Advertisement
ಸದಾಶಿವ ಸ್ವಾಮೀಜಿ ಕುಟುಂಬಸ್ಥರ ವಿವಾಹಕ್ಕೆಂದು ತೆರಳಿದ್ದರು. ಮಂಗಳವಾರ ರಾತ್ರಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ ಭಕ್ತರ ಮನೆಯಲ್ಲಿ ಮಲಗಿದ್ದರು. ಬೆಳಗ್ಗೆ 5 ಗಂಟೆ ವೇಳೆಗೆ ಪೂಜೆಗೆಂದು ಎಬ್ಬಿಸಿದಾಗ ಅವರು ಸಾವನ್ನಪ್ಪಿರುವುದು ಗೊತ್ತಾಯಿತು. ಸದಾಶಿವ ಸ್ವಾಮೀಜಿ ಪಾರ್ಥಿವ ಶರೀರವನ್ನು ಬುಧವಾರ ಸಂಜೆ 4 ಗಂಟೆಗೆ ಶ್ರೀಮಠಕ್ಕೆ ತರಲಾಯಿತು.ಮದ್ದೂರು, ಮಂಡ್ಯ, ಪಾಂಡವಪುರ ಪಟ್ಟಣ, ಚಾಗಶೆಟ್ಟಹಳ್ಳಿ, ಬೇಬಿ, ಚಿನಕುರಳಿ ಗ್ರಾಮದಲ್ಲಿ ಭಕ್ತರು
ಅಂತಿಮ ದರ್ಶನ ಪಡೆದರು. ಸದಾ ಶಿವ ಸ್ವಾಮೀಜಿ ಹಾಸನ ಜಿಲ್ಲೆಯ ಸತ್ತಿಗರಹಳ್ಳಿ ಗ್ರಾಮದವರು, ಬಾಲ್ಯದಿಂದಲೂ ಸಿದ್ಧಗಂಗಾಮಠದಲ್ಲಿಯೇ ಇದ್ದು ಶಿವಕುಮಾರ ಶ್ರೀಗಳಿಂದ ಶಿವದೀಕ್ಷೆ ಪಡೆದರು. ನಂತರ ಬೇಬಿಬೆಟ್ಟದ ಮರೀದೇವರು ಸ್ವಾಮೀಜಿ ಶಿಷ್ಯರಾದರು. ನಂತರ 1979-80ರಲ್ಲಿ ಬೇಬಿ
ಬೆಟ್ಟದ ಶ್ರೀರಾಮಯೋಗಿ ಮಠದ ಪೀಠಾಧ್ಯಕ್ಷರಾದರು.