Advertisement

ಶಬರಿಮಲೆ ವಿವಾದ: ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಕಾಯುವುದೊಳಿತು

06:00 AM Oct 24, 2018 | |

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯಲು ಇಲ್ಲಿಯವರೆಗೆ ನಡೆದ ಪ್ರತಿಭಟನೆಗಳು ಸುಪ್ರೀಂ ಕೋರ್ಟಿನ ತೀರ್ಪನ್ನು ಜಾರಿಗೊಳಿಸುವುದನ್ನು ನಿರಾಕರಿಸುವ ಒಂದು ಬಹಿರಂಗ ವಿಧಾನದಂತಾದವು. ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವೇ ಈ ರೀತಿಯ ಕ್ರಮ ಎದುರಾಗಿರುವಾಗ, ಕೆಳ ಹಂತದ ನ್ಯಾಯಾಲಯಗಳು ಇಂಥ ತೀರ್ಪು ನೀಡಿದ್ದರೆ ಏನಾಗುತ್ತಿತ್ತು ಎಂದು ನಾವು ಊಹಿಸಬಹುದು. ಕೆಳ ನ್ಯಾಯಾಲಯಗಳು ಇಂಥ ತೀರ್ಪು ನೀಡಿದ್ದರೆ ಸರಕಾರ (ರಾಜ್ಯ) ಅಥವಾ ಜನರು ಮೇಲ್ಮನವಿ ಸಲ್ಲಿಸುತ್ತಿದ್ದರು. ಆದರೆ ಸುಪ್ರೀಂಕೋರ್ಟ್‌ ಕೊನೆಯ ನ್ಯಾಯಾಲಯವಾಗಿದೆ. ಹಾಗೆಂದು ಸುಪ್ರೀಂ ಕೋರ್ಟ್‌ ತಪ್ಪೇ ಮಾಡುವುದಿಲ್ಲ ಎಂದಲ್ಲ. 

Advertisement

1951ರಿಂದ ಅರಂಭವಾಗಿರುವ ನಮ್ಮ ಸಂವಿಧಾನದ ಇತಿಹಾಸವನ್ನು ಗಮನಿಸಿದಾಗ, ಕೆಲವು ಬಾರಿ ಸಂವಿಧಾನ ತಿದ್ದುಪಡಿ ಮೂಲಕ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ರದ್ದುಪಡಿಸಿರುವುದು ತಿಳಿದು ಬರುತ್ತದೆ. 1951ರಲ್ಲಿ ಜಮೀನಾªರಿ ಪದ್ಧತಿ ರದ್ದು ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಷಯಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಮಧ್ಯಂತರ ಪಾರ್ಲಿಮೆಂಟ್‌ ಮೊದಲ ಬಾರಿಗೆ ಸಂವಿಧಾನಕ್ಕೆ ತಿದ್ದುಪಡಿ ತಂದಿತ್ತು. 

