Advertisement

ಸಮಾಜಕ್ಕೆ ಸಾಧುಸಂತರ ಕೊಡುಗೆ ಅಪಾರ

08:21 PM Nov 16, 2020 | Suhan S |

ಭದ್ರಾವತಿ: ಜಗತ್ತಿಗೆ ಅನಾದಿ ಕಾಲದಿಂದಲೂ ಆಧ್ಯಾತ್ಮಿಕ ಮೌಲ್ಯ ಮತ್ತು ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡಿದವರು ಸಾಧು ಸಂತರು ಎಂದು ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶ್ರೀ ಮಠದ ಲಿಂಗೈಕ್ಯ ರಾಚೋಟೇಶ್ವರ ಶಿವಾಚಾರ್ಯರ ಮತ್ತುಲಿಂಗೈಕ್ಯ ಶ್ರೀ ಗುರುಸಿದ್ದ ಶಿವಾಚಾರ್ಯರ ಸ್ಮರಣೋತ್ಸವಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಂತರ ಸ್ಮರಣೆಯಿಂದ ಸಮಾಜದಲ್ಲಿ ಸಾಮರಸ್ಯ ಮೂಡಿಸಲುಸಾಧ್ಯ. ಹಿಂದೆ ಅವರ ಅನುಗಹ್ರದಿಂದ ಪರಿಸರ ಸೇರಿದಂತೆಸಮಾಜವು ಸುಸ್ಥಿತಿಯಲ್ಲಿತ್ತು. ಈಗಲೂ ಅಂತಹ ಪುಣ್ಯ ಪುರುಷರ ನಾಮ ಸ್ಮರಣೆಯಿಂದ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.

ಬಿಳಿಕಿ ಶ್ರೀಮಠದ ಪೀಠಾಧ್ಯಕ್ಷ ಶ್ರೀ ರಾಚೋಟೇಶ್ವರಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಠದ ಕಾರ್ಯಾಧ್ಯಕ್ಷ ಟಿ.ವಿ. ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.ತಾವರೆಕೆರೆ ಶಿಲಾಮಠದ ಡಾ| ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಶ್ರೀಮಠದಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಇದ್ದರು. ಸುರೇಶ್‌ ಶಾಸ್ತ್ರಿ, ಲೋಕೇಶ್‌ರಾವ್‌, ಅರ್ಜುನ್‌ರಾವ್‌, ಬಸವರಾಜ್‌, ಕುಮಾರ್‌, ಮೋಹನ್‌ ಮತ್ತಿತರ ಗ್ರಾಮದ ಮುಖಂಡರು ಇದ್ದರು.

ಬೆಳಗ್ಗೆ ಲೋಕ ಕಲ್ಯಾಣಾರ್ಥವಾಗಿ ಮತ್ತು ವಿಶ್ವಶಾಂತಿಗಾಗಿ ಹಾಗು ಕೋವಿಡ್ ಮುಕ್ತಿಗಾಗಿ ಮಹಾರುದ್ರಾ ಭಿಷೇಕ, ರುದ್ರಹೋಮ, ಗಣಹೋಮ, ಶಾಂತಿ ಹೋಮಾದಿಗಳನ್ನು ಕೀರ್ತೀಕುಮಾರ್‌ ಶಾಸ್ತ್ರಿ, ಆನಂದ್‌ ಶಾಸ್ತ್ರಿ, ಗಿರೀಶ್‌ ಶಾಸ್ತ್ರಿ, ಮಂಜುನಾಥ ಶಾಸ್ತ್ರಿ ನೆರವೇರಿ ಸಿದರು. ಮಠದ ವ್ಯವಸ್ಥಾಪಕ ಚಿದಾನಂದ ಸ್ವಾಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next