ಪಂಪ/ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಸೋಮವಾರ ಮಂಡಲ ಪೂಜೆ ಜತೆಗೆ ಬಾಗಿಲು ಮುಚ್ಚಲಿರುವಂತೆಯೇ ರವಿವಾರ ನಡೆದ ಬೆಳವಣಿಗೆಯಲ್ಲಿ ಒಟ್ಟು ಆರು ಮಂದಿ ಮಹಿಳೆಯರನ್ನು ದೇಗುಲ ಪ್ರವೇಶ ಯತ್ನದಿಂದ ಹಿಮ್ಮೆಟ್ಟಿಸಲಾಗಿದೆ. ಗಮನಾರ್ಹ ಅಂಶವೆಂದರೆ ಅವರೆಲ್ಲರೂ ತೆಲುಗು ಮಾತನಾಡುವ ಮಹಿಳೆಯರಾಗಿದ್ದಾರೆ. ಎಲ್ಲಾ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ಸೆ.28ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ 10-50 ವಯೋಮಿತಿಯ 12 ಮಂದಿ ಮಹಿಳೆಯರು ದೇಗುಲ ಪ್ರವೇಶಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಭಕ್ತರ ವೃಂದ ರವಿವಾರ ಶಬರಿಮಲೆ ಬೆಟ್ಟ ಹತ್ತಲು ಬಂದಿದ್ದ ತೆಲುಗು ಮಹಿಳೆಯರನ್ನು ತಡೆದಿದ್ದಾರೆ. ಆದರೆ, ಜನರ ಗುಂಪಿನಲ್ಲಿ ದೇಗುಲಕ್ಕೆ ಆಗಮಿಸಿದ್ದ ಮಹಿಳೆಯನ್ನು ಭಕ್ತರು ತರಾಟೆಗೆ ತೆಗೆದುಕೊಂಡ ಪರಿಣಾಮ ಅವರು ಮೂಛೆì ಹೋದ ಘಟನೆಯೂ ನಡೆದಿದೆ. ಬಾಲಮ್ಮ (47) ಎಂಬ ಮಹಿಳೆಯು ಜನರ ಗುಂಪಿನಲ್ಲಿ ಬಂದಿದ್ದನ್ನು ಗಮನಿಸಿದ ಭಕ್ತರು, ಅವರಲ್ಲಿದ್ದ ಐಡಿ ಕಾರ್ಡ್‌ಗಳಿಂದ ಅವರು 50 ವಯಸ್ಸಿನೊಳಗಡೆ ಇರುವುದನ್ನು ಅರಿತು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ವಾಕ್ಸಮರ ಉಂಟಾಗಿ ಒತ್ತಡ ತಾಳಲಾರದೆ ಮಹಿಳೆ ಮೂಛೆì ಹೋದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಇದಕ್ಕೂ ಮುನ್ನ, ಹೆಚ್ಚು ಕಡಿಮೆ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರನ್ನು ಭಕ್ತರು ತಡೆದರು. “”ತಮಗೆ ದೇಗುಲದ ಸಂಪ್ರದಾಯ ತಿಳಿದಿಲ್ಲವೆಂದೂ, ತಾವು ಸಂಪ್ರದಾಯ ಮುರಿಯಲು ಬಂದಿರಲಿಲ್ಲವೆಂದು ಹೇಳಿಕೆ ನೀಡಿದ ಮಹಿಳೆಯರು ಅಲ್ಲಿಂದ ಹಿಂದಿರುಗಿದರು. ನಿಳಕ್ಕಲ್‌ಗೆ ಅವರನ್ನು ವಾಪಸ್ ಕರೆತಂದ ಬಳಿಕ ಮಹಿಳೆಯರು ದೇಗುಲದ ಸಂಪ್ರದಾಯ ಮುರಿಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಕೇರಳದ ಆಡಳಿತಾರೂಢ ಎಲ್‌ಡಿಎಫ್ ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಿರುವ ಶಬರಿಮಲೆ ಕರ್ಮ ಸಮಿತಿ, ಕೇರಳದ ಎಲ್ಲಾ ಪೊಲೀಸ್ ಠಾಣೆಗಳ ಮುಂದೆ ನಾಮಜಪ ಯಾತ್ರೆ ಕೈಗೊಳ್ಳುವಂತೆ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ. ವಿವಾದವು