ತಿರುವನಂತಪುರ: ಮುಂದಿನ ತಿಂಗಳಿಂದ ಶಬರಿಮಲೆ ದೇಗುಲ ತೆರೆಯಲಾಗುತ್ತದೆ. ಹೀಗಾಗಿ, ಅಲ್ಲಿ ಸಿದ್ಧತೆಗಳನ್ನು ನಡೆಸಲು ಕೇರಳ ಸರ್ಕಾರ ಕಾರ್ಯ ಯೋಜನೆ ಸಿದ್ಧಪಡಿಸಿದೆ.
ಪ್ರಸಕ್ತ ವರ್ಷ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಹೆಚ್ಚಿನ ರೀತಿಯ ಎಚ್ಚರಿಕೆ ವಹಿಸಲು ತೀರ್ಮಾನಿಸಲಾಗಿದೆ.
ಯಾತ್ರಾರ್ಥಿಗಳು ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ನಿಯಮಗಳು, ಯಾತ್ರಾರ್ಥಿಗಳಿಗೆ ಸ್ನಾನ-ಶೌಚ ಗೃಹಗಳ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಲು ಆರೋಗ್ಯ ಮತ್ತು ಕಂದಾಯ ಇಲಾಖೆಗಳು ಸನ್ನದ್ಧಗೊಂಡಿವೆ.
ಪಂಪಾ ನದೀ ತೀರದಲ್ಲಿ ಆಸ್ಪತ್ರೆ ನಿರ್ಮಾಣ, ಎರುಮೇಲಿಯಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕೇರಳ ಮುಜರಾಯಿ ಸಚಿವ ಕೆ.ರಾಧಾಕೃಷ್ಣನ್ ರಾಜ್ಯ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.
ಒಂದು ಬಾರಿಗೆ ಎಷ್ಟು ಮಂದಿ ಯಾತ್ರಾರ್ಥಿಗಳಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿರುವ ಚಾರ್‌ಧಾಮ್‌ಗೆ ಇ-ಪಾಸ್ ಕಡ್ಡಾಯ