Advertisement

ಬಿಜೆಪಿ ಸೇರಿದ ಸಾಧ್ವಿ ಪ್ರಗ್ಯಾ ಥಾಕೂರ್‌ ; ದಿಗ್ವಿಜಯ್‌ ಸಿಂಗ್‌ ವಿರುದ್ಧ ಸ್ಪರ್ಧೆ ಸಾಧ್ಯತೆ

12:52 PM Apr 18, 2019 | Hari Prasad |

ಭೋಪಾಲ್‌: ಸಾಧ್ವಿ ಪ್ರಗ್ಯಾ ಥಾಕೂರ್‌ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವನ್ನೂ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

Advertisement

ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಮೊದಲು ಪ್ರಗ್ಯಾ ಅವರು ರಾಜ್ಯದ ಹಿರಿಯ ಬಿಜೆಪಿ ನಾಯಕರಾದ ಶಿವರಾಜ್‌ ಸಿಂಗ್‌ ಚೌಹಾಣ್‌, ರಾಮ್‌ ಲಾಲ್‌ ಮತ್ತು ಪ್ರಭಾತ್‌ ಝಾ ಅವರನ್ನು ಭೋಪಾಲದಲ್ಲಿರುವ ಪಕ್ಷದ ಕಛೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಬಾರಿ ಭೋಪಾಲದಲ್ಲಿ ಚುನಾವಣೆ ರಾಷ್ಟ್ರೀಯತೆಯ ವಿಚಾರದ ಮೇಲೆ ನಡೆಯಲಿದ್ದು ಮತ್ತಿದು ‘ಧರ್ಮಯುದ್ಧ’ದ ಪ್ರಾರಂಭ ಎಂದು ಹೇಳಿದ್ದಾರೆ. ಮತ್ತು ಪಕ್ಷ ಬಯಸಿದರೆ ತಾನು ಭೋಪಾಲದಲ್ಲಿ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂಬ ಮಾತನ್ನೂ ಸಹ ಪ್ರಗ್ಯಾ ಥಾಕೂರ್‌ ಅವರು ಇದೇ ಸಂದರ್ಭದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next