Advertisement

ಮಕರ ವಿಳಕ್ಕುವಿಗಾಗಿ ತೆರೆದ ಶಬರಿಮಲೆ ದೇಗುಲ

02:53 AM Dec 31, 2020 | Team Udayavani |

ಶಬರಿಮಲೆ/ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲ ಬುಧವಾರ ಮತ್ತೆ ತೆರೆದುಕೊಂಡಿದೆ. ಜ.14ರಂದು ಮಕರ ಸಂಕ್ರಾಂತಿಯ ದಿನದಂದು ಮಕರ ವಿಳಕ್ಕು ಗೋಚರಿಸುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ದೇಗುಲ ತೆರೆಯಲಾಗಿದೆ. ಜ.20ರಂದು ಮತ್ತೆ ಪವಿತ್ರ ಕ್ಷೇತ್ರವನ್ನು ಮುಚ್ಚಲಾಗುತ್ತದೆ.

Advertisement

ಮುಖ್ಯ ಅರ್ಚಕ ವಿ.ಕೆ.ಜಯರಾಜ ಪೊಟ್ಟಿ ಜತೆ ಇದ್ದ ಮೂವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್‌ನಲ್ಲಿ ಇದ್ದಾರೆ. ಇದರಿಂದಾಗಿ ದೈನಂದಿನ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗುವುದಿಲ್ಲ. ಒಂದು ವೇಳೆ ಅವರಿಗೆ ಮುಂದಿನ ಐದು ದಿನಗಳ ಅವಧಿಯಲ್ಲಿ ಮತ್ತೆ ಸೋಂಕು ದೃಢಪಟ್ಟರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದಿದೆ ತಿರುವಾಂಕೂರು ದೇವಸ್ವಂ ಮಂಡಳಿ.

ಪ್ರಸಕ್ತ ಸಾಲಿನಲ್ಲಿ ಕೊರೊನಾ ಸೋಂಕು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರತಿ ದಿನ ಐದು ಸಾವಿರ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಜತೆಗೆ ಕೊರೊನಾ ನೆಗೆಟಿವ್‌ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರುವ ಬಗ್ಗೆ ಆದೇಶ ನೀಡಲಾಗಿದೆ. ಡಿ.26ರಂದು ಮೊದಲ ಹಂತದ ದೇಗುಲಕ್ಕೆ ಭೇಟಿ ನೀಡುವ ಕಾರ್ಯಕ್ರಮ ಮುಕ್ತಾ ಯವಾಗಿತ್ತು. ಇದೇ ವೇಳೆ ಕೇರಳದ ಎಲ್ಲ ದೇಗುಲಗಳಲ್ಲಿ ಸಾಂಪ್ರದಾ ಯಿಕ ಉತ್ಸವಗಳನ್ನು ನಡೆಸಲು ಸರಕಾರ ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next