Advertisement

Sabarimala; ವ್ಯವಸ್ಥೆ ಕಲ್ಪಿಸುವಲ್ಲಿ ಸರಕಾರ ಸಂಪೂರ್ಣ ವಿಫಲ: ಕಾಂಗ್ರೆಸ್ ನಾಯಕ ಚೆನ್ನಿತ್ತಲ

05:23 PM Dec 15, 2023 | Vishnudas Patil |

ಎರ್ನಾಕುಲಂ: “ಶಬರಿಮಲೆ ನಮ್ಮ ದೇಶದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದ್ದು, ಜಾತ್ಯತೀತತೆಯ ಸಂಕೇತವಾಗಿದೆ, ಯಾರು ಬೇಕಾದರೂ ಅಲ್ಲಿಗೆ ಹೋಗಬಹುದು.ದುರದೃಷ್ಟವಶಾತ್, ಕೇರಳದ ಸರಕಾರವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಶಬರಿಮಲೆಯಲ್ಲಿ ಜನಜಂಗುಳಿ ಕುರಿತು ಮಾತನಾಡಿ, ”ವಿವಿಧ ರಾಜ್ಯಗಳಿಂದ ಆಗಮಿಸುವ ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಮುನ್ನೆಚ್ಚರಿಕೆ ವಹಿಸಿ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಬೇಕಿತ್ತು.ಅಸಮರ್ಪಕ ಸೌಲಭ್ಯಗಳೇ ಈ ಸಮಸ್ಯೆಗಳಿಗೆ ಕಾರಣವಾಗಿವೆ” ಎಂದರು.

ಇನ್ನಷ್ಟು ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ, ಸರಕಾರ ವಿಫಲವಾಗಿದ್ದು, ನೀರು ಮತ್ತು ನೈರ್ಮಲ್ಯ ಸೌಲಭ್ಯಗಳಿಲ್ಲದೆ ಯಾತ್ರಾರ್ಥಿಗಳು ದರ್ಶನಕ್ಕಾಗಿ 20 ಗಂಟೆಗಳ ಕಾಲ ಕಾಯಬೇಕಾಗಿದೆ” ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ ಅವರು ಎಕ್ಸ್ ಪೋಸ್ಟ್ ಮಾಡಿ ” ಕೇರಳದ ಎಲ್‌ಡಿಎಫ್ ಸರಕಾರ ಶಬರಿಮಲೆ ಯಾತ್ರೆಯ ಸಂಪೂರ್ಣ ಅವ್ಯವಸ್ಥೆಯನ್ನು ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ದುಃಖಕರವಾಗಿ ಕಡಿಮೆ ವರದಿ ಮಾಡಲಾಗಿದೆ. ಯಾತ್ರೆಯ ಮೂಲ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ, ಸಾಕಷ್ಟು ಪೊಲೀಸ್ ಪಡೆಗಳನ್ನು ನಿಯೋಜಿಸಲು ವಿಫಲವಾಗಿದೆ, ಸಾಕಷ್ಟು ಬಸ್ ಸೇವೆಗಳನ್ನು ವ್ಯವಸ್ಥೆ ಮಾಡಲು ವಿಫಲವಾಗಿದೆ ಮತ್ತು ಸಾಕಷ್ಟು ಮಟ್ಟದ ವೈದ್ಯಕೀಯ ಸೇವೆ, ಆಹಾರ ಮತ್ತು ನೀರನ್ನು ಒದಗಿಸುವಲ್ಲಿ ವಿಫಲವಾಗಿದೆ. ಇದು ದೆಹಲಿಗೆ ಸಮೀಪದಲ್ಲಿ ಸಂಭವಿಸಿದ್ದರೆ ಅದನ್ನು ರಾಷ್ಟ್ರೀಯ ಅವಮಾನ ಎಂದು ಬಿಂಬಿಸಲಾಗುತ್ತಿತ್ತು. ಇದನ್ನು ಏನೆಂದು ನಾವು ನೋಡುವ ಸಮಯ ಬಂದಿದೆ. ಸರಕಾರದ ಅಸಮರ್ಥತೆ, ನಿರ್ಲಕ್ಷ್ಯ ಮತ್ತು ನಿರ್ದಯತೆ ಕಂಡು ಬಂದಿದೆ. ಸರಕಾರ ಘೋಷಿಸಿದ ಎಲ್ಲಾ ಕ್ರಮಗಳು ತಡವಾಗಿವೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆಗಳು ಇಲ್ಲವೆಂಬ ವಿಚಾರ ಭಾರಿ ಚರ್ಚೆಗೆ ಗುರಿಯಾದ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸರಕಾರವು ಸಂಪೂರ್ಣ ಪರಿಸ್ಥಿತಿಯನ್ನು ಅತ್ಯಂತ ಗಂಭೀರತೆಯಿಂದ ನಿಭಾಯಿಸಿದೆ ”ಎಂದು ಬುಧವಾರ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next