ಹೊಸದಿಲ್ಲಿ: 2016ರಲ್ಲಿ ಸಂಚಲನ ಮೂಡಿಸಿದ್ದ ಪನಾಮಾ ಪೇಪರ್ಸ್ ನಂತೆ ಇದೀಗ ‘ಪಂಡೋರಾ ಪೇಪರ್’ ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಇದರಲ್ಲಿ ಹಲವಾರು ಭಾರತೀಯ ಪ್ರಸಿದ್ಧ ವ್ಯಕ್ತಿಗಳ ಹೆಸರು ಉಲ್ಲೇಖಿಸಲಾಗಿದೆ.
ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರು ಕೂಡಾ ಪಂಡೋರಾ ಪೇಪರ್ಸ್ ನಲ್ಲಿದೆ. ದಿವಾಳಿ ಎಂದು ಘೋಷಿಸಿರುವ ಅನಿಲ್ ಅಂಬಾನಿ, ಬಯೋಕಾನ್ ಸಂಸ್ಥೆಯ ಕಿರಣ್ ಮುಂಜುದಾರ್ ಶಾ ಪತಿ ಸೇರಿದಂತೆ ಸುಮಾರು 300 ಭಾರತೀಯರನ್ನು ಹೆಸರಿಸಲಾಗಿದೆ.
ಸಚಿನ್ ತೆಂಡೂಲ್ಕರ್ ಅವರ ಹೆಸರು ಪನಾಮ ಪೇಪರ್ಸ್ ನಲ್ಲಿ ಬಹಿರಂಗಗೊಂಡ ಕೇವಲ ಮೂರು ತಿಂಗಳ ನಂತರ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ತನ್ನ ಅಸ್ತಿತ್ವವನ್ನು ನಗದೀಕರಣಗೊಳಿಸುವಂತೆ ಕೇಳಿಕೊಂಡಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:ಕಾಶ್ಮೀರ ಕಣಿವೆ ಕಥನ; ಶಾಂತಿಯುತ ಬದುಕಿನ ಕನಸು ಕೊನರಿರುವುದೇ ದೊಡ್ಡ ಬದಲಾವಣೆ
ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಕಿಸ್ಥಾನ್ ಪ್ರಧಾನಿ ಇಮ್ರಾನ್ ಖಾನ್ ಆಪ್ತ ಬಳಗ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಮಂದಿಯ ಮಾಹಿತಿಯಿದೆ. ಈ ಶ್ರೀಮಂತ ವ್ಯಕ್ತಿಗಳು ತೆರಿಗೆದಾರರ ಸ್ವರ್ಗ ಎನಿಸಿರುವ ದೇಶಗಳಲ್ಲಿ ಕಂಪೆನಿಗಳಲ್ಲಿ ಆರಂಭಿಸಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪಂಡೋರಾ ಪೇಪರ್ಸ್ ಹೇಳಿದೆ.