Advertisement

Para cricketer ಅಮೀರ್‌ ಹುಸೇನ್‌ ಭೇಟಿ ಮಾಡಿದ ಸಚಿನ್‌

11:38 PM Feb 24, 2024 | Team Udayavani |

ಶ್ರೀನಗರ: ಪ್ಯಾರಾ ಕ್ರಿಕೆಟರ್‌ ಒಬ್ಬರು ಬ್ಯಾಟಿಂಗ್‌ ಮಾಡುತ್ತಿದ್ದ ವೀಡಿಯೋ ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಎರಡೂ ಕೈಗಳು ಇಲ್ಲದೆಯೂ ಬ್ಯಾಟಿಂಗ್‌ ಮಾಡುತ್ತಿದ್ದ ಅವರ ಕ್ರಿಕೆಟ್‌ ಪ್ರೇಮಕ್ಕೆ ಸ್ವತಃ ಸಚಿನ್‌ ತೆಂಡುಲ್ಕರ್‌ ಅವರೇ ಮನ ಸೋತಿದ್ದರು. ಅಂದು ವೈರಲ್‌ ಆದ ವೀಡಿಯೋದಲ್ಲಿದ್ದ ರಿಯಲ್‌ ಹೀರೋ ಅಮೀರ್‌ ಹುಸೇನ್‌ ಲೋನ್‌ ಅವರನ್ನು ಸಚಿನ್‌ ಶನಿವಾರ ಭೇಟಿಯಾಗಿದ್ದಾರೆ.

Advertisement

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನವರಾದ 34ರ ಹರೆಯದ ಅಮೀರ್‌ ಹುಸೇನ್‌ಗೆ ಎರಡೂ ಕೈಗಳಿಲ್ಲ. ಏಳನೇ ವಯಸ್ಸಿನವರಾಗಿದ್ದಾಗ ನಡೆದ ಅಪಘಾತದಲ್ಲಿ ಅಮೀರ್‌ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಅಷ್ಟಾಗಿಯೂ ಅಮೀರ್‌ಗೆ ಕ್ರಿಕೆಟ್‌ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಕಾಲಿನಲ್ಲೇ ಬೌಲಿಂಗ್‌, ಭುಜ ಮತ್ತು ಕುತ್ತಿಗೆಯ ಸಹಾಯ ದಿಂದ ಬ್ಯಾಟಿಂಗ್‌ ಮಾಡುತ್ತಿದ್ದ ಅಮೀರ್‌ ಅವರ ವೀಡಿಯೋ ಜಾಲತಾಣದಲ್ಲಿ ಹರಿದಾಡಿತ್ತು. ವೀಡಿಯೋ ಕಂಡು ಸ್ಫೂರ್ತಿಗೊಂಡಿದ್ದ ಸಚಿನ್‌, ಅಮೀರ್‌ನನ್ನು ಭೇಟಿ ಮಾಡುವುದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಕಾಶ್ಮೀರಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದ ಸಚಿನ್‌, ಅನಂತ್‌ನಾಗ್‌ನ ಬಿಜ್ಬೇಹರದಲ್ಲಿರುವ ಅಮೀರ್‌ ಹುಸೇನ್‌ ಅವರ ಮನೆಗೂ ಭೇಟಿ ನೀಡಿದ್ದಾರೆ. ಸಚಿನ್‌ ಆಗಮನ ಕಂಡು ಅಮೀರ್‌ ಭಾವುಕರಾಗಿದ್ದಾರೆ. ಇದೇ ವೇಳೆ ಅಮೀರ್‌ಗೆ ಸಚಿನ್‌ ಕ್ರಿಕೆಟ್‌ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next