ದಿನೇ ದಿನೆ ಕಾವು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ, ವಿಶೇಷ ಅಧಿವೇಶನ ಕರೆಯಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಫಾತಿಮಾಗೆ ಬಹಿಷ್ಕಾರ: ಇತ್ತೀಚೆಗೆ, ಶಬರಿಮಲೆ ಪ್ರವೇಶಿಸಲು ತೆರಳಿದ್ದ ಕೇರಳದ ಸಾಮಾಜಿಕ ಕಾರ್ಯ ಕರ್ತೆಯಾದ ರೆಹನಾ ಫಾತಿಮಾ ಅವರನ್ನು ಮುಸ್ಲಿಂ ಸಮುದಾಯದಿಂದ ಹೊರಹಾಕಲಾಗಿದೆ ಎಂದು ಕೇರಳ ಮುಸ್ಲಿಂ ಜಮ್ಮಾತ್ ಕೌನ್ಸಿಲ್ ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಕೌನ್ಸಿಲ್‌ನ ಅಧ್ಯಕ್ಷ ಎ. ಪೂಂಕುಂಜು, ಫಾತಿಮಾ ಅವರ ನಡೆ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರು ವುದಲ್ಲದೆ, ಹಿಂದೂ ಧರ್ಮದ ಸಂಪ್ರದಾಯಕ್ಕೆ ಅಪಚಾರ ಎಸಗುವ ಪ್ರಯತ್ನವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು “ಎರ್ನಾಕುಳಂ ಸೆಂಟ್ರಲ್ ಮುಸ್ಲಿಂ ಜಮ್ಮಾತ್’ಗೂ ಪತ್ರ ಬರೆದು ಫಾತಿಮಾ ಅವರನ್ನು ಮಹಲ್ಲು ಸದಸ್ಯತ್ವದಿಂದ ಕೈಬಿಡುವಂತೆ ಶಿಫಾರಸು ಮಾಡಿರುವುದಾಗಿ ತಿಳಿಸಿದ್ದಾರೆ.
ಕೇರಳ ವಿಧಾನಸಭೆ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮಾತನಾಡಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್ ತೀರ್ಪಿನಿಂದ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಅಧ್ಯಾದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯ ಎಸ್.ರಾಮಚಂದ್ರನ್ ಪಿಳ್ಳೆ ಕೇರಳ ಎಲ್ಲೆಡೆ ಅಯ್ಯಪ್ಪ ಭಕ್ತರಿಗೆ ಬೆಂಬಲ ಇಲ್ಲ. ಅವರು ನ್ಯಾಯಾಲಯದ ತೀರ್ಪಿನ ಅನುಷ್ಠಾನಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಪಂಪಾ ತೀರದಲ್ಲಿ ಸೆಕ್ಷನ್ 144 ಅನ್ನು ಉಲ್ಲಂ ಸಿದ ಆರೋಪದಡಿಯಲ್ಲಿ ಬಿಜೆಪಿಯ ಕೆಲ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಪಿಎಂ ಸದಸ್ಯರು ದೇಗುಲದ ಸಂಪ್ರದಾಯ ಮುರಿಯಲು ಮುಂದಾಗುತ್ತಿದ್ದಾರೆ. ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸುವ ಬಗ್ಗೆ ಸರಕಾರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಬೇಕು.
– ಪಿ.ಎಸ್. ಶ್ರೀಧರನ್ ಪಿಳ್ಳೆ ಕೇರಳ ಬಿಜೆಪಿ ಅಧ್ಯಕ್ಷ