Advertisement

ನಾಳೆ ಯೋಧರಿಗೆ ಸದ್ಗುರು ಯೋಗ ಪಾಠ

09:15 AM Jun 20, 2018 | Karthik A |

ಜಮ್ಮು: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸಿಯಾಚಿನ್‌ ನಲ್ಲಿ ಜೂ.21ರಂದು ಅಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು 350 ಮಂದಿ ಯೋಧರಿಗೆ ಯೋಗ ಹೇಳಿ ಕೊಡಲಿದ್ದಾರೆ. ಜತೆಗೆ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯೂ ಆಗಿರಲಿದ್ದಾರೆ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಕಠಿನ ಸವಾಲುಗಳನ್ನು ಎದುರಿಸುವ ಬಗ್ಗೆ ತರಬೇತಿ ನೀಡಲಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗ ಗುರು ಸಿಯಾಚಿನ್‌ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷದ ವಿಚಾರ ಎಂದು ಹೇಳಿದ್ದಾರೆ. ಮಂಗಳವಾರವೇ ಅವರು ಸಿಯಾಚಿನ್‌ ತಲುಪಿದ್ದು, ಯೋಧರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಮ್ಮ ದೇಶದ ವೀರ ಯೋಧರು ಸಿಯಾಚಿನ್‌ ನಂಥ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಕರ್ತವ್ಯಕ್ಕೆಂದು ನಿಯೋಜಿತರಾಗಿದ್ದಾರೆ. ಅಲ್ಲಿ ಕರ್ತವ್ಯ ನಿರ್ವಹಿಸಲು ಮತ್ತು ಆರೋಗ್ಯ ಕಾಪಾಡಲು ಅವರಿಗೆ ಯೋಗ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದರ ಜತೆಗೆ ಜೂ.21ರಂದು ತಮಿಳುನಾಡಿನ 16 ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಉಪಯೋಗವನ್ನು ಕಲಿಸಲು ಸದ್ಗುರು ಜಗ್ಗಿ ವಾಸುದೇವ ರಾವ್‌ ಅವರ ಇಶಾ ಪ್ರತಿಷ್ಠಾನ ಮುಂದಾಗಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಖನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಪ್ರತಿಷ್ಠಾನ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next