Advertisement
ಗರ್ಭಗುಡಿಯ ಸಮೀಪದ ಗೇಟ್ ಮೂಲಕ ಮೊದಲ ಸಾಲಿಗೆ ಬಂದು ಅವರು ದೇವರ ದರ್ಶನ ಪಡೆಯಬಹುದು. ಮಕ್ಕಳ ಜತೆ ಓರ್ವ ರಕ್ಷಕನನ್ನು ಇದೇ ದಾರಿಯಲ್ಲಿ ಬಿಡಲಾಗುವುದು. ಪಂಪಾದಿಂದ ಮಲೆ ಏರಲಾರಂಭಿಸಿದ ಬಳಿಕ ಬಹಳ ಹೊತ್ತು ಕಾಯುತ್ತಾ ನಿಲ್ಲುವುದನ್ನು ಹೊರತುಪಡಿಸಲು ಈ ಪ್ರತ್ಯೇಕ ವ್ಯವಸ್ಥೆ ನಡೆಸಲಾಗಿದೆ.
ಗರ್ಭಗುಡಿಯ ಮುಂದೆ ಭಕ್ತರು ಮೊಬೈಲ್ ಮೂಲಕ ಚಿತ್ರೀಕರಿಸು ವುದನ್ನು ನಿಯಂತ್ರಿಸಬೇಕೆಂದು ಕೇರಳ ಹೈಕೋರ್ಟ್ ತಿಳಿಸಿದೆ. ಹದಿನೆಂಟು ಮೆಟ್ಟಿಲಿನಲ್ಲಿ ಪೊಲೀಸರು ಅಯ್ಯಪ್ಪನಿಗೆ ಬೆನ್ನು ಹಾಕಿ ನಿಂತು ಫೋಟೋ ತೆಗೆದಿರುವ ಬಗ್ಗೆ ನ್ಯಾಯಾಲಯ ವರದಿ ಕೇಳಿದೆ. ಪೊಲೀಸರ ಸೇವೆ ಇಲ್ಲಿ ಸ್ತುತ್ಯರ್ಹವಾಗಿದ್ದರೂ ಈ ರೀತಿ ವ್ಯವಹರಿಸುವುದು ಸೂಕ್ತವಲ್ಲ ಎಂದು ಜಸ್ಟೀಸ್ ಅನಿಲ್ ಕೆ. ನರೇಂದ್ರನ್ ಹಾಗೂ ಜಸ್ಟೀಸ್ ಎಸ್. ಮುರಳೀಕೃಷ್ಣ ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.