Advertisement
ನಗರದ ಗಾಂಧಿ ಮೈದಾನದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇಲ್ಲಿನ ಪೌರತ್ವ ಕಾಯ್ದೆ ಮಾನವತ್ವ, ದಲಿತ ಹಾಗೂ ಅಂಬೇಡ್ಕರ್ ಪರವಾಗಿ ಅನುಷ್ಠಾನಕ್ಕೆ ಬಂದಿರುವ ಕಾಯ್ದೆ. ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ದಲಿತ ವಿರೋ ಧಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಹರಿಹಾಯ್ದರು.
ತೊಳೆಯುವ ಕೆಲಸಕ್ಕೆ ಬಹುಸಂಖ್ಯಾತ ಪಾಕೇತರರು ಮಾತ್ರ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ರೂಪಿಸಿ ಅಲ್ಪಸಂಖ್ಯಾತರನ್ನು ನಿಕೃಷ್ಟವಾಗಿ ಕಾಣುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು. ಪರೋಕ್ಷವಾಗಿ ಹೇಳುವುದಕ್ಕಿಂತ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನ ದೇಶದವರಿಗೆ ಪೌರತ್ವ ಕೊಡಿ ಎಂದು ಕಾಂಗ್ರೆಸ್ ನೇರವಾಗಿ ಹೇಳಿ, ಸಂಸತ್ ಎದುರು ಧರಣಿ ನಡೆಸುವುದು ಒಳ್ಳೆಯದು. ಕಾಂಗ್ರೆಸ್ ಈ ದೇಶದ ಒಂದು ರಾಜಕೀಯ ಪಕ್ಷ ಎಂದು ಹೇಳಿಕೊಳ್ಳಲು ನಾಚಿಕೆಯಾಗುವ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಭಾರತೀಯರು ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
Related Articles
Advertisement
ಶಾಸಕ ಎಚ್. ಹಾಲಪ್ಪ ಮಾತನಾಡಿ, ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್, ಕೆಲವು ಬುದ್ಧಿಜೀವಿಗಳು, ಮುಸ್ಲಿಂ ಮುಖಂಡರು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಯ್ದೆ ಅನುಷ್ಠಾನದಿಂದ ಯಾರನ್ನೂ ದೇಶಬಿಟ್ಟು ಓಡಿಸುವುದಿಲ್ಲ. ಯಾರ್ಯಾರೋ ದೇಶದೊಳಕ್ಕೆ ಬರಲು ಭಾರತ ಸಾರ್ವಜನಿಕ ಗೋಮಾಳವಲ್ಲ. ಭಾರತವಾಸಿಗಳಾಗಬೇಕಾದರೆ ಇಲ್ಲಿನ ಪೌರತ್ವ ಅಧಿಕೃತವಾಗಿ ಪಡೆಯಲೇಬೇಕು. ಈ ಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಪ್ರತಿಯೊಬ್ಬರೂ ಬೆಂಬಲಿಸುವ ಅಗತ್ಯವಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಸೊರಬ ಶಾಸಕ ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿದರು. ಮಾಜಿ ಶಾಸಕ ಸ್ವಾಮಿರಾವ್, ಪ್ರಮುಖರಾದ ಗಿರೀಶ್ ಪಾಟೀಲ್, ಎಸ್. ದತ್ತಾತ್ರಿ, ಚೇತನರಾಜ್ ಕಣ್ಣೂರು, ಕೆ.ಆರ್. ಗಣೇಶಪ್ರಸಾದ್, ಕೆ.ಎಸ್. ಗುರುಮೂರ್ತಿ ಇನ್ನಿತರರು ಇದ್ದರು. ರಂಜಿನಿ ಪ್ರಾರ್ಥಿಸಿದರು. ಪ್ರಸನ್ನ ಕೆರೆಕೈ ಸ್ವಾಗತಿಸಿದರು. ಲೋಕನಾಥ್ ಬಿಳಿಸಿರಿ ವಂದಿಸಿದರು. ಸಂತೋಷ್ ಆರ್. ಶೇಟ್ ನಿರೂಪಿಸಿದರು.