Advertisement
ಹೌದು, ಕಾಶ್ಮೀರದಂಥ ಶೀತವಾತಾವರಣದಲ್ಲಿ ಮಾತ್ರ ಬೆಳೆಯುವ ದುಬಾರಿ ಸಾಂಬಾರ ಪದಾರ್ಥ ಎನಿಸಿದ ಕೇಸರಿಯನ್ನು ಈ ಯುವಕ ಬಯಲುಸೀಮೆಯಲ್ಲಿ ಹೇಗೆ ಬೆಳೆದಿರಬಹುದು ಎಂಬ ಕುತೂಹಲ ತಣಿಯಬೇಕಾದರೆ ನೀವು ದಾವಣಗೆರೆ ಸಮೀಪದ ಹಳೇಬಾತಿಯ ಗುಡ್ಡದ ಕ್ಯಾಂಪ್ ಕ್ರಿಶ್ಚಿಯನ್ ಕಾಲೋನಿಗೆ ಬರಬೇಕು. ಕಾಶ್ಮೀರ ಹೊರತುಪಡಿಸಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕೇಸರಿ ಬೆಳೆಯಲಾಗುತ್ತಿದೆ.
Related Articles
Advertisement
ಸಸಿಗಳನ್ನು ಇಡಲು ನಾಲ್ಕು ಹಂತದ ರ್ಯಾಕ್ (ಕಪಾಟುಗಳನ್ನು) ಜೋಡಿಸಿಟ್ಟು ಕೇಸರಿ ಕೃಷಿಗೆ ಮುಂದಡಿ ಇಟ್ಟ. ಇನ್ನು ಕಾಶ್ಮೀರದಲ್ಲಿ ಕೇಸರಿ ಬೀಜ ಮಾರಾಟ ಮಾಡುವ ರೈತರನ್ನು ಪತ್ತೆ ಹಚ್ಚಿ ಅಲ್ಲಿಗೂ ಹೋಗಿ ಕೆಜಿಗೆ 600ರೂ. ನಂತೆ 60 ಕೆಜಿ ಕೇಸರಿ ಬೀಜ ತಂದ. ಅಲ್ಲಿಂದ ಇಲ್ಲಿಗೆ ತರುವಷ್ಟರಲ್ಲಿ 15-20 ಕೆಜಿಯಷ್ಟು ಬೀಜ ಹಾಳಾಯಿತಾದರೂ ಉಳಿದ 40 ಕೆಜಿಯಷ್ಟು ಬೀಜ ಹಾಕಿ ಕೃಷಿಗೆ ಮುಂದಾದ. ಪ್ರಯೋಗಾರ್ಥ ಬಾತಿಯಲ್ಲಿರುವ ನಾಲ್ಕು ಕಡೆಯ ಮಣ್ಣು ಸಂಗ್ರಹಿಸಿ ಅದರಲ್ಲಿನ ಪೋಷಕಾಂಶಗಳನ್ನು ಪರೀಕ್ಷಿಸಿ ನಾಲ್ಕು ರೀತಿಯ ಮಣ್ಣನ್ನು ಕೃಷಿಗೆ ಬಳಸಿಕೊಂಡಿದ್ದಾನೆ.
