Advertisement

ಶಬರಿಮಲೆ ತೀರ್ಪಿಗೆ ಬೆಂಬಲ;ಸ್ವಾಮಿ ಆಶ್ರಮದ ಮೇಲೆ ದಾಳಿ, ಕಾರಿಗೆ ಬೆಂಕಿ

12:10 PM Oct 27, 2018 | Team Udayavani |

ತಿರುವನಂತಪುರಂ:ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಬೆಂಬಲಿಸಿದ್ದ ತಿರುವನಂತಪುರದ ಕುಂಡಮನ್ ಕಡಾವೂವಿನಲ್ಲಿರುವ ಸ್ವಾಮಿ ಸಂದೀಪಾನಂದಾ ಗಿರಿ ಅವರ ಆಶ್ರಮದ ಮೇಲೆ ಅಪರಿಚಿತ ವ್ಯಕ್ತಿಗಳು ಶನಿವಾರ ನಸುಕಿನ ವೇಳೆ ದಾಳಿ ನಡೆಸಿರುವ ಘಟನೆ ನಡೆದಿದೆ.

Advertisement

ಆಶ್ರಮದೊಳಗೆ ನುಗ್ಗಿದ ದುಷ್ಕರ್ಮಿಗಳು ಎರಡು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿರುವುದಾಗಿ ವರದಿ ವಿವರಿಸಿದೆ. ಸ್ವಾಮಿ ಗಿರಿ ಅವರು ಭಗವದ್ಗೀತಾ ಶಾಲೆಯ ನಿರ್ದೇಶಕರಾಗಿದ್ದಾರೆ.

ಈ ದಾಳಿಯ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ, ತಂಝಾಮೋನ್ ತಂತ್ರಿ ಹಾಗೂ ಪಂದಳಂ ರಾಜಮನೆತನದವರ ಕೈವಾಡ ಇರುವುದಾಗಿ ಸ್ವಾಮಿ ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ಯಾರು ಸತ್ಯ ಹೇಳುತ್ತಾರೋ ಅವರನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರು ಘಟನೆ ಕುರಿತು ಮಾಹಿತಿ ನೀಡಿದ ನಂತರ ತನಗೆ ವಿಷಯ ತಿಳಿಯಿತು ಎಂದು ಹೇಳಿರುವುದಾಗಿ ಮಾತೃಭೂಮಿ ದೈನಿಕ ವರದಿ ಮಾಡಿದೆ.

ಸಂದೀಪಾನಂದ ಗಿರಿ ಸ್ವಾಮಿ ಅವರ ಆಶ್ರಮದ ಮೇಲೆ ನಡೆದಿರುವ ದಾಳಿ ಖಂಡನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದು, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಈ ರೀತಿ ದೈಹಿಕ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚಳವಾಗುತ್ತಿದೆ ಎಂದು ತಿಳಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next