Advertisement

ಹಿಂದೂ ಯುವತಿಯರೇ ಪರ್ಸ್ ನಲ್ಲಿ ಲಿಪ್‌ಸ್ಟಿಕ್ ಬದಲು ಚಾಕು ಇಟ್ಟುಕೊಳ್ಳಿ: ಸಾಧ್ವಿ ಪ್ರಾಚಿ

04:35 PM Feb 17, 2023 | Team Udayavani |

ಮಧ್ಯ ಪ್ರದೇಶ: ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಹೆಸರುವಾಸಿಯಾಗಿರುವ ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಅವರು ಹಿಂದೂ ಹುಡುಗಿಯರು ಬಾಚಣಿಗೆ ಮತ್ತು ಲಿಪ್‌ಸ್ಟಿಕ್ ಅನ್ನು ತಮ್ಮ ಪರ್ಸ್‌ನಲ್ಲಿ ಇಡಬಾರದು ಅದರ ಬದಲಿಗೆ ಚಾಕು ಇಟ್ಟುಕೊಳ್ಳಬೇಕು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.

Advertisement

ಹಿಂದೂ ಹುಡುಗಿಯರು ತಮ್ಮ ಪರ್ಸ್‌ನಲ್ಲಿ ಚಾಕು ಇಡಲು ಕಲಿತರೆ, ಅದರಿಂದ ಜಿಹಾದಿಗಳು ನಮ್ಮಿಂದ ದೂರವಿರುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ರತ್ಲಾಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಚಿ, “ಜಿಹಾದಿಗಳನ್ನು ಎದುರಿಸಲು ಹುಡುಗಿಯರು ತಮ್ಮ ಪರ್ಸ್ ಗಳಲ್ಲಿ ಲಿಪ್‌ಸ್ಟಿಕ್ ಮತ್ತು ಬಾಚಣಿಗೆ ಇಡುವ ಬದಲು ಚಾಕು ಇಟ್ಟುಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ.

ಎಲ್ಲಾ ಹಿಂದೂ ಮಹಿಳೆಯರು ತಮ್ಮನ್ನು ತಾವು ಕಾಪಾಡುವ ಹಂತಕ್ಕೆ ಬರಬೇಕು ಅಲ್ಲದೆ ಧೈರ್ಯಶಾಲಿಗಳಾಗಬೇಕು ಎಂದು ಹೇಳಿದ್ದಾರೆ.

ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಸಾಧ್ವಿ , “ಲವ್ ಜಿಹಾದಿಗಳು ನಿಮ್ಮ ಕತ್ತು ತೆಗೆಯಲು ಸಿದ್ಧರಿದ್ದರೆ, ನೀವು (ಹಿಂದೂ ಹುಡುಗಿಯರು) ಅದಕ್ಕೂ ಮೊದಲು ಅವರ ಕತ್ತನ್ನು ಕತ್ತರಿಸಬೇಕು” ಎಂದು ಹೇಳಿದರು.

Advertisement

ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ವಿಧಿವಶ

Advertisement

Udayavani is now on Telegram. Click here to join our channel and stay updated with the latest news.

Next