ಸುಪ್ರೀಂ ಕೋರ್ಟ್‌ ತೀರ್ಪನ್ನು ರದ್ದುಗೊಳಿಸುವ ಇತ್ತೀಚೆಗಿನ ಒಂದು ವಿಷಾದನೀಯ ಪ್ರಕರಣವೆಂದರೆ ದಲಿತ ದೌರ್ಜನ್ಯ ಕಾಯಿದೆಗೆ ಸಂಬಂಧಿಸಿದ್ದು. 1989ರ ದಲಿತ ದೌರ್ಜನ್ಯ ತಡೆ ಕಾಯಿದೆಗೆ ಸಂಬಂಧಿಸಿ 2018ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಭಾರೀ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ನ್ಯಾ| ಎ.ಕೆ. ಗೋಯಲ್‌ ಮತ್ತು ನ್ಯಾ| ಯು.ಯು. ಲಲಿತ್‌ ಅವರು ನೀಡಿದ್ದ ತೀರ್ಪಿನಲ್ಲಿ, ಈ ಕಾಯಿದೆ ಅಡಿಯಲ್ಲಿ ದೂರು ದಾಖಲಾದ ಕೂಡಲೇ ಬಂಧಿಸುವುದನ್ನು ತಡೆದರಲ್ಲದೆ, ಮೇಲ್ನೋಟಕ್ಕೆ ಆರೋಪ ಸಾಬೀತಾಗದೆ ಇದ್ದರೆ ನಿರೀಕ್ಷಣಾ ಜಾಮೀನು ನೀಡುವ ಅವಕಾಶವನ್ನು ಒದಗಿಸಿದ್ದರು. ಈ ತೀರ್ಪು ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಭಟನಕಾರರು ಆರೋಪಿಸಿ ಹಿಂಸೆಗಿಳಿದಿದ್ದರು. ಈ ತೀರ್ಪಿನ ವಿರುದ್ಧ ಮೋದಿ ಸರಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯವು ತನ್ನ ಹಿಂದಿನ ಆದೇಶಕ್ಕೆ ಬದ್ಧವಾಗಿತ್ತು. ಈ ತೀರ್ಪು ಅಮಾಯಕರನ್ನು ಅನಿರೀಕ್ಷಿತವಾಗಿ ಬಂಧಿಸುವುದನ್ನು ತಡೆಯುತ್ತದೆಯೇ ಹೊರತು ಕಾಯಿದೆಯನ್ನು ದುರ್ಬಲಗೊಳಿಸುವುದಿಲ್ಲ. ಅದು ಕಾಯಿದೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದರು. ಆದರೆ ಕೇಂದ್ರ ಸರಕಾರವು ಈ ತೀರ್ಪಿನ ವಿರುದ್ಧ ಕಾನೂನು ರೂಪಿಸಲು ಮುಂದಾಯಿತು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂಲ ಕಾಯ್ದೆಗೆ ತಿದ್ದುಪಡಿ ತರುವ ನಿರ್ಣಯವನ್ನು ತುರ್ತಾಗಿ ಕೈಗೊಳ್ಳಲಾಯಿತು.

ಮೋದಿ ಸರಕಾರ ಏನು ಮಾಡಿತ್ತೋ ಅದು 1985ರಲ್ಲಿ ಶಾ ಭಾನೋ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಅಮಾನ್ಯಗೊಳಿಸಲು ರಾಜೀವ ಗಾಂಧಿ ಸರಕಾರ ಮಾಡಿದ್ದ ಕ್ರಮವನ್ನು ನೆನಪಿಸುತ್ತದೆ. ತಾನು ದಲಿತಪರ ಎಂದು ಬಿಂಬಿಸಲು ಬಿಜೆಪಿ ಸರಕಾರ ಈ ರೀತಿ ವರ್ತಿಸಿದರೆ, ರಾಜೀವ ಗಾಂಧಿ ಸರಕಾರವು ಮುಸ್ಲಿಂ ವೋಟ್‌ಬ್ಯಾಂಕ್‌ ರಕ್ಷಿಸಲು ಹಾಗೆ ಮಾಡಿತ್ತು. ಆದರೆ ನ್ಯಾಯಮೂರ್ತಿಗಳ ನೇಮಕಕ್ಕೆ ಇರುವಂಥ ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಪಡಿಸಲು ಮುಂದಾದ ಬಿಜೆಪಿ ಸರಕಾರದ ಕ್ರಮಕ್ಕೆ ವಿರುದ್ಧವಾಗಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ್ನು ಪ್ರಶ್ನಿಸುವ ಧೈರ್ಯವನ್ನು ಸರಕಾರ ಮಾಡಲು ಮುಂದಾಗಿಲ್ಲ. 

