Advertisement

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

12:38 AM Mar 29, 2024 | Team Udayavani |

ಅಮರಾವತಿ: ನಾಯ ಕತ್ವ ಬದಲಾವಣೆ ವಿಚಾರವಾಗಿ ಆಂಧ್ರ ಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಸಿಎ) ವಿರುದ್ಧ ಹೇಳಿಕೆ ನೀಡಿದ್ದ ಕ್ರಿಕೆಟರ್‌ ಹನುಮ ವಿಹಾರಿಗೆ ಅಲ್ಲಿನ ಕ್ರಿಕೆಟ್‌ ಬೋರ್ಡ್‌ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.
ಕೆಲವು ದಿನಗಳ ಹಿಂದೆಯೇ ಸಭೆ ನಡೆಸಿದ್ದ ಎಸಿಎ, ಹನುಮ ವಿಹಾರಿಗೆ ನೋಟಿಸ್‌ ನೀಡಿದೆ. ಇದಕ್ಕೆ ವಿಹಾರಿ ಪ್ರತಿಕ್ರಿಯಿಸಿದ್ದಾರೆ.

Advertisement

ನಾನು ಬೇರೊಂದು ಕ್ರಿಕೆಟ್‌ ತಂಡದ ಪರ ಆಡಲು ಬಯಸಿದ್ದೇನೆ. ಹೀಗಾಗಿ ನಾನು ಎಸಿಎಯಿಂದ ನಿರಾಕ್ಷೇಪಣ ಪ್ರಮಾಣಪತ್ರಕ್ಕಾಗಿ ಕೋರಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದಿರುವುದಾಗಿ ವರದಿ ಹೇಳಿದೆ. ಈ ಬಾರಿಯ ರಣಜಿ ಆವೃತ್ತಿಯಲ್ಲಿ ಪ.ಬಂಗಾಳ ವಿರುದ್ಧದ ಆರಂಭಿಕ ಪಂದ್ಯದಲ್ಲಿ 30 ವರ್ಷದ ವಿಹಾರಿ, ಆಂಧ್ರಪ್ರದೇಶ ತಂಡದ ನಾಯಕತ್ವ ವಹಿಸಿದ್ದರು. ಅವರನ್ನು ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಕ್ಕಿಳಿಸಿ, ರಿಕ್ಕಿ ಭುಯಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ ವಿಹಾರಿ, ಎಸಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೆಂದೂ ನಾನು ಆಂಧ್ರಪ್ರದೇಶದ ಪರ ಆಡಲಾರೆ ಎಂದೂ ಹೇಳಿದ್ದರು. ಇದೇ ವಿಚಾರವಾಗಿ ವಿಹಾರಿ ವಿರುದ್ಧ ಎಸಿಎ ನೋಟಿಸ್‌ ಜಾರಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next