ಮಂಡ್ಯ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖೀಲ ಕರ್ನಾಟಕ ಡಾ.ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟದ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿ ವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 29 ಉಪಜಾತಿಗಳು ಸೇರಿದಂತೆ ಮಾದಿಗ ಜನಾಂಗದವರಿಗೆ ಆದಿಜಾಂಬವ ಅಭಿವೃದ್ಧಿ ನಿಗಮವಿದ್ದು, ನಿಗಮಕ್ಕೆ ಹಣ ಬಿಡುಗಡೆಯಾದಲ್ಲಿ ಮಲತಾಯಿ ಧೋರಣೆಯಾಗುತ್ತಿದ್ದು, ಹೆಚ್ಚಿನ ಹಣ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ;- ಕಾಂಗ್ರೆಸ್ ಹಿಂದುಳಿದವರ ಉದ್ಧಾರ ಮಾಡಿಲ್ಲ: ಕೆ.ಎಸ್. ಈಶ್ವರಪ್ಪ
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಛಲವಾದಿ ಮತ್ತು ಮಾದಿಗರು ಆದಿಕರ್ನಾಟಕ, ಆದಿದ್ರಾವಿಡ ಎಂದು ಜಾತಿ ದೃಢೀಕರಣ ಮಾದಿಗರಿಗೆ ಸರ್ಕಾರಿ ಸೌಲಭ್ಯ ಪಡೆಯಲು ಗೊಂದಲವಾಗಿ ತೊಂದರೆಯಾಗುತ್ತಿದೆ. ಆದ ಕಾರಣ ಕಂದಾಯ ಇಲಾಖೆಯಿಂದ ಜಾತಿ ದೃಢೀಕರಣ ಪತ್ರದಲ್ಲಿ ಆದಿಕರ್ನಾಟಕ ಜೊತೆಗೆ (ಮಾದಿಗ) ಎಂದು ಜಾತಿ ದೃಢೀಕರಣ ಪತ್ರ ನೀಡುವಂತೆ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯ ಜಿಲ್ಲಾ ಮಟ್ಟದ ಡಾ.ಬಾಬು ಜಗಜೀವನರಾಂ ಭವನಕ್ಕೆ 5 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭ ಮಾಡಬೇಕು. ನಾಗಮಂಗಲ, ಮದ್ದೂರು ತಾಲೂಕುಗಳಲ್ಲಿ ಡಾ.ಬಾಬು ಜಗಜೀವನರಾಂ ಭವನಕ್ಕೆ ನಿವೇಶನ ಮಂಜೂರು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎನ್. ಆರ್.ಚಂದ್ರಶೇಖರ್, ಚನ್ನರಾಜು, ಲಿಂಗರಾಜು, ಕುಮಾರ್, ಸಿದ್ದಲಿಂಗಯ್ಯ, ಕೆಂಪಯ್ಯ, ಪುಟ್ಟರಾಜು ಇತರರಿದ್ದರು.