ಕೇರಳದ ವಿಷಯವನ್ನು ಗಮನಿಸುವಾಗ, ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ, ತಿರುವಾಂಕೂರು ದೇವಸ್ವಂ ಬೋರ್ಡ್‌, ಎಡಪಕ್ಷದ ಆಡಳಿತದಲ್ಲಿರವ ಕೇರಳ ಸರಕಾರಕ್ಕೆ ಸುಪ್ರೀಂಕೋರ್ಟಿನ ತೀರ್ಪನ್ನು ಅನುಷ್ಠಾನಗೊಳಿಸುವುದು ಹೊರತು ಬೇರೆ ದಾರಿಯೇ ಇಲ್ಲ. ಸ್ವಯಂಪ್ರೇರಿತರಾಗಿ ದೇವಸ್ಥಾನ ಪ್ರವೇಶದಿಂದ ದೂರವಿರುವುದು ಅಥವಾ ದುರ್ಗಮ ಕಾಡು ದಾರಿ ಮತ್ತು ಜನಜಂಗುಳಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಧೈರ್ಯ ತೋರಿಸುವುದು ಮುಂತಾದ ವಿಷಯಗಳನ್ನು ಮಹಿಳೆಯರ ವಿವೇಚನೆಗೆ ಬಿಡುವುದು ಒಳಿತು. ಅಲ್ಲಿನ ಜನಸಂದಣಿಯಲ್ಲಿ ಮಹಿಳೆಯರು ಸಂಚರಿಸುವಾಗ ಪುರುಷರಿಂದ “ಅಪವಿತ್ರ ಮತ್ತು ಅನೈತಿಕ” ರೀತಿಯ ತಳ್ಳಾಟಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಪೊಲೀಸರಿಗೆ ಬೇಕಾಗಿರುವ ಕೆಲವು ಕ್ರಿಮಿನಲ್‌ಗ‌ಳು ಕೂಡ ಅಯ್ಯಪ್ಪ ಭಕ್ತರ ವೇಷ ಧರಿಸಿ ಶಬರಿಮಲೆ ಯಾತ್ರೆ ಕೈಗೊಳ್ಳುವುದನ್ನು ನಿತ್ಯ ಪತ್ರಿಕೆ ಓದುವವರು ಗಮನಿಸಿರಬಹುದು. ಈಗಾಗಲೇ ನಾಯರ್‌ ಸರ್ವಿಸ್‌ ಸೊಸೈಟಿ ಸೆ. 29ರ ತೀರ್ಪಿನ ವಿರುದ್ಧ ಪುನರ್‌ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದೆ. 

Advertisement

ಈ ವಿವಾದವನ್ನು ಬಳಸಿಕೊಂಡು ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳು ತಮ್ಮ ನೆಲೆಯನ್ನು ಭದ್ರಪಡಿಸಲು ಪ್ರಯತ್ನಿಸುವುದು ತಪ್ಪಾಗುತ್ತದೆ. ಅವರು ತಮ್ಮ ನೆಲೆ ಭದ್ರಪಡಿಸಲು ಬೇರೆ ಮಾರ್ಗಗಳನ್ನು ಅನುಸರಿಸಬಹುದು. ಕೇರಳದಲ್ಲಿ ಆರೆಸ್ಸೆಸ್‌ ಇತ್ತೀಚೆಗಿನ ದಶಕದಲ್ಲಿ ಬೆಳವಣಿಗೆ ಕಾಣುತ್ತಿದೆ. ಆದರೆ ಬಿಜೆಪಿಯು ಕಳೆದ ವಿಧಾನಸಭಾ ಚುನಾವಣೆಯಲ್ಲಷ್ಟೇ ತನ್ನ ಏಕೈಕ ಶಾಸಕನನ್ನು ವಿಧಾನಸಭೆಗೆ ಕಳುಹಿಸಲು ಶಕ್ತವಾಗಿದೆ. ಮಾಜಿ ಕೇಂದ್ರ ಸಚಿವ ಒ. ರಾಜಗೋಪಾಲ್‌ ಅವರು ಸದ್ಯ ಬಿಜೆಪಿಯನ್ನು ಕೇರಳ ವಿಧಾನಸಭೆಯಲ್ಲಿ ಪ್ರತಿನಿಧಿಸುವ ಏಕೈಕ ಶಾಸಕರಾಗಿದ್ದಾರೆ. ಕೇರಳದಲ್ಲಿರುವ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬಿಜೆಪಿಯನ್ನು ಇಲ್ಲಿಯವರೆಗೆ ಅಧಿಕಾರದಿಂದ ದೂರವಿರಿಸುತ್ತಲೇ ಬಂದಿದ್ದಾರೆ. 

