Advertisement
ವಿಶ್ವದ ನಂ.2 ಆಟಗಾರ್ತಿ, ಬೆಲರೂಸ್‌ನ ಅರಿನಾ ಸಬಲೆಂಕಾ ಮತ್ತು ಜೆಕ್ ಗಣರಾಜ್ಯದ ಕ್ಯಾರೋಲಿನಾ ಮುಖಾಮುಖಿಯಾಗಲಿದ್ದಾರೆ. ಇಬ್ಬರಿಗೂ ಇದು ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಮೊದಲ ಸೆಮಿಫೈನಲ್ ಸಂಭ್ರಮವಾಗಿದೆ.
ಸ್ವಿಟೋಲಿನಾ ಅವರನ್ನು 3ನೇ ಸಲ ಎದುರಿಸಲು ಇಳಿದಿದ್ದ ಸಬಲೆಂಕಾ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇಲ್ಲಿ ಚಾಂಪಿ ಯನ್ ಆಗಿ ಮೂಡಿಬಂದರೆ ಸಬಲೆಂಕಾ ವಿಶ್ವದ ನಂ.1 ಆಟಗಾರ್ತಿಯಾಗಿ ವಿರಾಜಮಾನರಾಗಲಿದ್ದಾರೆ.
Related Articles
ಸಬಲೆಂಕಾ ಗೆಲುವಿಗೂ ಮೊದಲು ಪಾವುಚೆಂಕೋವಾ ಅವರನ್ನು ಕೂಟದಿಂದ ಹೊರದಬ್ಬಿ ಪ್ರತಿಕ್ರಿಯಿಸಿದ ಮುಕೊÕàವಾ, “ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ನಾನಿನ್ನೂ ಈ ಕೂಟದಲ್ಲಿ ಉಳಿದಿರುವುದಕ್ಕೆ ಖುಷಿಯಾಗುತ್ತಿದೆ. ಖಂಡಿತವಾಗಿಯೂ ಸಬಲೆಂಕಾ-ಸ್ವಿಟೋಲಿನಾ ನಡುವಿನ ಪಂದ್ಯ ವನ್ನು ವೀಕ್ಷಿಸಲಿದ್ದೇನೆ. ಮುಂದಿನೆರಡು ದಿನಗಳಲ್ಲಿ ಮತ್ತೂಂದು ಗ್ರೇಟ್ ಮ್ಯಾಚ್ ಏರ್ಪಡಲಿದೆ’ ಎಂದರು.
Advertisement
ಶ್ರೇಯಾಂಕ ರಹಿತ ಆಟಗಾರ್ತಿ ಯಾಗಿರುವ ಮುಕೊÕàವಾ ಇದಕ್ಕೂ ಮುನ್ನ 2021ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.
ಜ್ವೆರೇವ್-ಎಶೆವರಿ ಕ್ವಾರ್ಟರ್ ಫೈನಲ್ವಿಶ್ವದ 22ನೇ ರ್‍ಯಾಂಕಿಂಗ್‌ನ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಮತ್ತು ಆರ್ಜೆಂಟೀನಾದ ಥಾಮಸ್ ಮಾರ್ಟಿನ್ ಎಶೆವರಿ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಲಿದ್ದಾರೆ. ಅಲೆಕ್ಸಾಂಡರ್ ಜ್ವೆರೇವ್ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅವರನ್ನು 6-2, 6-4, 6-3ರಿಂದ ಸುಲಭದಲ್ಲಿ ಮಣಿಸಿದರು. 2 ಗಂಟೆ, 17 ನಿಮಿಷಗಳ ತನಕ ಇವರ ಆಟ ಸಾಗಿತು. ಇದು ಜ್ವೆರೇವ್ ಕಾಣುತ್ತಿರುವ 5ನೇ ಫ್ರಂಚ್ ಓಪನ್ ಕ್ವಾರ್ಟರ್ ಫೈನಲ್. ಐದರಲ್ಲಿ 2 ಸಲ ಸೆಮಿಫೈನಲ್ ತಲುಪಿದ್ದರು. ಪುರುಷರ ಕೊನೆಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದದಲ್ಲಿ ಥಾಮಸ್ ಮಾರ್ಟಿನ್ ಎಶೆವರಿ ಜಪಾನ್‌ನ ಯೊಶಿಹಿಟೊ ನಿಶಿಯೋಕ ಅವರನ್ನು 7-6 (11-9), 6-0, 6-1ರಿಂದ ಹಿಮ್ಮೆಟ್ಟಿಸಿದರು. ಇದು ಎಶೆವರಿ ಕಾಣುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್. ಸೆಮಿಫೈನಲ್‌ಗೆ ಜೊಕೋವಿಕ್
ಕೂಟದ ನೆಚ್ಚಿನ ಆಟಗಾರ ನೊವಾಕ್ ಜೊಕೋವಿಕ್ ಪುರುಷರ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಟಗಾರನೆನಿಸಿದ್ದಾರೆ. ಮಂಗಳವಾರದ ಕ್ವಾರ್ಟರ್ ಫೈನಲ್‌ನಲ್ಲಿ ಅವರು ರಷ್ಯಾದ ಕರೆನ್ ಕಶನೋವ್ ವಿರುದ್ಧ 4 ಸೆಟ್‌ಗಳ ಹೋರಾಟ ನಡೆಸಿ 4-6, 7-6 (7-0), 6-2, 6-4 ಅಂತರದ ಜಯ ಸಾಧಿಸಿದರು. ಕಾರ್ಲೋಸ್ ಅಲ್ಕರಾಜ್-ಸ್ಟೆಫನಸ್ ಸಿಸಿಪಸ್ ನಡುವೆ ಇನ್ನೊಂದು ಕ್ವಾರ್ಟರ್ ಫೈನಲ್ ನಡೆಯಲಿದೆ. ಇಲ್ಲಿನ ವಿಜೇತರು ಜೊಕೋವಿಕ್ ಅವರನ್ನು ಎದುರಿಸುವರು.