳು ಆದರ್ಶ. ಅದು ಸುಲಭವಾಗಿ ಎಲ್ಲಾ ವಿಭಾಗಗಳಲ್ಲಿ ಸಿಗುವಂತಹದ್ದು ಅದು ಯಕ್ಷಗಾನದಲ್ಲಿ ಮಾತ್ರ ಎಂದರು.

ಶೇಣೆ ಸಮ್ಮಾನ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಪ್ರಸಂಗಕರ್ತ ಬೋಳ ದುಗ್ಗಪ್ಪ ಆಚಾರ್ಯ, ವಂಜಾರಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಆಚಾರ್ಯ, ಕಟಪಾಡಿಯ ಕಲಾವಿದ ಜನಾರ್ದನ ಆಚಾರ್ಯ ಇವರಿಗೆ ದಂಪತಿ ಸಹಿತವಾಗಿ ನೀಡಲಾಯಿತು. ಯಕ್ಷಗಾನ ಸಂಘಟಕ ಎಂ. ಸದಾಶಿವ ರಾವ್‌ ನೆಲ್ಲಿ ಮಾರ್‌,ಉಪಸ್ಥಿತರಿದ್ದರು. 

ಇದೇ ಸಂದರ್ಭ ಪ್ರಾಯೋಜಕರಾದ  ಚಂದ್ರಶೇಖರ್‌ ಕೊಡಿಪಾಡಿಯವರನ್ನು ಗೌರವಿಸಲಾಯಿತು. ಉಪನ್ಯಾಸಕಿ ಸಂಗೀತ, ಶಿಕ್ಷಕ ಸುಪ್ರೀತಾ ಶೆಟ್ಟಿ,  ಜಯಶ್ರೀ ಸಮ್ಮಾನ ಪತ್ರ ವಾಚಿಸಿದರು. ಶೇಣಿ ಗೋಪಾಲಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ನ  ಪಿ.ವಿ. ರಾವ್‌ ಸ್ವಾಗತಿಸಿ, ಹಿರಿಯ ಕಲಾವಿದ  ಎಂ.ಕೆ ರಮೇಶ್‌ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ಯಕ್ಷಾಕ್ಷರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಾಧ್ಯಕ್ಷ ಬೋಳ ಶಿಲ್ಪಿ ಸುಧಾಕರ ಆಚಾರ್ಯ ನಿರೂಪಿಸಿ ವಂದಿಸಿದರು. ಬಳಿಕ ಪ್ರಸಿದ್ಧ ಕಲಾವಿದರಿಂದ “ಭೀಷ್ಮ  ವಿಜಯ’ ಯಕ್ಷಗಾನ ತಾಳಮದ್ದಲೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next