10ರಿಂದ 50 (ಋತುಮತಿ ವಯಸ್ಸು) ವರ್ಷದ ಮಹಿಳೆಯರು ಶಬರಿಮಲೆಗೆ ಪ್ರವೇಶಿಸುವುದನ್ನು ವಿರೋಧಿಸುವವರು ಒಂದು ವಿಷಯವನ್ನು ತಿಳಿದಿರಬೇಕು, ಕೇರಳದ ದೇವಸ್ಥಾನ ಪ್ರವೇಶ ವಿಷಯದಲ್ಲಿ ಒಂದು ಪ್ರಗತಿಪರ ಇತಿಹಾಸವೇ ಇದೆ ಎಂದು. ವೈಕಂ ದೇವಸ್ಥಾನ ಪ್ರವೇಶ ಚಳವಳಿ (1924-25), ಕಡಿಮೆ ಪ್ರಚಾರ ಪಡೆದಿದ್ದ ಗುರುವಾಯೂರು ದೇವಸ್ಥಾನ ಪ್ರವೇಶ ಸತ್ಯಾಗ್ರಹ (1931-32)ಗಳು ಕೇರಳದ ಎರಡು ಪ್ರಮುಖ ಪ್ರಗತಿಪರ ಇತಿಹಾಸವಿರುವ ದೇವಸ್ಥಾನ ಪ್ರವೇಶ ಚಳವಳಿಗಳಾಗಿವೆ. ವೈಕಂನ ಶಿವ ದೇವಸ್ಥಾನಕ್ಕೆ ಈಳವರು ಮತ್ತು ದಲಿತರಿಗೆ ಪ್ರವೇಶ ನಿಷಿದ್ಧ ವಾಗಿತ್ತು. ಸಂತ ನಾರಾಯಣ ಗುರು ಮತ್ತು ಕುಮಾರ ಆಶಾನ್‌ ಕೂಡ ದೇವಸ್ಥಾನದ ರಸ್ತೆಯಲ್ಲಿ ನಡೆಯುವುದಕ್ಕೆ ತಡೆಯೊಡ್ಡಲಾಗಿತ್ತು. 

ಕೇರಳದಲ್ಲಿ ಮಾತೃಪ್ರಧಾನ ಸಮಾಜ ವ್ಯವಸ್ಥೆ ಇತ್ತು ಮತ್ತು ಹಿಂದುಗಳಲ್ಲೇ ಕೆಲವು ಜಾತಿಯವರಲ್ಲಿ ಪಿತ್ರಾರ್ಜಿತ ಸಂಪ್ರದಾಯದ ವ್ಯವಸ್ಥೆಯನ್ನು ಹೊಂದಿತ್ತು. ಇದರಲ್ಲಿ ಎರಡನೆಯದನ್ನು ಕೇರಳ ವಿಧಾನಸಭೆಯು 1975ರಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ನಿರ್ಮೂಲನ ಕಾಯ್ದೆ ಮೂಲಕ ರದ್ದುಗೊಳಿಸಿತ್ತು. ತಿರುವಾಂಕೂರಿನ ರಾಜಾಡಳಿತದಲ್ಲಿ ಸೇತು ಪಾರ್ವತಿ ಬಾೖ ಅವರು ಪ್ರಬಲ ಮಹಾರಾಣಿಯಗಿದ್ದರು. ಏನಿದ್ದರೂ ಶಬರಿಮಲೆಯ ದೇವರು ಅಖಂಡ ಬ್ರಹ್ಮಾಚಾರಿ ಮತ್ತು ಅವರು ಯಾವತ್ತು ಮಹಿಳೆಯರ ಪ್ರವೇಶವನ್ನು ಸಹಿಸುವುದಿಲ್ಲ ಎಂಬ ಗಾಢ ನಂಬಿಕೆ ಇದೆ. 