ಯಾವ ಮಣ್ಣಿನಲ್ಲಿ ಕೇಸರಿ ಹೆಚ್ಚು ಉತ್ಕೃಷ್ಟವಾಗಿ ಬೆಳೆದಿದೆ ಎಂಬುದನ್ನು ಅರಿತು ಮುಂದಿನ ದಿನಗಳಲ್ಲಿ ಆ ಮಣ್ಣನ್ನೇ ಕೃಷಿಗೆ ಬಳಸುವ ಯೋಜನೆ ಹಾಕಿಕೊಂಡಿದ್ದಾನೆ. ಸಾವಯವ ಗೊಬ್ಬರದೊಂದಿಗೆ ಕೃಷಿ ಮಾಡುತ್ತಿದ್ದು ಅಂದಾಜು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಕೇಸರಿ ಕೃಷಿ ಕೈಗೊಂಡಿದ್ದಾನೆ. ಮೊದಲ ಪ್ರಯತ್ನದಲ್ಲೇ ಜಾಕೋಬ್ ಯಶಸ್ವಿಯಾಗಿದ್ದು ಈಗಾಗಲೇ 20 ಗ್ರಾಂನಷ್ಟು ಕೇಸರಿ ಜಾಕೋಬ್ ಕೈ ಸೇರಿದ್ದು ಅವರ ನಿರೀಕ್ಷೆ ಫಲ ಕೊಟ್ಟಂತಾಗಿದೆ. ಇನ್ನೂ 20-30 ಗ್ರಾಂನಷ್ಟು ಕೇಸರಿ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಮುಂದಿನ ವರ್ಷ ಫಸಲು ದುಪ್ಪಟ್ಟಾಗುವ ಆಶಾಭಾವ ಹೊಂದಿದ್ದಾನೆ.
ನೈಜ ಕೇಸರಿಗಿದೆ ಬೆಲೆ-ಬೇಡಿಕೆಕೇಸರಿ ಸೀಡ್ಸ್ ಆಗಸ್ಟ್‌ನಿಂದ ಆರಂಭವಾಗಿ ಅಕ್ಟೋಬರ್, ನವೆಂಬರ್‌ನಲ್ಲಿ ಹೂ ಬಿಡುತ್ತದೆ. ಹೂವಿನಲ್ಲಿ ಬಿಡುವ ಕೇಸರಿಯನ್ನು ಹೂವಿನಿಂದ ಬೇರ್ಪಡಿಸಬೇಕು. ಕಾಶ್ಮೀರದಲ್ಲಿ ನೆಲದಲ್ಲಿ ಕೇಸರಿಯನ್ನು ಬೆಳೆಯುತ್ತಾರೆ. ನಾನು ಒಂದು ಕೋಣೆಯಲ್ಲಿ ಕೃತಕವಾಗಿ ಬೆಳೆದಿದ್ದೇನೆ. ಎಸಿ ಹಾಕಿ ಒಂಭತ್ತು ಡಿಗ್ರಿ ಸೆಲ್ಸಿಯಸ್ ತಂಪು ವಾತಾವರಣ ಸೃಷ್ಟಿಸಿದ್ದೇನೆ. ಕೋಣೆಯ ತಂಪು ಹೊರ ಹೋಗದಂತೆ ಥರ್ಮಲ್ ಹಾಕಿ ಬಂದೋಬಸ್ತ್ ಮಾಡಿದ್ದೇನೆ. ಹೂವು ಬಿಡುವ ವೇಳೆ ಬೇರೆ ರೀತಿಯಲ್ಲೇ ತಾಪಮಾನ ಕೊಡಬೇಕು. ಆಗ ಮಾತ್ರ ಉತ್ತಮ ಬೆಳೆ ಬರಲು ಸಾಧ್ಯ. ಕೇಸರಿ ಬೆಲೆ ಮಾರುಕಟ್ಟೆಯಲ್ಲಿ ಅದರ ಗುಣಮಟ್ಟದ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಎ ಗ್ರೇಡ್ ಕೇಸರಿ ಒಂದು ಗ್ರಾಂಗೆ 1200 ರೂ. ಬೆಲೆ ಇದೆ. ಇನ್ನು ನಾನು ಬೆಳೆದ ಕೇಸರಿ ಮಾರಾಟ ಮಾಡಿಲ್ಲ. ಸ್ನೇಹಿತರು, ಅಕ್ಕಪಕ್ಕದವರಿಗಷ್ಟೇ ಮಾರಾಟ ಮಾಡಿದ್ದೇನೆ. ಮಾರುಕಟ್ಟೆಯಲ್ಲಿ ಸಿಗುವ ಕೇಸರಿಯಲ್ಲಿ ಅರ್ಧಕರ್ಧ ನಕಲಿ ಇರುವುದರಿಂದ ನೈಜ ಕೇಸರಿಗೆ ಉತ್ತಮ ದರ, ಬೇಡಿಕೆ ಎರಡೂ ಇದೆ. ನಾನು ಬೆಳೆದ ಕೇಸರಿಯ ಗುಣಮಟ್ಟ ಪರೀಕ್ಷಿಸಿ, ಪ್ರಮಾಣಪತ್ರ ಪಡೆದು ಮುಂದಿನ ದಿನಗಳಲ್ಲಿ ನನ್ನದೇ ಬ್ರ್ಯಾಂಡ್ ಮಾಡಿ ಮಾರುಕಟ್ಟೆ ಕಂಡುಕೊಳ್ಳುವ ಯೋಚನೆ ಇದೆ ಎನ್ನುತ್ತಾರೆ ಜಾಕೋಬ್ ಸತ್ಯರಾಜ್. ಜಾಕೋಬ್‌ನ ಕೇಸರಿ ಕೃಷಿ
ಕೇಸರಿಯ ಸೀಡ್ಸ್‌ನಲ್ಲಿ ಈ ವರ್ಷ ಹೂವು ಬಿಡುತ್ತಿದೆ ಎಂದರೆ ಬಲ್ಬ್ಸ್ ನಲ್ಲಿ ಎಲ್ಲ ರೀತಿಯ ಪ್ರೋಟಿನ್‌ಗಳನ್ನು ಅದು
ಹಿಡಿದಿಟ್ಟುಕೊಂಡಿರುತ್ತದೆ. ಇನ್ನು ಹೂವು ಬಿಡುವ ತನಕ ಬಲ್ಬ್ಸ್ ಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ, ಅದನ್ನು ತಂದು ಟ್ರೇನಲ್ಲಿ ಇಟ್ಟು ಸೂಕ್ತ ತಾಪಮಾನ ಕೊಟ್ಟರೆ ಹೂವು ಬಿಡುತ್ತದೆ. ಹೂವು ಬಿಟ್ಟ ಬಳಿಕ ಸೀಡ್ ಮಲ್ಟಿಫಿಕೇಷನ್ ಪ್ರೊಸೆಸ್ ಆದರೆ ಮಾತ್ರ ಅದನ್ನು ಮಣ್ಣಲ್ಲಿ ಹಾಕಬೇಕು. ಇನ್ನು ಮುಂದಿನ ಬೆಳೆಗೆ ನಮಗೆ ಸೀಡ್ಸ್ ಬೇಕಾದರೂ ನಾವು ಮಣ್ಣಲ್ಲಿ ಹಾಕಬೇಕಾಗುತ್ತದೆ. ಆಗ ತಾಯಿ ಬಲ್ಬ್ಸ್ ನಿಂದ ಬೇರೆ ಬಲ್ಬ್ಸ್ ಗಳಲ್ಲಿ ಹೆಚ್ಚು ಸೀಡ್ಸ್‌ಗಳು ಹುಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಹೂವು ಬಿಟ್ಟ ತಕ್ಷಣ ಅದರಲ್ಲಿಯೇ ಕೇಸರಿ ಇರುತ್ತದೆ. ಅದರಲ್ಲಿ ಹೂವಿನ ದಳ ಬೇರೆ, ಕೇಸರಿ ಬೇರೆ, ಕಾಂಡ ಬೇರ್ಪಡಿಸುತ್ತೇವೆ. ಕೇಸರಿಯ ಹೂವು ಔಷಧಿಗೆ ಬಳಕೆಯಾದರೆ, ಕೇಸರಿಯನ್ನು ಜನ ಬಳಕೆ ಮಾಡುತ್ತಾರೆ. ಕಾಂಡವನ್ನು ಸೌಂದರ್ಯವರ್ಧಕಕ್ಕೆ ಬಳಕೆ ಮಾಡುತ್ತಾರೆ ಎನ್ನುತ್ತಾರೆ ಜಾಕೋಬ್ ಸತ್ಯರಾಜ್.