Advertisement

Airport; ಶಬರಿಮಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ

04:47 PM Apr 18, 2023 | |

ಪತ್ತನಂತಿಟ್ಟ: ಕೇಂದ್ರ ಸರ್ಕಾರ ಅಯ್ಯಪ್ಪಸ್ವಾಮಿ ಭಕ್ತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನಕ್ಕೆ ಸನಿಹದಲ್ಲಿ ಇರುವ ಕೊಟ್ಟಾಯಂ ಪ್ರದೇಶದಲ್ಲಿ ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ಯೋಜನೆಗೆ ನಾಗರಿಕ ವಿಮಾನಯಾನ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.

Advertisement

ಇದನ್ನೂ ಓದಿ:Apple Store; ಮುಂಬಯಿನಲ್ಲಿ ದೇಶದ ಮೊದಲ Apple ಸ್ಟೋರ್‌ ಗೆ ಸಿಇಒ ಟಿಮ್‌ ಕುಕ್ ಚಾಲನೆ

ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ಯೋಜನೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಕೇರಳದ ಇಂಡಸ್ಟ್ರೀಯಲ್‌ ಡೆವಲಪ್‌ ಮೆಂಟ್‌ ಕಾರ್ಪೋರೇಶನ್‌ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದ ನಂತರ ಈ ಬೆಳವಣಿಗೆ ನಡೆದಿದೆ.

2017ರಲ್ಲಿ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವಕ್ಕೆ ಕೇರಳ ಸರ್ಕಾರ ತಾತ್ವಿಕ ಅನುಮತಿ ನೀಡಿತ್ತು. ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿನ ಶಬರಿಮಲೆ ದೇವಳದಿಂದ 45 ಕಿಲೋ ಮೀಟರ್‌ ದೂರದಲ್ಲಿದೆ.

ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ಯೋಜನೆಗಾಗಿ ಕೊಟ್ಟಾಯಂನಲ್ಲಿ ಸೈಟ್‌ (ಸ್ಥಳ)ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸೋಮವಾರ ಸಂಜೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಟ್ವೀಟ್‌ ಮೂಲಕ ತಿಳಿಸಿತ್ತು.

Advertisement

ಪ್ರಸ್ತಾವಿತ ವಿಮಾನ ನಿಲ್ದಾಣ ಯೋಜನೆ ಅಭಿವೃದ್ಧಿಗಾಗಿ ಅಂದಾಜು 2,250 ಎಕರೆ ಭೂಪ್ರದೇಶವನ್ನು ಮೀಸಲಿಡಲಾಗಿದೆ. ಈ ಯೋಜನೆಯನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ನಿರ್ಮಿಸುವ ಗುರಿ ಹೊಂದಿರುವುದಾಗಿ ಕೇರಳ ಇಂಡಸ್ಟ್ರೀಯಲ್‌ ಡೆವಲಪ್‌ ಮೆಂಟ್‌ ಕಾರ್ಪೋರೇಶನ್‌ ತಿಳಿಸಿತ್ತು. ಈ ಯೋಜನೆಗೆ 4,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next