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿಸಿ ನೀಡಿರುವ ತೀರ್ಪನ್ನು ಇದೇ ರೀತಿಯ ತೀರ್ಪಿಗೆ ಒಳಗಾಗಿರುವ ಮಹಾರಾಷ್ಟ್ರದ ಶನಿ ಶಿಂಗಣಾಪುರ ಮತ್ತು ಮುಂಬಯಿಯಲ್ಲಿರುವ ವರ್ಲಿಯ ಹಾಜಿ ಅಲಿ ದರ್ಗಾ ಪ್ರಕರಣದೊಂದಿಗೆ ನೋಡಬೇಕು. ಹಾಜಿ ಅಲಿ ದರ್ಗಾವು ಸಂತರೊಬ್ಬರಿಗಾಗಿ 1431ರಲ್ಲಿ ನಿರ್ಮಾಣವಾಗಿದ್ದು (ಪೋರ್ಚುಗೀಸರಿಂದ ಮುಂಬಯಿ ನಗರ ಸ್ಥಾಪನೆ ಆಗುವುದಕ್ಕೂ ತುಂಬಾ ಮೊದಲು), ಅಲ್ಲಿಗೆ ಕೆಲ ವರ್ಗಗಳಿಂದೀಚೆಗೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಶನಿ ಶಿಂಗಣಾಪುರ ಮತ್ತು ಹಾಜಿ ಅಲಿ ದರ್ಗಾಕ್ಕು ಪುರುಷರಂತೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಿ ಬಾಂಬೆ ಹೈಕೋರ್ಟ್‌ ಅದೇಶ ಹೊರಡಿಸಿತ್ತು. ಇದನ್ನು 2016ರಲ್ಲಿ ಸುಪ್ರೀಂಕೋರ್ಟ್‌ ಎತ್ತಿ ಹಿಡಿಯಿತು. ಮುಸ್ಲಿಂ ನಾಯಕರೇ ಇರುವ ಹಾಜಿ ಅಲಿ ದರ್ಗಾ ಟ್ರಸ್ಟ್‌ ಕೋರ್ಟಿನ ಆದೇಶವನ್ನು ಜಾರಿಗೊಳಿಸಿತು. ಅದೇ ರೀತಿ ಶನಿ ಶಿಂಗಣಾಪುರ ದೇವಸ್ಥಾನದಲ್ಲೂ ಆಯಿತು. ಈ ಎರಡು ತೀರ್ಪುಗಳ ಹಿನ್ನೆಲೆಯಲ್ಲಿ ಮುಂಬಯಿಯ ಮಹಾಲಕ್ಷ್ಮೀ ದೇವಸ್ಥಾನದ ಗರ್ಭಗುಡಿಗೆ ಮಹಿಳೆಯರ ಪ್ರವೇಶಕ್ಕೆ ಸ್ವಯಂಪ್ರೇರಿತವಾಗಿ ಅನುಮತಿ ನೀಡಲಾಯಿತು. ಹಾಜಿ ಅಲಿ ದರ್ಗಾದ ಟ್ರಸ್ಟ್‌ ಮಹಿಳೆಯರ ಪ್ರವೇಶಕ್ಕೆ ಮೊದಲು ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್‌ ಎಂಬ ಮುಸ್ಲಿಂ ಮಹಿಳೆಯರ ಸಂಘಟನೆಯು ಹೈಕೋರ್ಟ್‌ ಮೊರೆ ಹೋಗಿತ್ತು.

ತನ್ನ ತೀರ್ಪಿಗೆ ವಿರುದ್ಧವಾಗಿ ಪ್ರತಿಭಟನೆ ಅಥವಾ ಬಂದ್‌ ಕರೆ ನೀಡಬಾರದು ಎಂದು ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್‌ ಹೇಳಿತ್ತು. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತಾನು ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಎದ್ದಿದ್ದ ದಂಗೆಯನ್ನು ನಿಗ್ರಹಿಸಲು ವಿಫ‌ಲವಾಗಿದ್ದ ಕರ್ನಾಟಕ ಮತ್ತು ತಮಿಳುನಾಡು ಸರಕಾರವನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಪ್ರತಿಭಟನೆ ನಡೆಸುವುದು ಜನರ ಮೂಲಭೂತ ಹಕ್ಕಾಗಿದ್ದರೂ, ಇದು ಕೆಲವು ನ್ಯಾಯಯುತ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ನ್ಯಾಯಾಲಯದ ತೀರ್ಪುಗಳನ್ನು ಜಾರಿಗೊಳಿಸುವುದನ್ನು ತಡೆಯುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎನ್ನುವುದು ಕಾನೂನಿನ ಬಗ್ಗೆ ವಿಶೇಷ ಜ್ಞಾನ ಇಲ್ಲದ ಜನಸಾಮಾನ್ಯರಿಗೂ ಗೊತ್ತಿದೆ. ಈ ವಿಷಯದಲ್ಲಿ ಕೇರಳ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರು ಈ ಬಗ್ಗೆ ಗಮನ ಸೆಳೆದಿದ್ದಾರೆ. 

ಶಬರಿಮಲೆ ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸದ ನೌಶಾದ್‌ ಅಹಮದ್‌ ಖಾನ್‌ ಎಂಬವರ ನೇತೃತ್ವದ ಇಂಡಿಯನ್‌ ಯಂಗ್‌ ಲಾಯರ್ ಅಸೋಸಿಯೇಶನ್‌ ಎಂಬ ವಕೀಲರ ಸಂಘಟನೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಾದ ಈ ತೀರ್ಪನ್ನು ಸುಪ್ರೀಂಕೋರ್ಟ್‌ ನೀಡಿದೆ. ಈ ತೀರ್ಪು ನೀಡಿರುವ ಸಾಂವಿಧಾನಿಕ ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ಮಾತ್ರ ಸರಿಯಾಗಿ ತೀರ್ಪು ನೀಡಿದ್ದಾರೆ ಹೊರತು ನಾಲ್ವರು ನ್ಯಾಯಮೂರ್ತಿಗಳ ಬಹುಮತದ ತೀರ್ಪು ಸರಿಯಲ್ಲ ಎಂದು ಬೇಕಾದರೂ ಹೇಳಬಹುದು. ಇದು ಆಳವಾದ ಧಾರ್ಮಿಕ ನಂಬಿಕೆ ಮತ್ತು ಭಾವನೆಯ ವಿಷಯವಾಗಿದ್ದು, ಕೋರ್ಟ್‌ ಮಧ್ಯಪ್ರವೇಶಿಸುವ ಸಾಮಾನ್ಯ ಪ್ರಕರಣವಲ್ಲ ಎಂದು ಇಂದೂ ಮಲ್ಹೋತಾ ಹೇಳಿದ್ದರು. ದೂರುದಾರರ ಪರವಾಗಿ ವಾದಿಸಿದ್ದ ನ್ಯಾಯವಾದಿ ಇಂದಿರಾ ಜೈಸಿಂಗ್‌ ಅವರು ವಾದ ಮಂಡನೆ ಮಾಡುತ್ತಾ ಒಂದು ಗುಂಪಿನ ಮಹಿಳೆಯರನ್ನು ದೇವಸ್ಥಾನ ಪ್ರವೇಶಿಸದಂತೆ ನಿರ್ಬಂಧಿಸುವುದು ಒಂದು ರೀತಿಯ ಅಸ್ಪೃಶ್ಯತೆಯಾಗಿದೆ ಎಂದು ಹೇಳಿದ್ದರು. ನ್ಯಾ| ಚಂದ್ರಚೂಡ್‌ ಅವರು ಕೂಡ ತಮ್ಮ ತೀರ್ಪಿನಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. 

ಈಗ ಶಬರಿಮಲೆ ವಿಷಯದಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಮರುಪರಿಶೀಲನೆ ಅರ್ಜಿ ಸಂಬಂಧಿಸಿ ನ್ಯಾಯಾಲಯ ಯಾವ ನಿಲುವು ತಳೆಯುತ್ತದೆ ಎಂಬುದಕ್ಕಾಗಿ ಕಾಯುವುದೇ ದೇಶದ ಮುಂದಿರುವ ಆಯ್ಕೆ. ಇದೇ ಹೊತ್ತಿಗೆ ಬಿಜೆಪಿ ಸರಕಾರವು ಕೂಡ ಶಬರಿಮಲೆ ವಿಷಯದಲ್ಲಿ ಹೊಸ ಕಾನೂನು ರಚಿಸುವ ಅವಸರದ ನಿರ್ಧಾರದಿಂದಲೂ ದೂರವಿಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next